ಉಡುಪಿ: ‘ಇಂದು ಸಾಹಿತ್ಯ ರಚನೆಯ ಮೂಲ ಉದ್ದೇಶ ಸ್ಪರ್ಧೆಯಾಗಿದೆ. ಸ್ಪರ್ಧೆಗಾಗಿಯೇ ಕಥೆಗಳನ್ನು ಬರೆಯುವ ಕಥೆಗಾರರ ವರ್ಗ ಈಗ ಸೃಷ್ಟಿಯಾಗಿದೆ. ಸಾಹಿತ್ಯ ರಚನೆ ಪ್ರಶಸ್ತಿ ಕೇಂದ್ರಿತವಾಗಬಾರದು’ ಎಂದು ಚಿಂತಕ ಪ್ರೇಮಶೇಖರ ಅಭಿಪ್ರಾಯಪಟ್ಟರು.

ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಪೇಜಾವರ ಅಧೋಕ್ಷಜ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಡಿಸಂಭ್ರಮ ರಾಜ್ಯಮಟ್ಟದ ನಾಲ್ಕನೇ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇಂದು ಕೆಲವರು ಸಾಹಿತ್ಯದ ಮೇಲಿನ ಪ್ರೀತಿಯಿಂದ ಬರೆಯುತ್ತಿಲ್ಲ. ಬದಲಾಗಿ ಪ್ರಶಸ್ತಿಗಾಗಿ ಬರೆಯುತ್ತಾರೆ. ಖುಷಿಗಾಗಿ ಸಾಹಿತ್ಯ ರಚನೆ ಮಾಡಬೇಕು. ಪ್ರಶಸ್ತಿ ಆಸೆಯಿಂದ ಬರೆಯುವ ಕಥೆಗಾರ ಉತ್ತಮ ಕಥೆಗಾರನಾಗಲಾರ’ ಎಂದು ಹೇಳಿದರು.

‘ಅಜೆಂಡಾ ಪ್ರೇರಿತ ಸಾಹಿತ್ಯ ಚಟುವಟಿಕೆಗಳಿಗೆ ಹೊಂದಿಕೆಯಾಗುವ ಬರಹಗಾರರಿಗೆ ಇಂದು ಗೌರವ ಸಿಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಅಜೆಂಡಾಗಳ ಬಗ್ಗೆ ಎಚ್ಚರದಿಂದಿರಬೇಕು. ಕನ್ನಡ ಸಾಹಿತ್ಯ ಲೋಕವು ಕಿರಿದಾದ ಕೊಲ್ಲಿಯಾಗಿದೆ. ಅಲ್ಲಿ ಸುಂದರ ಮೀನುಗಳ ಜೊತೆಗೆ ಶಾರ್ಕ್, ಹಾವುಗಳೂ ಇವೆ’ ಎಂದರು.

‘ಪತ್ರಿಕೆಗಳು ಕಥೆಗಾರರಿಗೆ ಪ್ರೋತ್ಸಾಹ ನೀಡುತ್ತಿವೆ. ಅದೇ ರೀತಿ ಬರಹಗಾರರು ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಹಾಸ್ಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ, ‘ಇಂಗ್ಲಿಷ್ ಭಾಷೆಯ ಪ್ರಾಬಲ್ಯ ಕಡಿಮೆ ಮಾಡಲು ಸಾಧ್ಯವಾದಲ್ಲೆಲ್ಲಾ ನಾವು ಪ್ರಯತ್ನ ಮಾಡಿ ಮಾತನಾಡಬೇಕು ಮತ್ತು ಬರೆಯಬೇಕು’ ಎಂದು ಹೇಳಿದರು.

ಸಾಹಿತಿ ಶ್ರೀಕಾಂತ ಪತ್ರೆಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ವೆಂಕಟೇಶ ಶೇಷಾದ್ರಿ, ರಾಸು ವೆಂಕಟೇಶ್ ಉಪಸ್ಥಿತರಿದ್ದರು. ಜಿ.ಎಸ್. ಸರೋಜಾ ಸ್ವಾಗತಿಸಿದರು

ಕಾರ್ಯಕ್ರಮದಲ್ಲಿ ಬೆಂಗಳೂರಿನ ರಾಧಾ ಟೇಕಲ್, ಉಡುಪಿಯ ಶೋಭಾ ಹರಿಪ್ರಸಾದ್, ಚಿತ್ರದುರ್ಗದ ಶೈಲಾ ಜಯಕುಮಾರ್ ಅವರಿಗೆ ನುಡಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಧು ವಸ್ತ್ರದ ಅವರ ಕವನ ಸಂಕಲನ ‘ಚೈತ್ರದ ಚಿಗುರು’, ವಿಜಯ ನಿರ್ಮಲ ಅವರ ‘ಆಧುನಿಕ ಕನ್ನಡ ಸಾಧಕಿಯರು’, ಜಯಶ್ರೀ ರಾಜು ಅವರು ಸಂಪಾದಿಸಿದ ‘ನುಡಿ ಕಥಾಮಾಲಾ’, ಶ್ರೀಕಾಂತ ಪತ್ರೆಮರ ಅವರ ಕವನ ಸಂಕಲನ ‘ವ್ಯಕ್ತ ಪತ್ರೆಗಳು’, ಕಿರಣ್ ಹಿರಿಸಾವೆ ಅವರ ಕಥಾಸಂಕಲನ ‘ಆ ಐದು ನಿಮಿಷಗಳು’ ಹಾಗೂ ಅದರ ಹಿಂದಿ ಅನುವಾದ ಕೃತಿ ‘ವೋ ಪಾಂಚ್ ಮಿನಟ್’ ಬಿಡುಗಡೆಗೊಂಡಿತು. ಛಾಯಾ ಭಗವತಿ, ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-28-1518769340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.