ಪುರೋಹಿತಶಾಹಿ ವ್ಯವಸ್ಥೆಯು ಅಷ್ಟ್ರಗ್ರಹ ನಿವಾರಣೆಗಾಗಿ ಯಜ್ಞಯಾಗಾದಿಗಳನ್ನು ನಡೆಸಿ ಜನರನ್ನು ಮೂಢರನ್ನಾಗಿಸುತ್ತಿತ್ತು. ಆ ಸಂದರ್ಭದಲ್ಲಿ 9-1-1962 ರಂದು ಕುವೆಂಪು ಅವರು ಜನರನ್ನು ವೈಜ್ಞಾನಿಕ ವಿಶ್ಲೇಷಣೆಯಲ್ಲಿ ವೈಚಾರಿಕವಾಗಿ ಚಿಂತಿಸಿ ಎಂದು ಹೇಳುತ್ತ ಜಾಗೃತಗೊಳಿಸಲು ರಚಿಸಿದ ಕವನ ‘ಮೌಢ್ಯಮೇಧ’ (ಮೇಧ=ಯಾಗ, ಯಜ್ಞ). ಧರ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ಭೀತರನ್ನಾಗಿಸಿ ಸುಲಿಯುವ ವ್ಯವಸ್ಥೆಯೇ ಇದು. ಮೂಢತನ, ತಿಳಿಗೇಡಿತನವನ್ನು ಬಂಡವಾಳ ಮಾಡಿಕೊಂಡು ನಾಜೂಕಾಗಿ ಶೋಷಿಸುವ ಪುರೋಹಿತಶಾಹಿ ಹುನ್ನಾರ ಎಂದು ಕ್ರಾಂತಿಕಾರಿ ನುಡಿಗಳಲ್ಲಿ ಯಜ್ಞಾದಿಗಳನ್ನು ‘ಮೌಢ್ಯಮೇಧ’ ಪದ ರೂಪಿಸಿ ಖಂಡಿಸಿದರು.