ಉಪ್ಪಿನಂಗಡಿ: ‘ಕಂಬಳ ನಮ್ಮ ಸಂಸ್ಕೃತಿ, ಹೆಮ್ಮೆ ಮತ್ತು ಗೌರವ. ಇದು ರಾಷ್ಟ್ರಮಟ್ಟಕ್ಕೆ ಬೆಳೆಯಬೇಕು’ ಎಂದು ವಕೀಲ ಮಹೇಶ್ ಕಜೆ ಹೇಳಿದರು.

ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ, ಸರ್ಕಾರಿ ಜಾಗ ಇರುವ ಪ್ರತಿ ಊರಿನಲ್ಲಿಯೂ ಕಂಬಳದ ಕರೆ ನಿರ್ಮಿಸಿ ಕಂಬಳ ನಡೆಸಬಹುದು ಎಂದರು.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಅಭಿವೃದ್ಧಿಗೆ ₹352 ಕೋಟಿಯ ಯೋಜನೆ ರೂಪಿಸಲಾಗಿದೆ. ಅನುದಾನ ಲಭಿಸಿದರೆ ಮುಂದೆ ಇಲ್ಲಿ ಕಂಬಳ ನಡೆಸಲು ಸಾಧ್ಯವಾಗುವುದಿಲ್ಲ. ಆದರೆ, ಜಾಗ ಖರೀದಿಸಿಯಾದರೂ ಕಂಬಳ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಮೈಸೂರು, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಕಂಬಳ ನಡೆಸುವ ಕನಸು ಇದೆ. ಅನುಮತಿ ಲಭಿಸಿದರೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಎರಡು ಜೋಡಿ ಕಂಬಳ ಕೋಣಗಳನ್ನು ಭಾಗವಹಿಸುವಂತೆ ಮಾಡುವ ಯೋಜನೆಯಿದೆ ಎಂದರು.

ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿದರು. ಪ್ರಮುಖರಾದ ನಳಿನಿ ಪಿ.ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಸುದರ್ಶನ ನಾಯಕ್ ಕಂಪ, ಅರುಣಾ ದಿನಕರ್ ರೈ, ನಿಹಾಲ್ ಶೆಟ್ಟಿ, ಸುಮಾ ಅಶೋಕ್ ಕುಮಾರ್ ರೈ, ಮುರಳೀಧರ ರೈ ಮಠಂತಬೆಟ್ಟು, ಉಮೇಶ್ ಶೆಣೈ, ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ ಭಾಗವಹಿಸಿದ್ದರು.

ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ನಿರಂಜನ್ ರೈ ಮಠಂತಬೆಟ್ಟು ನಿರೂಪಿಸಿದರು.

ನೀರಿಗೆ ಎಳೆದೊಯ್ದ ಕೋಣ– ಯುವಕನ ರಕ್ಷಣೆ: ಕೋಣವೊಂದು ನದಿ ನೀರಿಗೆ ಇಳಿದಿದ್ದು, ಅದರೊಂದಿಗೆ ಅದರ ಪರಿಚಾರಕ ಯುವಕನೂ ಇಳಿದಿದ್ದ. ಕೋಣ ಏಕಾಏಕಿ ನೀರಿನಾಳಕ್ಕೆ ತೆರಳಿತು. ಕೋಣದ ಹಗ್ಗ ಕೈಬಿಡದ ಯುವಕನೂ ಮುಳುಗಿದ್ದ. ವಿಷಯ ತಿಳಿದ ಕಂಬಳ ನಿರೂಪಕರು, ಯುವಕನ ರಕ್ಷಣೆಗೆ ಧಾವಿಸಿ ಎಂದು ಸೂಚಿಸಿದರು. ಬೇರೆ ತಂಡದ ಕೋಣಗಳೊಂದಿಗೆ ಬಂದಿದ್ದ ರಕ್ಷಿತ್ ಮತ್ತು ಸಂತೋಷ್ ಯುವಕನನ್ನು ರಕ್ಷಿಸಿದರು.

ನೀರಿಗೆ ಇಳಿದಿದ್ದ ಕೋಣ ನದಿಯಲ್ಲಿ ಈಜಿ ದ್ವೀಪದಂಥ ಪ್ರದೇಶದಲ್ಲಿ ನಿಂತಿತ್ತು. ಆದರೆ, ಆ ಪ್ರದೇಶದಲ್ಲಿ ನದಿ ಆಳವಾಗಿದ್ದರಿಂದ ಕೋಣವನ್ನು ಹಿಡಿದುಕೊಂಡು ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಅರಿತ ಶಾಸಕ ಅಶೋಕ್ ಕುಮಾರ್ ರೈ ಬೋಟಿನ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಘೋಷಿಸಿದರು. ಸ್ವಲ್ಪ ಹೊತ್ತಿನಲ್ಲಿ ಕೋಣವೇ ಈಜಾಡುತ್ತ ಕಂಬಳದ ಗಂತಿನತ್ತ ಬಂದಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-29-1399968637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.