ಶಿರ್ವ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೀಡುವ ಕೊಂಕಣಿ ಗೌರವ ಪ್ರಶಸ್ತಿ-2025 ಮತ್ತು ಕೊಂಕಣಿ ಪುಸ್ತಕ ಪುರಸ್ಕಾರ -2025 ಪ್ರದಾನ ಕಾರ್ಯಕ್ರಮ ನಿರಂತರ ಉದ್ಯಾವರ ಮತ್ತು ಪರಿಚಯ ಪಾಂಬೂರು ಸಂಸ್ಥೆಯ ಸಹಕಾರದೊಂದಿಗೆ ಉದ್ಯಾವರ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ಭಾನುವಾರ ನಡೆಯಿತು.

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಕಥೋಲಿಕ್ ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮ ಉದ್ಘಾಟಿಸಿ, ಕೊಂಕಣಿ ಭಾಷೆ, ಸಾಹಿತ್ಯ, ಜನಪದ ಪ್ರಕಾರಗಳನ್ನು ಬೆಳೆಸುಲು ಕೊಂಕಣಿ ಅಕಾಡೆಮಿ ಒತ್ತು ನೀಡುತ್ತಿದೆ. ಕೊಂಕಣಿ ಲೇಖಕರು ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಭಾಷೆಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಕೊಂಕಣಿ ಸಮಾನತೆಯ ಭಾಷೆಯಾಗಿದ್ದು, ಹಿಂದೂ, ಕ್ರಿಶ್ಚಿಯನ್, ಮುಸ್ಲಿಮರೂ ಕೊಂಕಣಿ ಮಾತನಾಡುತ್ತಾರೆ ಎಂದರು.

ಉಡುಪಿ ಶೋಕಮಾತಾ ದೇವಾಲಯದ ಧರ್ಮಗುರು ಚಾರ್ಲ್ಸ್ ಮಿನೇಜಸ್, ಉದ್ಯಾವರ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಧರ್ಮಗುರು ಅನಿಲ್ ಡಿಸೋಜ, ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ., ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಸಪ್ನಾ ಕ್ರಾಸ್ತಾ, ಸುನಿಲ್ ಆಂಟನಿ ಸಿದ್ದಿ, ದಯಾನಂದ ಮಡ್ಕೇಕರ್ ಭಾಗವಹಿಸಿದ್ದರು.

ಕೊಂಕಣಿ ಅಕಾಡೆಮಿ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ರೊನ್ ರೊಚ್ ಕಾಸ್ಸಿಯಾ ಅವರಿಗೆ, ಕೊಂಕಣಿ ಕಲಾ ಪ್ರಶಸ್ತಿಯನ್ನು ರಾಮ್ ದಾಸ್ ದತ್ತಾತ್ರೇಯ ಗುಲ್ವಾಡಿ ಅವರಿಗೆ, ಕೊಂಕಣಿ ಜಾನಪದ ಪ್ರಶಸ್ತಿಯನ್ನು ಸೈರು ಪುತ್ತು ನಾಯ್ಕ ಅವರಿಗೆ ತಲಾ ₹50 ಸಾವಿರ ನಗದು ಸಹಿತ ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಯಿತು.

ಕೊಂಕಣಿ ಪುಸ್ತಕ ಪುರಸ್ಕಾರವನ್ನು ಕವಿತಾ ವಿಭಾಗದಲ್ಲಿ ಆಂಡ್ರ್ಯೂ ಎಲ್.ಡಿಕುನ್ಹಾ ಅವರಿಗೆ, ಲೇಖನ ವಿಭಾಗದಲ್ಲಿ ರೋಶನ್ ಮೆಲ್ಕಿ ಸಿಕ್ವೇರ ಅವರಿಗೆ, ಸಣ್ಣ ಕತೆಗಳು ವಿಭಾಗದಲ್ಲಿ ರಿಚಾರ್ಡ್ ಅಲ್ವಾರಿಸ್ ಅವರಿಗೆ ತಲಾ ₹ 25ಸಾವಿರ ನಗದು ಸಹಿತ, ಫಲಕದೊಂದಿಗೆ ನೀಡಿ ಗೌರವಿಸಲಾಯಿತು.

ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಸ್ವಾಗತಿಸಿದರು. ಪ್ರಕಾಶ್ ನೊರೋನ್ಹ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಹವಾಗಿ ಸಿದ್ಧಿ ಸಮುದಾಯ ನೃತ್ಯ, ಕುಡುಬಿ ನೃತ್ಯ, ಖಾರ್ವಿ ನೃತ್ಯ, ಬ್ರಾಸ್ ಬ್ಯಾಂಡ್, ಕೊಂಕಣಿ ಸಂಗೀತ ರಸಮಂಜರಿ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-126-1269206497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.