ಭಾರತೀಯ ನೌಕಾಪಡೆಯ 27ನೇ ಮುಖ್ಯಸ್ಥರಾಗಿ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಆಯ್ಕೆಯಾಗಿದ್ದಾರೆ. ಮೇ 31ರಂದು ಅಧಿಕಾರ ಸ್ವೀಕರಿಸಿದ್ದಾರೆ. ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಬೆಂಗಳೂರಿನವರು ಎನ್ನುವುದು ಹೆಮ್ಮೆಯ ವಿಚಾರ. ನಗರದ ಬಸವನಗುಡಿಯಲ್ಲಿ ವಾಸವಿದ್ದ ಅವರು, ಓದಿದ್ದು, ಬಿಶಪ್ ಕಾಟನ್ ಗಂಡುಮಕ್ಕಳ ಶಾಲೆಯಲ್ಲಿ.

ಭಾರತೀಯ ನೌಕಾಪಡೆಯಲ್ಲಿ ಸುಮಾರು ನಾಲ್ಕು ದಶಕ ಸೇವೆ ಸಲ್ಲಿಸಿರುವ ಅವರು, ತಮ್ಮ ನಾಯಕತ್ವ ಮತ್ತು ಕಾರ್ಯಾಚರಣೆಯಿಂದಲೇ ಗುರುತಿಸಿಕೊಂಡವರು.

ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧದಲ್ಲಿ ಪರಿಣತರಾಗಿರುವ ಅವರು, ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ಮೈಸೂರು ಸೇರಿದಂತೆ ಪ್ರಮುಖ ನೌಕಾ ಹಡಗುಗಳ ಕಮಾಂಡರ್ ಆಗಿದ್ದರು.

1987ರ ಜುಲೈ 1ರಂದು ಭಾರತೀಯ ನೌಕಾಪಡೆಗೆ ಸೇರಿದ್ದ ಸ್ವಾಮಿನಾಥನ್ ಅವರು, ಭಾರತದ ಹೆಮ್ಮೆಯ ಬೃಹತ್ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಎರಡನೇ ಕಮಾಂಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರೊಂದಿಗೆ ಐಎನ್ಎಸ್ ಮೈಸೂರು, ಐಎನ್ಎಸ್ ಕುಲಿಶ್ ಸೇರಿದಂತೆ ಒಟ್ಟು 5 ಮುಂಚೂಣಿ ಯುದ್ಧನೌಕೆಗಳ ನೇತೃತ್ವ ವಹಿಸಿದ್ದರು.

ನೌಕಾಪಡೆಯ ತರಬೇತಿ ವಿಭಾಗದ ಮುಖ್ಯಸ್ಥರಾಗಿ ಹಾಗೂ ನೌಕಾಪಡೆಯಲ್ಲಿ ಕಾರ್ಯಾಚರಣೆಯ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡುವ ‘ಇಂಡಿಯನ್ ನೇವಲ್ ಸೇಫ್ಟಿ ಟೀಮ್’ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ನೌಕಾಸೇನೆಯ ಅತ್ಯಂತ ಶಕ್ತಿಶಾಲಿ ವಿಭಾಗವಾದ ‘ವೆಸ್ಟರ್ನ್ ಫ್ಲೀಟ್’ನ ಕಮಾಂಡರ್ ಆಗಿ ಹಾಗೂ ನೌಕಾಪಡೆಯ ಉಪ-ಮುಖ್ಯಸ್ಥರಾಗಿ ಹಾಗೂ ವೆಸ್ಟರ್ನ್ ನೇವಲ್ ಕಮಾಂಡ್ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ

ಸ್ವಾಮಿನಾಥನ್ ಅವರ ಕಾರ್ಯವೈಖರಿಗೆ ಹಲವು ಅತ್ಯುನ್ನತ ಗೌರವಗಳನ್ನು ಪಡೆದುಕೊಂಡಿದ್ದಾರೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕಗಳಿಗೆ ಭಾಜನರಾಗಿದ್ದಾರೆ.

ಸದ್ಯ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಹಿಂದೂ ಮಹಾಸಾಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿರುವುದರಿಂದ ನೌಕಾಸೇನೆಯನ್ನು ಸದಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿಡುವುದು ಅನಿವಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.