ಈ ಸಲದ ‘ಯಕ್ಷಸಂಕ್ರಾಂತಿ’ಯಲ್ಲಿ ಸುಮಾರು 9 ಮೇಳಗಳ ಕಲಾವಿದರಿದ್ದಾರೆ. ಅವರಲ್ಲದೆ ಅತಿಥಿ ದಿಗ್ಗಜರೂ ಇದ್ದಾರೆ. ಒಂದು ರಾತ್ರಿಯ ಮಿತಿಯೊಳಗೆ ಆಡಬಹುದಾದ ನಾಲ್ಕು ಪ್ರಸಂಗಗಳನ್ನು ಆಯ್ಕೆ ಮಾಡಲಾಗಿದೆ.
ಒಟ್ಟು ನಾಲ್ಕು ಪ್ರಸಂಗಗಳು ಸೆಪ್ಟೆಂಬರ್ 21ರಂದು ಶನಿವಾರ ರಾತ್ರಿ 10ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿವೆ. ಶ್ರೀಕೃಷ್ಣ ಸಂಧಾನ, ಸುಧನ್ವ, ಧರ್ಮಾಂಗಧ, ತಾಮ್ರಧ್ವಜ ಪ್ರದರ್ಶನಗಳು ನಡೆಯಲಿವೆ.
ಕೌರವ: ಕೃಷ್ಣಯಾಜಿ ಬಳ್ಕೂರು, ಕೃಷ್ಣ: ರಾಮಚಂದ್ರ ಹೆಗಡೆ ಕೊಂಡದಕುಳಿ. ಅರ್ಜುನ: ವಿದ್ಯಾಧರ್ ಜಲವಳ್ಳಿ. ಸುಧನ್ವ: ವಿಶ್ವನಾಥ ಹೆನ್ನಾಬೈಲ್, ಕೃಷ್ಣ; ರವಿ ಶೆಟ್ಟಿ ವಾಟರ್. ಭರತ: ಗಣಪತಿ ಹೆಗಡೆ ತೋಟಿಮನೆ, ಬಲಿ: ನವೀಶ್ ಶೆಟ್ಟಿ ಐರಬೈಲ್, ಧರ್ಮಾಂಗಧ : ಉದಯ ಹೆಗಡೆ ಕಡಬಾಳ್, ದೂತ: ದ್ವಿತೇಶ್ ಕಾಮತ್. ತಾಮ್ರಧ್ವಜ: ಆಜ್ರಿ ಗೋಪಾಲ ಗಾಣಿಗ, ಬ್ರಾಹ್ಮಣ: ರಮೇಶ್ ಭಂಡಾರಿ ಮತ್ತು ದ್ವಿತೇಶ್. ಅರ್ಜುನ: ಐರಬೈಲ್ ಆನಂದ ಶೆಟ್ಟಿ. ಮಯೂರಧ್ವಜ: ಸುನಿಲ್ ಹೊಲಾಡು.