ಅಮ್ಮ ನಾನು ಕನಸಿನಲ್ಲಿ
ಸಿಂಹವನ್ನು ನೋಡಿದೆ.
ಗರ್ಜಿಸುತಾ ಬಂದರೂ
ಹೆದರದೆ ನಿಂತಿದ್ದೆ
ಹೌದಾ ಕಂದಾ! ನನಗೀಗ
ಪ್ರಶ್ನೆಯೊಂದು ಕಾಡಿದೆ
ಹೆದರದಿಹೆ ನಿನ್ನ ಚೆಡ್ಡಿ
ಯಾಕೆ ಒದ್ದೆಯಾಗಿದೆ?
ನಿನ್ನೆ ದಿನ
ಇಲಿಯು ಬಂದು
ನನ್ನ ಕೋಣೆ ಹೊಕ್ಕಿತು
ಕಾರ್ಡ್‌ಲೆಸ್ ಮೌಸ್ ನೋಡಿ
ಅದಕುಪಾಯ ಹೊಳೆಯಿತು
ಬೆಕ್ಕಿನಿಂದ
ತಪ್ಪಿಸಿಕೊಳ್ಳಲು
ಬಾಲ ಅಡ್ಡಿ ಎಂದಿತು
ಬ್ಲೇಡಿನಿಂದ ಬಾಲ ಕೊಯ್ದು
ಜಾಣ್ಮೆಯನ್ನು ತೋರಿತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.