ಹಿಂದಿನಿಂದಲೂ ಹೈನುಗಾರಿಕೆ ಕೃಷಿಯ ಅವಿಭಾಜ್ಯ ಅಂಗವಾಗಿತ್ತು. ದನದ ಕೊಟ್ಟಿಗೆ ಇಲ್ಲದ ಮನೆಗಳೇ ವಿರಳ. ಹಾಲು, ಮೊಸರು, ತುಪ್ಪದ ಅಗತ್ಯಕ್ಕೆ ಮಾತ್ರವಲ್ಲ, ಹೊಲದ ಕೆಲಸಗಳಿಗೆ ಎತ್ತು, ಕೋಣ, ಆಕಳುಗಳು ಅನಿವಾರ್ಯವಾಗಿದ್ದವು.

ಹುಲ್ಲು-ಮೇವು ಸಮೃದ್ಧವಾಗಿದ್ದ ಮಲೆನಾಡಿನಲ್ಲಿ “ಗೋವುಗಳಿಲ್ಲದ ಮನೆ ಎಂದರೆ ಮಕ್ಕಳಿಲ್ಲದ ಮನೆ” ಎಂಬ ಮಾತು ಕೂಡ ಪ್ರಸಿದ್ಧವಾಗಿತ್ತು. ಹಟ್ಟಿಯಲ್ಲಿದ್ದ ದನಕರುಗಳು ಮನೆಯ ಸದಸ್ಯರಂತೆ ಕಾಣಲಾಗುತ್ತಿತ್ತು. ಹೀಗಾಗಿ ದನಗಳನ್ನು ಸಾಕಲು ಮನೆಗಳಲ್ಲಿ ಹಲವು ರೀತಿಯ ವ್ಯವಸ್ಥೆಗಳನ್ನೂ ಮಾಡಲಾಗುತ್ತಿತ್ತು. ಅವುಗಳಲ್ಲಿ ಗಮನಾರ್ಹವಾದುದು ದನಗಳ ಆಹಾರ ಸಂಗ್ರಹಕ್ಕಾಗಿ ನಿರ್ಮಿಸುತ್ತಿದ್ದ ‘ಕಲ್ಬಿ’.

ಮಲೆನಾಡಿನ ಮನೆಗಳಲ್ಲಿ ಬಡವರಾಗಲಿ, ಶ್ರೀಮಂತರಾಗಲಿ ಮನೆಯ ಹೊರಭಾಗದ ಒಂದು ಮೂಲೆಯಲ್ಲಿ ದನದ ಕೊಟ್ಟಿಗೆ ಸಾಮಾನ್ಯ. ಮನೆಯವರ ಸಾಮರ್ಥ್ಯಕ್ಕೆ ತಕ್ಕಂತೆ ಕೊಟ್ಟಿಗೆಯ ನಿರ್ಮಾಣವಾಗುತ್ತಿತ್ತು. ಅದರೊಳಗೆ ಹುಲ್ಲು ಸಂಗ್ರಹಿಸಲು ಅಟ್ಟ, ಹಿಂಡಿ ಮತ್ತು ಇತರೆ ಆಹಾರ ಸಂಗ್ರಹಿಸಲು ವಿಶೇಷ ವ್ಯವಸ್ಥೆಗಳು ಕೂಡ ಇದ್ದವು. ಈ ವ್ಯವಸ್ಥೆಗಳ ನಡುವೆ ಪ್ರಮುಖ ಸ್ಥಾನ ಪಡೆದಿದ್ದುದೇ ‘ಕಲ್ಬಿ’.

ಮಲೆನಾಡಿನ ದೀರ್ಘ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡ ವ್ಯವಸ್ಥೆಯಿದು. ಮಳೆ ನೀರು ತಟ್ಟದ ಸುರಕ್ಷಿತ ಸ್ಥಳದಲ್ಲಿ ‘ಕಲ್ಬಿ’ಯನ್ನು ನಿರ್ಮಿಸುತ್ತಿದ್ದರು. ಸಾಮಾನ್ಯವಾಗಿ ಸುಮಾರು ಏಳು ಅಡಿ ಉದ್ದ, ಮೂರೂವರೆ ಅಡಿ ಅಗಲ ಹಾಗೂ ಮೂರೂವರೆ ಅಡಿ ಎತ್ತರದ ಈ ಕಲ್ಬಿಯನ್ನು ಹಿಂಡಿ ಕಣಜ, ಗೋದಾನಿ, ದನಬಳ್ಳು ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ನಾಲ್ಕು ಬದಿಗಳ ಗೋಡೆಗಳನ್ನು ಕಲ್ಲು ಅಥವಾ ದಪ್ಪ ಹಲಿಗೆಯಿಂದ ಕಟ್ಟಿಕೊಂಡು, ಮೇಲ್ಭಾಗಕ್ಕೆ ಮರದ ಹಲಗೆಯ ಮುಚ್ಚಳ ಹಾಕುತ್ತಿದ್ದರು.

ಈ ಕಲ್ಬಿಯೊಳಗೆ ದನಗಳಿಗೆ ಬೇಕಾಗುವ ವಿಶೇಷ ಆಹಾರವನ್ನು ಸಂಗ್ರಹಿಸುತ್ತಿದ್ದರು. ಹಿಂಡಿ, ಹತ್ತಿ ಕಾಳು, ಹುರಳಿ, ಕೊಬ್ಬರಿ ಹಿಂಡಿ, ಶೇಂಗಾ ಹಿಂಡಿ ಮುಂತಾದ ಪೌಷ್ಟಿಕ ಮೇವುಗಳನ್ನು ಇಲ್ಲಿ ತುಂಬಿಡುತ್ತಿದ್ದರು. ಮಳೆಗಾಲದ ಮೂರು ನಾಲ್ಕು ತಿಂಗಳು ಹೊರಗೆ ಮೇವು ದೊರಕದ ಸಂದರ್ಭದಲ್ಲೂ ದನಗಳಿಗೆ ಆಹಾರ ಕೊರತೆಯಾಗದಂತೆ ಈ ಸಂಗ್ರಹ ನೆರವಾಗುತ್ತಿತ್ತು. ಈ ರೀತಿಯ ಸಂಗ್ರಹ ವ್ಯವಸ್ಥೆಯಿಂದ ಮೇವು ತೇವದಿಂದ ಹಾಳಾಗುವುದಿಲ್ಲ; ಇಲಿ, ಹೆಗ್ಗಣಗಳ ಹಾನಿಯೂ ಕಡಿಮೆ. ದನಗಳ ಆಹಾರವನ್ನು ಸುರಕ್ಷಿತವಾಗಿ ಉಳಿಸುವಲ್ಲಿ ‘ಕಲ್ಬಿ’ ಮನೆತನದ ಜಾಣ್ಮೆಯ ಸಂಕೇತವಾಗಿತ್ತು.

ಆದರೆ ಕಾಲ ಬದಲಾಗುತ್ತಿದ್ದಂತೆ ಮಲೆನಾಡಿನ ಬದುಕಿನ ಚಿತ್ರವೂ ಬದಲಾಗುತ್ತಿದೆ. ಮನೆಮನೆಗಳಲ್ಲಿ ಕಂಡುಬರುವ ಕೊಟ್ಟಿಗೆಗಳು ನಿಧಾನವಾಗಿ ಕಾಣೆಯಾಗುತ್ತಿವೆ. ದನಕರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಸು ಸಾಕುವವರ ಪ್ರಮಾಣವೂ ಗಣನೀಯವಾಗಿ ಕುಸಿದಿದೆ. ಹಳೆಯ ಕಾಲದ ಈ ರೀತಿಯ ವ್ಯವಸ್ಥೆಗಳು ಈಗ ಅಪರೂಪದ ನೆನಪುಗಳಾಗಿ ಉಳಿದಿವೆ.

ಇಂತಹ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮತ್ತಿಹಳ್ಳಿಯ ಲಕ್ಷ್ಮೀನಾರಾಯಣ ಹೆಗಡೆ ಅವರ ಮನೆಯಲ್ಲೊಂದು ‘ಕಲ್ಬಿ’ ಕಾಣಿಸಿದಾಗ, ಅದು ಕೇವಲ ಒಂದು ಹಳೆಯ ಸಂಗ್ರಹ ಪೆಟ್ಟಿಗೆಯಂತೆ ಕಾಣುವುದಿಲ್ಲ. ಅದು ಮಲೆನಾಡಿನ ಬದುಕಿನ ಒಂದು ಅಧ್ಯಾಯವನ್ನು, ದನಗಳೊಂದಿಗೆ ಬೆಸೆದುಕೊಂಡಿದ್ದ ಕೃಷಿ ಸಂಸ್ಕೃತಿಯ ಒಂದು ತುಣುಕನ್ನು, ಹಳೆಯ ಕಾಲದ ಮನೆಯ ಜಾಣ್ಮೆಯನ್ನು ನೆನಪಿಸುವ ಜೀವಂತ ಸಾಕ್ಷಿಯಂತೆ ತೋರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.