ಮಾನವ ಪ್ರಭೇದದ ಉಗಮ ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಆಫ್ರಿಕಾ ಖಂಡದಲ್ಲಿ ಆಯಿತು ಎಂದು ವಿಜ್ಞಾನಿಗಳು ನಂಬುತ್ತಾರೆ. ಅಲ್ಲಿಂದ ಜಗತ್ತಿನ ವಿವಿಧ ದಿಕ್ಕುಗಳಿಗೆ ವಲಸೆ ಹೋದ ಮಾನವ, ಭಾರತದ ನೆಲವನ್ನೂ ತಲುಪಿದ. ಆ ಹೆಜ್ಜೆಗುರುತುಗಳು ಕಲ್ಲಿನ ಮೇಲೆ ಬಣ್ಣವಾಗಿ ಉಳಿದಿರುವ ಸ್ಥಳವೇ ಭೋಪಾಲ್ ಸಮೀಪದ ಭೀಮಬೆಟ್ಕಾ.

ಭೀಮಬೆಟ್ಕಾ ‘ರಾತಾಪಾನಿ’ ವನ್ಯಜೀವಿ ಅಭಯಾರಣ್ಯದ ಒಳಗೆ, ಸುಮಾರು 2000 ಹೆಕ್ಟೇರು ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ 750ಕ್ಕೂ ಹೆಚ್ಚು ಶಿಲಾಶ್ರಯಗಳಿದ್ದು, ಅವುಗಳಲ್ಲಿ ಕೆಲವು 30,000 ವರ್ಷಗಳಷ್ಟು ಹಳೆಯವು ಎಂದು ಪುರಾತತ್ವ ಅಧ್ಯಯನಗಳು ಸೂಚಿಸುತ್ತವೆ. ಶಿಲಾಯುಗದಿಂದ ಹಿಡಿದು ಕ್ರಿ.ಶ. ಸುಮಾರು 1000ನೇ ಇಸವಿಯವರೆಗೂ ವಿವಿಧ ಕಾಲಘಟ್ಟಗಳಲ್ಲಿ ಜನ ಇಲ್ಲಿ ವಾಸಿಸಿದ್ದರು.

ಬಂಡೆಕಲ್ಲುಗಳ ವಿಶಾಲ ಮಡಿಲುಗಳು ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡುವ ಸಹಜ ಆಶ್ರಯ. ಆ ಆಶ್ರಯಗಳಲ್ಲಿ ಬದುಕಿದ ಆದಿಮಾನವ ತನ್ನ ದೈನಂದಿನ ಜೀವನವನ್ನು ಕಲ್ಲಿನ ಮೇಲೆ ಬರೆದಿಟ್ಟಿದ್ದಾನೆ–ಬೇಟೆ, ನೃತ್ಯ, ಕುಟುಂಬ, ಕಾಡುಪ್ರಾಣಿಗಳು, ಸಮೂಹ ಚಟುವಟಿಕೆಗಳು… ಇವುಗಳೆಲ್ಲವೂ ಸ್ಥಳೀಯ ನೈಸರ್ಗಿಕ ವರ್ಣಗಳಿಂದ ಮೂಡಿಬಂದ ಚಿತ್ರಗಳು.

‘ಭೀಮಬೆಟ್ಕಾ’ ಎಂಬ ಹೆಸರಿನ ಹಿಂದೆ ಪೌರಾಣಿಕ ಕಥನವೂ ಇದೆ. ಮಹಾಭಾರತದ ಭೀಮನು ವಿಶ್ರಾಂತಿ ಪಡೆದ ಸ್ಥಳ ಎಂಬುವುದು ಜನಪ್ರಿಯ ನಂಬಿಕೆ.

ಮರೆವಿನೊಳಗಿಂದ ಬೆಳಕಿಗೆ

1888ರಲ್ಲಿ ಬ್ರಿಟಿಷ್ ಅಧಿಕಾರಿಗಳು ಈ ಸ್ಥಳವನ್ನು ಮೊದಲು ಬೌದ್ಧ ಸ್ಮಾರಕವೆಂದು ತಪ್ಪಾಗಿ ಗುರುತಿಸಿದ್ದರು. ಆದರೆ 1957ರಲ್ಲಿ ಪುರಾತತ್ವಜ್ಞರಾದ ವಿಷ್ಣು ಶ್ರೀಧರ್ ವಾಕಂಕರ್ ಇದರ ನಿಜಸ್ವರೂಪವನ್ನು ಜಗತ್ತಿಗೆ ಪರಿಚಯಿಸಿದರು. 1970ರಿಂದ ವ್ಯಾಪಕ ಸರ್ವೇಕ್ಷಣಾ ಕೆಲಸ ಹಾಗೂ ಅಧ್ಯಯನ ಕಾರ್ಯಗಳು ಆರಂಭವಾದವು.

ಅಧ್ಯಯನಗಳ ಪ್ರಕಾರ, ಇಲ್ಲಿ ಶಿಲಾಯುಗದಿಂದ ಕ್ರಿ.ಪೂ. ಎರಡನೇ ಶತಮಾನದವರೆಗೂ ನಿರಂತರ ಮಾನವ ವಾಸ್ತವ್ಯವಿತ್ತು. ನಂತರ ಕೃಷಿ ಮತ್ತು ಸ್ಥಿರ ಜೀವನ ಪ್ರಾರಂಭವಾದಂತೆ ಗುಹಾ ವಾಸ ಕಡಿಮೆಯಾದರೂ, ಮಾನವನ ಸಾನ್ನಿಧ್ಯ ಸಂಪೂರ್ಣ ನಿಂತಿರಲಿಲ್ಲ. ಸುಮಾರು 2000–1500 ವರ್ಷಗಳ ಹಿಂದೆ ಸ್ಥಳೀಯ ಆದಿವಾಸಿಗಳಿಂದ ಮೂಡಿದಂತಹ ಚಿತ್ರಗಳೂ ಇಲ್ಲಿ ಕಾಣಸಿಗುತ್ತವೆ. ಅಂದರೆ, ಭೀಮಬೆಟ್ಕಾ ಕೇವಲ ಒಂದು ಯುಗದ ಕಥೆಯಲ್ಲ; ಅನೇಕ ಯುಗಗಳ ಸಂವಾದ.

ಸಭಾಂಗಣದಿಂದ ಮೃಗಾಲಯದವರೆಗೆ

ಇಲ್ಲಿನ ಪ್ರಮುಖ ಶಿಲಾಶ್ರಯಗಳಲ್ಲಿ ‘ಸಭಾಂಗಣ ಗುಹೆ’ ವಿಶಾಲವಾದುದು. ಇದರ ಒಳಗೆ ಸಣ್ಣ ಮಗುವಿನ ಎಡಗೈ ಮುದ್ರೆ, ಬೇಟೆಯ ದೃಶ್ಯಗಳು, ಕಾಡುಪ್ರಾಣಿಗಳ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತವೆ. ಸಾವಿರಾರು ವರ್ಷಗಳ ಹಿಂದೆ ಮಗು ತನ್ನ ಕೈಯನ್ನು ಬಣ್ಣದಲ್ಲಿ ಮುಳುಗಿಸಿ ಕಲ್ಲಿನ ಮೇಲೆ ಒತ್ತಿದ್ದು ಇಂದಿಗೂ ನೋಡಬಹುದು.

‘ಮೃಗಾಲಯ ಗುಹೆ’ ಮತ್ತೊಂದು ವಿಶೇಷ ತಾಣ. ಇಲ್ಲಿ ಆನೆ, ಜಿಂಕೆ, ಖಡ್ಗಮೃಗ, ನವಿಲು, ಹಂದಿ, ಹಾವು, ಕಾಡುಕೋಣಗಳ ಚಿತ್ರಣಗಳಿವೆ. ಕಾಡಿನ ಜೀವಜಗತ್ತಿನ ವೈವಿಧ್ಯವನ್ನು ಬಣ್ಣದಲ್ಲಿ ಹಿಡಿದಿಟ್ಟಿರುವ ಈ ಗುಹೆ, ಆದಿಮಾನವನ ಪ್ರಕೃತಿ ಸಂವೇದನೆಯನ್ನು ಅನಾವರಣಗೊಳಿಸುತ್ತದೆ. 750ಕ್ಕೂ ಹೆಚ್ಚು ಶಿಲಾಶ್ರಯಗಳಿದ್ದರೂ, ಕೇವಲ 15–20 ಗುಹೆಗಳಷ್ಟೇ ಪ್ರವಾಸಿಗರಿಗೆ ತೆರೆಯಲಾಗಿದೆ.

ವಿಶ್ವ ಪಾರಂಪರಿಕ ಮುದ್ರೆ

ಭಾರತದ ಹಲವೆಡೆ ಶಿಲಾಶ್ರಯಗಳಿದ್ದರೂ, ಭೀಮಬೆಟ್ಕಾದಷ್ಟು ಹಳೆಯ ಮತ್ತು ನಿರಂತರ ಚಿತ್ರಣಗಳಿರುವ ಸ್ಥಳಗಳು ವಿರಳ. ಜಗತ್ತಿನ ಮಟ್ಟದಲ್ಲೂ ಇಂತಹ ಪುರಾತನ ಚಿತ್ರಕಲೆಗೆ ಸ್ಪೇನ್ ಮತ್ತು ಫ್ರಾನ್ಸ್ ದೇಶಗಳಲ್ಲಿನ ಕೆಲವು ಶಿಲಾಚಿತ್ರ ತಾಣಗಳಷ್ಟೇ ಸಮಾನ.

ಈ ವೈಶಿಷ್ಟ್ಯದ ಕಾರಣದಿಂದ 2003ರಲ್ಲಿ ಯುನೆಸ್ಕೊ ಭೀಮಬೆಟ್ಕಾ ಶಿಲಾಶ್ರಯಗಳನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತು. ಇದು ಕೇವಲ ಭಾರತೀಯ ಇತಿಹಾಸದ ಗೌರವವಲ್ಲ; ಮಾನವಕುಲದ ಸಂಯುಕ್ತ ಸ್ಮೃತಿಯ ಗೌರವ.

ಭೀಮಬೆಟ್ಕಾ ಪ್ರವಾಸವೆಂದರೆ ಕೇವಲ ಗುಹೆಗಳನ್ನು ನೋಡುವುದು ಅಲ್ಲ. ಅದು ಕಾಲಯಾನ. ಕಲ್ಲಿನ ಮೇಲೆ ಮೂಡಿದ ಆ ಮಿಡಿಮಿಡಿ ರೇಖೆಗಳು ನಮ್ಮ ಪೂರ್ವಜರ ಉಸಿರಾಟ. ಅವರ ಭಯ, ಅವರ ಹರ್ಷ, ಅವರ ಸಮೂಹಿಕ ಜೀವನ ಇವೆಲ್ಲವೂ ಬಣ್ಣಗಳಲ್ಲಿ ಉಳಿದಿವೆ. ಇತಿಹಾಸದಲ್ಲಿ, ಮಾನವನ ವಿಕಾಸದಲ್ಲಿ, ಕಲೆಯ ಆದಿಯಲ್ಲಿ ಆಸಕ್ತಿ ಇರುವ ಎಲ್ಲರೂ ತಪ್ಪದೆ ಭೇಟಿ ನೀಡಬೇಕಾದ ತಾಣ ಇದು.

ಪ್ರಯಾಣ ಯಾವಾಗ ಸೂಕ್ತ?

ಭೋಪಾಲ್ನಿಂದ ಸುಮಾರು 50 ಕಿಮೀ ದೂರ. ಕಾರಿನಲ್ಲಿ ಪ್ರಯಾಣಿಸಿದರೆ ಸುಮಾರು 60–90 ನಿಮಿಷಗಳು ಬೇಕು. ಬೆಳಗ್ಗೆ 7.00 ರಿಂದ ಸಂಜೆ 5.30 ಭೇಟಿಗೆ ಸೂಕ್ತ ಸಮಯ. ಬಿಸಿಲು ತಪ್ಪಿಸಲು ಬೆಳಿಗ್ಗೆ ಅಥವಾ ಸಂಜೆ ಸಮಯ ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.