ಬೆಳಗಿನ ಸೂರ್ಯ ಇನ್ನೂ ದೇಗಾಂವದ ಅಗಸಿಯನ್ನು ಸಂಪೂರ್ಣ ಆವರಿಸಿರಲಿಲ್ಲ. ಆದರೆ ಊರು ಎಚ್ಚರವಾಗಿತ್ತು.ಮನೆ ಮುಂದೆ ನೀರು ಎರಚಿ ರಂಗೋಲಿ ಹಾಕುತ್ತಿದ್ದ ಮಹಿಳೆಯರು, ಹಲಗೆ ಹೊತ್ತು ಓಡಾಡುತ್ತಿದ್ದ ಯುವಕರು, ದರ್ಗಾದತ್ತ ಸಾಗುತ್ತಿದ್ದ ಭಕ್ತರು, ಜೈ ಬಜರಂಗಬಲಿ ಗುಡಿಯ ಬಳಿ ಹಗ್ಗ ಕಟ್ಟುತ್ತಿದ್ದ ಹಿರಿಯರು– ಇಡೀ ಗ್ರಾಮವೇ ಸಂಭ್ರಮದಲ್ಲಿ ಮುಳುಗಿತ್ತು.

ಆ ದಿನ ದೇಗಾಂವದಲ್ಲಿ ಸಾಮಾನ್ಯ ದಿನವಲ್ಲ. ವರ್ಷಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುವ ‘ಮದ್ದಿನ ಹುಲಿ’ಗಳ ಓಟದ ದಿನ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಈ ಪುಟ್ಟ ಗ್ರಾಮದಲ್ಲಿ ಶೇಖ್ ಜಿಂದಾವಲಿ ದರ್ಗಾದ ಉರುಸ್ ಮತ್ತು ಜೈ ಬಜರಂಗಬಲಿ ಮಂದಿರದ ಜಾತ್ರೆ ಒಟ್ಟಿಗೇ ನಡೆಯುತ್ತದೆ. ಮೂರು ದಿನಗಳ ಈ ಆಚರಣೆಯ ಮೊದಲ ದಿನ ಗಂಧೋತ್ಸವ, ಎರಡನೇ ದಿನ ದೀಪೋತ್ಸವ. ಮೂರನೇ ದಿನ ‘ಮದ್ದಿನ ಹುಲಿ’ಗಳ ಸಂಭ್ರಮ.

ಆ ದಿನ ಬೆಳಗಿನಿಂದಲೇ ಗ್ರಾಮದಲ್ಲಿ ಒಂದು ರೀತಿಯ ಚಡಪಡಿಕೆ ಕಾಣಿಸುತ್ತದೆ. ಹರಕೆ ಹೊತ್ತವರು ಹೊಸ ಬಟ್ಟೆ ತೊಟ್ಟು ಓಡಾಡುತ್ತಿದ್ದರೆ, ಮಕ್ಕಳು ‘ಈ ಸಲ ಎಷ್ಟು ಹುಲಿ ಓಡ್ತವೆ?’ ಎಂದು ಕುತೂಹಲದಿಂದ ಕೇಳುತ್ತಿರುತ್ತಾರೆ. ಅಗಸಿಯಲ್ಲಿ ಹಿರಿಯರು ಹಗ್ಗವನ್ನು ಪರಿಶೀಲಿಸುತ್ತಿರುತ್ತಾರೆ. ಆದರೆ ಈ ದಿನದ ಸಂಭ್ರಮದ ಹಿಂದೆ ಎರಡು ತಿಂಗಳ ಶ್ರಮ ಇರುತ್ತದೆ.

ದೇಗಾಂವದಲ್ಲಿ ಮದ್ದಿನ ಹುಲಿ ಹುಟ್ಟುವುದು ಕೇವಲ ಜಾತ್ರೆಯ ದಿನವಲ್ಲ. ಯುಗಾದಿ ಮುಗಿದ ತಕ್ಷಣವೇ ಅದಕ್ಕೆ ಜೀವಕೊಡುವ ಸಿದ್ಧತೆ ಆರಂಭವಾಗುತ್ತದೆ.

ಯಾರಾದರೂ ಭಕ್ತರು ತಮ್ಮ ಇಷ್ಟಾರ್ಥ ಈಡೇರಿದರೆ ಮದ್ದಿನ ಹುಲಿ ಓಡಿಸುವ ಹರಕೆ ಹೊರುತ್ತಾರೆ. ಆ ವರ್ಷ ಎಷ್ಟು ಹರಕೆಗಳಿವೆ ಎಂಬುದು ಗೊತ್ತಾದ ಬಳಿಕ ಗ್ರಾಮದಲ್ಲಿ ಹುಲಿ ನಿರ್ಮಾಣದ ಕೆಲಸ ಆರಂಭವಾಗುತ್ತದೆ.

ಗ್ರಾಮದ ಚಂದ್ರಶೇಖರ ಬಿರಾದಾರ, ಬಸವರಾಜ ಮಣಕೂಜಿ, ಸುಭಾಶ್ಚಂದ್ರ ಲಾಡವಂತಿ, ಸಿದ್ಧಪ್ಪ ಕೊಹಿನೂರ, ದೌಲತರಾಯ ಬಿರಾದಾರ ಮನೆತನಗಳು ತಲೆಮಾರುಗಳಿಂದ ಈ ಹೊಣೆ ಹೊತ್ತುಕೊಂಡಿವೆ.

ಒಂದು ಹುಲಿಗೆ ಸುಮಾರು 10 ಕೆ.ಜಿ. ಮದ್ದು ಬೇಕಾಗುತ್ತದೆ. ಬಿಳಿ ಎಕ್ಕ ಗಿಡದ ಕಟ್ಟಿಗೆಯ ಇದ್ದಿಲು, ಉಪ್ಪು, ಗಂಧಕ ಸೇರಿಸಿ ಮದ್ದು ತಯಾರಿಸಲಾಗುತ್ತದೆ. ಅದನ್ನು ಬೀಸುವ ಕಲ್ಲಿನಲ್ಲಿ ನುಣ್ಣಗೆ ಬೀಸಿ ಇಡಲಾಗುತ್ತದೆ. ಆದರೆ ಮದ್ದು ಸಿದ್ಧಪಡಿಸುವುದೇ ದೊಡ್ಡ ಕೆಲಸ ಅಲ್ಲ. ಅದನ್ನು ಕೊಂಬಿನಲ್ಲಿ ತುಂಬುವುದೇ ಅಸಲಿ ಶ್ರಮ. ದನಗಳ ಕೊಂಬುಗಳನ್ನು ಖರೀದಿಸಿ ಒಂದು ತಿಂಗಳು ನೀರಿನಲ್ಲಿ ನೆನೆಸಿಡಲಾಗುತ್ತದೆ. ಬಳಿಕ ಅವುಗಳನ್ನು ಸ್ವಚ್ಛಗೊಳಿಸಿ ಒಂದೇ ಅಳತೆಯಲ್ಲಿ ಕತ್ತರಿಸಲಾಗುತ್ತದೆ. ನಂತರ ಆರಂಭವಾಗುತ್ತದೆ ‘ಮದ್ದು ಕುಟ್ಟುವ’ ಕೆಲಸ.

ಆ ದಿನ ಗ್ರಾಮದಲ್ಲಿ ಬೇರೆ ವಾತಾವರಣವೇ ಇರುತ್ತದೆ. ಹಲಗೆಗಳ ಲಯಬದ್ಧ ನಾದದ ನಡುವೆ ಯುವಕರು, ಹಿರಿಯರು ಸೇರಿ ಮದ್ದು ಕುಟ್ಟುತ್ತಾರೆ. ಮೊದಲೇ ಸಿದ್ಧಪಡಿಸಿದ ಮದ್ದನ್ನು ಕೊಂಬಿನಲ್ಲಿ ಸ್ವಲ್ಪ ಸ್ವಲ್ಪ ತುಂಬಿ ಕಟ್ಟಿಗೆ, ಕೊಡತಿಯ ನೆರವಿನಿಂದ ಹೊಡೆದು ಗಟ್ಟಿಗೊಳಿಸಲಾಗುತ್ತದೆ. ಗಂಟೆಗಟ್ಟಲೆ ನಡೆಯುವ ಈ ಕೆಲಸದಲ್ಲಿ ಬೆವರು ಹರಿಯುತ್ತದೆ. ಆದರೆ ಯಾರ ಮುಖದಲ್ಲೂ ಆಯಾಸ ಕಾಣಿಸುವುದಿಲ್ಲ. ‘ಮದ್ದು ಕುಟ್ಟುವಾಗ ಹಲಗೆ ಬಾರಿಸದೇ ಇದ್ದರೆ ಉತ್ಸಾಹವೇ ಬರಲ್ಲ’ ಎಂದು ನಗುತ್ತಾರೆ ಮದ್ದುಗಾರ ಚಂದ್ರಶೇಖರ ಬಿರಾದಾರ.

ಹನ್ನೆರಡು ಇಂಚಿನ ಕೊಂಬಿನಲ್ಲಿ ಸುಮಾರು ಏಳು ಇಂಚಿನಷ್ಟು ಮದ್ದು ತುಂಬಲಾಗುತ್ತದೆ. ಹಿಂಭಾಗಕ್ಕೆ ತಗಡಿನ ಬಿಲ್ಲೆ ಜೋಡಿಸಿ ಗಟ್ಟಿಗೊಳಿಸಲಾಗುತ್ತದೆ. ಉಳಿದ ಭಾಗಕ್ಕೆ ಹಾಳುಮಣ್ಣು, ಸುಣ್ಣ, ಅಂಟಿನ ಮಿಶ್ರಣ ತುಂಬುತ್ತಾರೆ. ಕೊಂಬಿನ ತುದಿಯಲ್ಲಿ ಸಣ್ಣ ರಂಧ್ರ ಮಾಡಿ ಬತ್ತಿ ಅಳವಡಿಸಲಾಗುತ್ತದೆ. ಒಂದೊಂದು ಹುಲಿಗೆ ಇಂಥ ಇಪ್ಪತ್ತು ಮದ್ದಿನ ಕೊಂಬುಗಳು ಬೇಕಾಗುತ್ತವೆ.

ಮದ್ದಿನ ಕೆಲಸ ನಡೆಯುತ್ತಿದ್ದಂತೆ ಮತ್ತೊಂದೆಡೆ ಹುಲಿಯ ಆಕೃತಿ ನಿರ್ಮಾಣವೂ ಆರಂಭವಾಗುತ್ತದೆ. ಈ ಹೊಣೆ ಗಣಪತಿ ಸುತಾರ ಕುಟುಂಬದ್ದು. ಬಾರೆ ಹಾಗೂ ಬಬೂಲ್ ಮರದ ಕಟ್ಟಿಗೆಯಿಂದ ಹುಲಿಯ ತಡಿಕೆ ನಿರ್ಮಿಸಲಾಗುತ್ತದೆ. ಅದು ಓಡಲು ನೆರವಾಗುವಂತೆ ನಾಲ್ಕು ಗಾಲಿ ಅಳವಡಿಸಲಾಗುತ್ತದೆ. ಮುಂಬದಿ–ಹಿಂಬದಿ ಕಾಲುಗಳ ನಡುವೆ ಅಡ್ಡಪಟ್ಟಿ ಹಾಕಿ ಹಗ್ಗ ಪೋಣಿಸಲು ರಂಧ್ರ ಮಾಡಲಾಗುತ್ತದೆ.

ಒಣಗಿದ ಕುಂಬಳಕಾಯಿ ಬಳಸಿ ಹುಲಿಯ ಮುಖ ರೂಪಿಸಲಾಗುತ್ತದೆ. ನಂತರ ಹಳದಿ ಬಣ್ಣದ ಕಾಗದ ಹೊದಿಸಿ, ಕಣ್ಣು, ಹಲ್ಲು, ನಾಲಿಗೆ ಬರೆದು ಅದಕ್ಕೆ ಹುಲಿಯ ರೂಪ ನೀಡಲಾಗುತ್ತದೆ. ರಾತ್ರಿ ಹೊತ್ತಿಗೂ ಯುವಕರು ಕೂತು ಕಾಗದ ಅಂಟಿಸುತ್ತಿರುತ್ತಾರೆ. ಮಕ್ಕಳು ಪಕ್ಕದಲ್ಲಿ ನಿಂತು ನೋಡುತ್ತಿರುತ್ತಾರೆ. ಹಿರಿಯರು ಸೂಚನೆ ನೀಡುತ್ತಿರುತ್ತಾರೆ. ಹರಕೆ ಒಬ್ಬರದ್ದಾದರೂ, ಹುಲಿ ಮಾತ್ರ ಇಡೀ ಊರದ್ದಾಗಿರುತ್ತದೆ. 13ನೇ ಪುಟಕ್ಕೆ...

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-557350584

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.