ಉದ್ದನೆಯ ಮೂಗು, ಓರೆನೋಟ, ಕಂಡು ಕಾಣದಂತಿರುವ ಎಲೆಮರೆಯ ಮೀಸೆ ಅಥವಾ ಹುರಿ ಮೀಸೆ, ಹುಬ್ಬುಗಂಟಿಕ್ಕಿದ, ಸಾರಣಿಗೆಯಂಥ ವದನ ಹೀಗೆ.. ಅಂಕು–ಡೊಂಕಿನ ಗೆರೆಗಳ ಮೂಲಕ ಘನ ಗಂಭೀರವಾದದ್ದನ್ನು ಹೇಳುವ ಚೆಲುವು ವ್ಯಂಗ್ಯಚಿತ್ರಗಳಿಗೆ ಅಲ್ಲದೇ ಮತ್ತೆ ಯಾವುದಕ್ಕಿರಬಹುದು?

ರಾಜಕೀಯ ಕ್ಷೇತ್ರದ ಉಡಿಯಲ್ಲಿ ಸದಾ ಇರುವ ಕೆಂಡದಂಥ ಪಲ್ಲಟಗಳ ತಲ್ಲಣವನ್ನು ಒಂದು ಓರೆಕೋರೆಯ ಗೆರೆ ಅನಾವರಣಗೊಳಿಸುವಷ್ಟು ಸಲೀಸಾಗಿ ಯಾವುದು ತೆರೆದಿಡಬಹುದು. ಇಂಥ ಓರೆಕೋರೆಗಳ ಪಟ್ಟು ಕಲಿಯಲೆಂದೇ ದೂರದ ಕೋಲ್ಕತ್ತ, ಮುಂಬೈ, ಪುಣೆಯಿಂದ ಯುವ ಸಮೂಹ ಉದ್ಯಾನಗರಿಗೆ ಬೆಂಗಳೂರಿಗೆ ಬರುತ್ತದೆ. ಯಾವುದಕ್ಕೆಲ್ಲ ಬೆಂಗಳೂರು ಓಂಕಾರ ಹಾಡಿದೆ ಎಂದು ಪಟ್ಟಿ ಮಾಡುತ್ತಾ ಹೋದರೆ, ಮೊದಲ ಬೀದಿದೀಪ ಅಳವಡಿಕೆಯಿಂದ ಹಿಡಿದು ಹತ್ತಾರು ಕೌತುಕ ಎನಿಸುವ ವಿಷಯಗಳು ಅನಾಯಾಸವಾಗಿ ದೊರಕುತ್ತವೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ವ್ಯಂಗ್ಯಚಿತ್ರಕಾರರಿಗೆಂದೇ ಸಂಸ್ಥೆಯೊಂದು ಇದ್ದು, ಅದು ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಬೆಂಗಳೂರಿನಲ್ಲಿಯೇ!

ಇಂಥ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ರೂಪುಗೊಂಡು ಜೂನ್ 8ಕ್ಕೆ ಇಪ್ಪತ್ತೈದು ವರ್ಷಗಳು ಆಗುತ್ತದೆ. ಈ ವರ್ಷ ಬೆಳ್ಳಿ ಮಹೋತ್ಸವವನ್ನು ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ಸಂಸ್ಥೆ ಆಚರಿಸುತ್ತಿದೆ. ಇದರ ಪ್ರಯುಕ್ತ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾಯಾ ಕಾಮತ್ ಸ್ಮರಣಾರ್ಥ ವ್ಯಂಗ್ಯಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ‘ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳು’ ಎಂಬ ಪರಿಕಲ್ಪನೆಯಡಿ ಸ್ಪರ್ಧೆ ಆಯೋಜಿಸಲಾಗಿದೆ. ಮೊದಲ ಬಹುಮಾನ ₹ 1 ಲಕ್ಷ, ದ್ವಿತೀಯ ಬಹುಮಾನ ₹ 50 ಸಾವಿರ, ತೃತೀಯ ಬಹುಮಾನ ₹ 45 ಸಾವಿರ ನೀಡಲಾಗುತ್ತದೆ. ಹತ್ತು ಮಂದಿಗೆ ಐದು ಸಾವಿರದ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ಗೆರೆಗಳ ಮೂಲಕ ವಿಡಂಬನೆ ಮಾಡಿ, ಇರುವ ಐಬುಗಳನ್ನು ಸೂಚ್ಯವಾಗಿ ತೋರಿಸುವ ವಿಶಿಷ್ಟ ಕಲೆಯೇ ವ್ಯಂಗ್ಯಚಿತ್ರ.

ಇಪ್ಪತ್ತೈದು ವರ್ಷಗಳ ಹಿಂದೆ ವ್ಯಂಗ್ಯಚಿತ್ರಕಾರರಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆಯನ್ನು ಆರಂಭಿಸಬೇಕು ಎಂದುಕೊಂಡು ಹಲವು ಖ್ಯಾತನಾಮ ವ್ಯಂಗ್ಯಚಿತ್ರಕಾರರಿಗೆ ಪತ್ರ ಬರೆಯಲಾಯಿತು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು. ಆದರೆ, ಇಪ್ಪತ್ತೈದು ವರ್ಷಗಳಲ್ಲಿ ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಪಡೆಯುತ್ತದೆ ಎಂಬ ಊಹೆಯೂ ಇರಲಿಲ್ಲ ಎನ್ನುತ್ತಾರೆ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ. ನರೇಂದ್ರ ಅವರು.

ಆರ್.ಕೆ.ಲಕ್ಷ್ಮಣ್, ಮಾರಿಯೋ ಮಿರಾಂಡಾ ಅವರಂಥ ದಿಗ್ಗಜರು ನಾನು ಬರೆದ ಪತ್ರಕ್ಕೆ ಸ್ಪಂದಿಸಿ, ‘ಇದೊಂದು ಒಳ್ಳೆಯ ಮತ್ತು ಆಗಲೇಬೇಕಾದ ಕೆಲಸ’ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಅವರೆಲ್ಲರ ಬೆಂಬಲದಿಂದ ಈ ಸಂಸ್ಥೆಯನ್ನು ಹುಟ್ಟುಹಾಕಲು ಸಾಧ್ಯವಾಯಿತು. ಅಲ್ಲದೇ ಆಗ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ನಲ್ಲಿ ವ್ಯಂಗ್ಯಚಿತ್ರಕಾರರಾಗಿ ಪ್ರಸಿದ್ಧಿ ಪಡೆದಿದ್ದ ಬಿ.ವಿ.ರಾಮಮೂರ್ತಿ ಅವರನ್ನು ಈ ಸಂಸ್ಥೆಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಗುಜ್ಜಾರಪ್ಪ, ನಾಗನಾಥ್ ಅವರನ್ನು ಒಳಗೊಂಡ ಟ್ರಸ್ಟ್ ರೂಪುಗೊಂಡಿತು ಎನ್ನುತ್ತ ಸಂಸ್ಥೆಯನ್ನು ಹುಟ್ಟುಹಾಕಿದ ದಿನಗಳನ್ನು ಸ್ಮರಿಸುತ್ತಾರೆ ನರೇಂದ್ರ ಅವರು.

ಕರ್ನಾಟಕದಲ್ಲಿ ಕಾರ್ಟೂನ್ ಅಸೋಸಿಯೇಷನ್ 1977ರಲ್ಲಿ ಸ್ಥಾಪನೆಗೊಂಡಿತು. 1979ರಲ್ಲಿ ಇದರ ಅಧ್ಯಕ್ಷನಾಗಿದ್ದೆ. ವ್ಯಂಗ್ಯಚಿತ್ರಕಾರರನ್ನೆಲ್ಲ ಸೇರಿಸಿ ಒಂದು ಸಮ್ಮೇಳನ ಮಾಡಲಾಯಿತು. ಆರ್.ಕೆ.ಲಕ್ಷ್ಮಣ್ ಅವರೂ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಹಿರಿಯ ವ್ಯಂಗ್ಯಚಿತ್ರಕಾರರಾದ ಎಸ್.ಕೆ.ನಾಡಿಗ್ ಅವರನ್ನು ಸನ್ಮಾನ ಮಾಡಲಾಯಿತು. ಈ ಸಮ್ಮೇಳನ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಮತ್ತು ಹಲವು ಸಂಪರ್ಕಗಳನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿತ್ತು. ಹಾಗಾಗಿ ರಾಷ್ಟ್ರಮಟ್ಟದಲ್ಲಿ ವ್ಯಂಗ್ಯಚಿತ್ರಕಾರರಿಗೆಂದೇ ಒಂದು ಸಂಸ್ಥೆ ಮಾಡಬೇಕು, ಅದರ ಮೂಲಕವೂ ಒಂದಷ್ಟು ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎನ್ನುವುದಕ್ಕೆ ಈ ಸಮ್ಮೇಳನವೇ ಸ್ಫೂರ್ತಿಯಾಯಿತು ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಅವರು.

ಹೀಗೆ ರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರರ ಸಂಘ ಸ್ಥಾಪನೆಯ ಕನಸಿನ ಮೊಳಕೆಯೇನೋ ಒಡೆಯಿತು. ಆದರೆ, ಅದಕ್ಕೆ ಬೇಕಾದ ಪೋಷಣೆಗೆ ಹಲವು ರೂಪುರೇಷೆಗಳನ್ನು ಸಿದ್ಧಮಾಡಲಾಯಿತು. 2001ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಈ ಬಗ್ಗೆ ತಿಳಿಸಲಾಯಿತು. ಅವರು ಎಲ್ಲ ರೀತಿಯಿಂದಲೂ ಬೆಂಬಲ ಒದಗಿಸಿದರು. ಜೂನ್ 8 ಮತ್ತು 9ರಂದು ಎರಡು ದಿನಗಳು ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆಗಿನ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಅವರು ಉದ್ಘಾಟನೆ ಮಾಡಿ, ಉದ್ಘಾಟನೆಯಾದ ದಿನವೇ ಐದು ಸಾವಿರ ಹಣ ಕೊಟ್ಟು ಸಂಘಕ್ಕೆ ಸದಸ್ಯರೂ ಆದರು. ಈವರೆಗೆ ದೇಶದಾದ್ಯಂತ 250ಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಸಂಘದ ಸದಸ್ಯರಲ್ಲಿ ವ್ಯಂಗ್ಯಚಿತ್ರಕಾರರಷ್ಟೆ ಅಲ್ಲದೇ ಕಲಾಪೋಷಕರು ಇರುವುದು ಹೆಮ್ಮೆ ಎನಿಸಿದೆ.

ವ್ಯಂಗ್ಯಚಿತ್ರ ಕಲೆಯಲ್ಲಿ ಅತಿ ದೊಡ್ಡ ಹೆಸರು ಎನಿಸಿದ್ದ ಎಸ್.ಕೆ.ನಾಡಿಗ್, ಮಹಾರಾಷ್ಟ್ರದ ಎಸ್.ಡಿ.ಫಡ್ನವೀಸ್, ದೆಹಲಿಯ ಪ್ರಾಣ್ಕುಮಾರ್ ಶರ್ಮಾ ಹೀಗೆ ಬೇರೆ ಬೇರೆ ಭಾಷೆಯ ಏಳು ದಿಗ್ಗಜರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆರ್.ಕೆ.ಲಕ್ಷ್ಮಣ್ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಕಾರಣಾಂತರಗಳಿಂದ ಬರಲಾಗಲಿಲ್ಲ. ಮರು ವರ್ಷ ಅವರಿಗಾಗಿ ಪ್ರತ್ಯೇಕ ಸಮಾರಂಭ ಏರ್ಪಡಿಸಿ, ಜೀವಮಾನ ಸಾಧನೆಯ ಪ್ರಶಸ್ತಿ ನೀಡಲಾಯಿತು.

ಯುವಸಮೂಹಕ್ಕೆ ಕಾರ್ಯಾಗಾರ

ವ್ಯಂಗ್ಯಚಿತ್ರದಲ್ಲಿರುವ ಗೆರೆಗಳನ್ನು ಗ್ರಹಿಸುವುದು, ರಾಜಕೀಯಕ್ಕೆ ಸಂಬಂಧಿಸಿದ ವ್ಯಂಗ್ಯಚಿತ್ರಗಳ ರಚನೆ– ಹೀಗೆ ಹಲವು ವಿಷಯಗಳನ್ನು ಇಟ್ಟುಕೊಂಡು ಯುವ ಸಮೂಹಕ್ಕೆ ತರಬೇತಿ ನೀಡಲಾಗಿದೆ. ಮುಂಬೈ, ಪುಣೆ, ಕೋಲ್ಕತ್ತಗಳ ಆಸಕ್ತರು ತರಬೇತಿ ಪಡೆದಿದ್ದಾರೆ. ಇನ್ಸ್ಟಿಟ್ಯೂಟ್ನಲ್ಲಿ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದಂತೆ ಅಪರೂಪ ಎನಿಸುವ ನಾಲ್ಕು ಸಾವಿರ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಇಚ್ಛಿಸುವವರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ಶೇ 40ರಷ್ಟು ಮಹಿಳೆಯರು

ವ್ಯಂಗ್ಯಚಿತ್ರ ರಚನೆಯ ಕಾರ್ಯಾಗಾರದಲ್ಲಿ ಶೇಕಡ 40ರಷ್ಟು ಮಹಿಳೆಯರೇ ಇರುತ್ತಾರೆ. ಜಾಗತಿಕವಾಗಿಯೂ ವ್ಯಂಗ್ಯಚಿತ್ರ ರಚನೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಈ ಸಂಖ್ಯೆಯನ್ನು ಹೆಚ್ಚು ಮಾಡುವುದು ಇನ್ಸ್ಟಿಟ್ಯೂಟ್ನ ಉದ್ದೇಶ ಎಂದು ಹೇಳುವುದನ್ನು ನರೇಂದ್ರ ಅವರು ಮರೆಯಲಿಲ್ಲ.

ಆರು ವರ್ಷಗಳ ನಂತರ ಮೊದಲ ವ್ಯಂಗ್ಯಚಿತ್ರ ಗ್ಯಾಲರಿ

ಇನ್ಸ್ಟಿಟ್ಯೂಟ್ ಹುಟ್ಟುಹಾಕಿ ಆರು ವರ್ಷಗಳ ನಂತರ ಉದ್ಯಮಿ ಅಶೋಕ ಖೇಣಿ ಅವರ ಸಹಕಾರದಿಂದ 2007ರಲ್ಲಿ ವ್ಯಂಗ್ಯಚಿತ್ರಗಳಿಗಾಗಿಯೇ ಎಂ.ಜಿ.ರಸ್ತೆಯಲ್ಲಿ ಅಚ್ಚುಕಟ್ಟಾದ ಗ್ಯಾಲರಿ ಅನಾವರಣಗೊಂಡಿತು. ದೇಶದ ಪ್ರಥಮ ವ್ಯಂಗ್ಯಚಿತ್ರ ಗ್ಯಾಲರಿಯನ್ನು ಆಗಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ಉದ್ಘಾಟನೆ ಮಾಡಿದ್ದರು. ಬಿ.ವಿ.ರಾಮಮೂರ್ತಿ ಗುಜ್ಜಾರಪ್ಪ ಹಾಗೂ ನಾನು ರಚಿಸಿದ ಹಲವು ವ್ಯಂಗ್ಯಚಿತ್ರಗಳನ್ನು ಮೊದಲ ಪ್ರದರ್ಶನದಲ್ಲಿ ಇಡಲಾಯಿತು. ಈ ಪ್ರದರ್ಶನವೂ ಮೂರು ತಿಂಗಳು ನಡೆದು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಯಿತು. ಇದಾದ ಮೇಲೆ ತಿರುಗಿ ನೋಡಿದ್ದೇ ಇಲ್ಲ. ತಿಂಗಳಿಗೊಮ್ಮೆ ಪ್ರದರ್ಶನ ನಡೆಯುತ್ತಲೇ ಇದೆ. ಈವರೆಗೆ 210ಕ್ಕೂ ಹೆಚ್ಚು ವ್ಯಂಗ್ಯಚಿತ್ರ ಪ್ರದರ್ಶನಗಳು ಆಗಿವೆ ಎನ್ನುತ್ತಾರೆ ವಿ.ಜೆ.ನರೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.