ಯಲ್ಲಾಪುರ: ಬೇಂದ್ರೆ, ಕುವೆಂಪು ಮೊದಲಾದವರ ಕವಿತೆಗಳು ಅನಂತ ಅರ್ಥ ವಿಸ್ತಾರ ಹೊಂದಿದ್ದು , ಅವು ಮರು ಓದಿನಲ್ಲಿ ಬೇರೆಯದೇ ಆದ ಅರ್ಥಸಾಧ್ಯತೆ ಸ್ಪುರಿಸುತ್ತವೆ. ಪ್ರತಿಯೊಬ್ಬ ಓದುಗನೂ ತನ್ನದೇ ಆದ ಭಿನ್ನ ಅಥ೯ಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ವಿದ್ವಾನ್ ಗಣಪತಿ ಭಟ್ಟ ಕೋಲಿಬೇಣ ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪಟ್ಟಣದ ಟಿಎಂಎಸ್ ಸಭಾಭನವನದಲ್ಲಿ ಭಾನುವಾರ ಆಯೋಜಿಸಿದ್ದ ಗೀತ ಗಾಯನ ವ್ಯಾಖ್ಯಾನ ಕಾಯ೯ಕ್ರಮ ಅಕ್ಷರದೊಳಗಣ ಅಕ್ಷರದಲ್ಲಿ ಅವರು ಕನ್ನಡದ ಹಿರಿಯ ಕವಿತೆಗಳನ್ನು ವ್ಯಾಖ್ಯಾನಿಸಿದರು.

ಬೇಂದ್ರೆ, ಕುವೆಂಪು ಅವರ ಕವಿತೆಗಳಲ್ಲಿ ದೈವಿಕತೆ, ಅನುಭಾವ ಇದೆ. ಆಧ್ಯಾತ್ಮಿಕತೆ ಇದೆ. ಅವರ ಕವಿತೆಗಳು ಸಾವ೯ಕಾಲಿಕವಾದ ಕವಿತೆಗಳು ಎಂದರು.

ಮೇಘಾ ಎಸ್ ಭಟ್ಟ ಗುಳ್ಳಾಪುರ, ಹರ್ಷಿತಾ ಕೆ.ಭಟ್ ಕೋನಾಳ, ದಿಗಂತ ಭಟ್ಟ ಲಾಲ್ಗುಳಿ ಹಾಗೂ ರಾಜೀವ ತೇಲಂಗಾರ ಗೀತ ಗಾಯನ ನಡೆಸಿಕೊಟ್ಟರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ತಾಲ್ಲೂಕು ಸಹ ಕಾಯ೯ದಶಿ೯ ಪುಷ್ಪಾ ಮಾಳಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ಸುಜಾತಾ ಕಾಗಾರಕೊಡ್ಲು ನಿವ೯ಹಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷ ಜಿ.ಎಸ್. ಗಾಂವ್ಕರ, ಪ್ರಮುಖರಾದ ಮಮತಾ ಪ್ರಕಾಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-20-718895701

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.