ನಲ್ದಾಣ

ನಲ್ದಾಣ (ನಾ). ಒಳ್ಳೆಯ ನೆಲೆ, ಆಶ್ರಯ

(ನಲ್+ತಾಣ)

ರಾಮಸೀತೆ ಲಕ್ಷ್ಮಣರು ಭಯಂಕರ ಕಾಡಿನಲ್ಲಿ ಅಲೆದಾಡುತ್ತ ಅದರ ಮಧ್ಯದಲ್ಲಿ ರಮ್ಯ ಅಗಸ್ತ್ಯ ಆಶ್ರಮವನ್ನು ಕಂಡರು. ಆ ಮುನಿಯು ಅತಿಥಿಯಾದ ಕಾರಣಪುರುಷನನ್ನು ಗುರುತಿಸಿದನು. ಮಣಿದ ಮೂವರನ್ನು ಸತ್ಕರಿಸಿದನು. ಅವರು ಕೆಲಕಾಲ ಗುರು ಸನ್ನಿಧಿಯಲ್ಲಿದ್ದರು. ಮುಂದಿನ ಅವಧಿಯ ವನವಾಸವನ್ನು ಕಳೆಯಲು ಸೂಕ್ತ ಸ್ಥಳವನ್ನು ತಿಳಿಸಲು ಋಷಿಯನ್ನು ಕೇಳಿಕೊಂಡರು.

ಆಗ ಕವಿಯು ಅಂತಹ ನೆಲೆಯನ್ನು ‘ನೆಮ್ಮದಿಯ ನಲ್ದಾಣ’ ಎಂದು ರಾಮನ ಶಾಂತ ಭಾವನೆಗೆ ಪದ ಹೆಣೆದಿದ್ದಾರೆ. ‘ನಲ್ದಾಣ’ ಕವಿ ಹೊಸತಾಗಿ ಕಲ್ಪಿಸಿರುವ ಕನ್ನಡ ನುಡಿಯ ನೆಲೆ; ಒಳ್ಳೆಯ ಸುಂದರ ಮನೋಹರ ತಾಣ. ಆಗ ಅಗಸ್ತ್ಯರು ಅವರಿಗೆ ಅಷ್ಟು ದೂರವಲ್ಲದ ‘ಪಂಚವಟಿ’ಯನ್ನು ಸೂಕ್ತ ‘ನಲ್ದಾಣ’ ಎಂದು ತಿಳಿಸುತ್ತಾರೆ.

ಕೆಲಕಾಲಮಲ್ಲಿ ಗುರುವರನ

ಸನ್ನಿಧಿಯೊಳಿರ್ದು, ತೆಂಕಣನಾಡ ಸೊಬಗಂ

ಸವಿದುಮರಿತುಮಲ್ಲಿಂದೆ ಮುಂದೆ ತೆರಳಲ್ಕೆಳಸಿ

ಬೇಡಿನಗಸ್ತ್ಯನಂ, ಮುಂದಣಾವಧಿಯ ವನದ

ವಾಸಮಂ ಕಳೆಯೆ ನೆಮ್ಮದಿಯ ನಲ್ದಾಣಮೊಂದಂ

ಕೃಪೆಯಿಂ ಬೆಸಸಿಮೆಂದು.

ಪಣೆಮಣಿ

ಪಣೆಮಣಿ(ಕ್ರಿ).(ನಮಸ್ಕಾರಾರ್ಥವಾಗಿ) → ಹಣೆಯನ್ನು ಬಾಗಿಸು; ತಲೆಬಾಗು

(ಪಣೆ + ಮಣಿ)

ಯುದ್ಧದಲ್ಲಿ ರಾಮಚಂದ್ರನಿಂದ ರಾಕ್ಷಸ ರಾವಣನು ಹತನಾಗುವನು. ಆ ಸುದ್ದಿ ಕೇಳಿ ಸೀತೆಯು, ತನ್ನನ್ನು ಕರೆದೊಯ್ಯಲು ರಾಮದೂತರು ಬರುವರೆಂಬ ನಿರೀಕ್ಷೆಯಲ್ಲಿರುತ್ತಾಳೆ. ಆಗ ಅಲ್ಲಿಗೆ ಅನಲೆಯೊಡನೆ ಆಂಜನೇಯ ಮತ್ತು ವಿಭೀಷಣರು ಕೈ ಮುಗಿದು ಬರುತ್ತಾರೆ. ಮಾರುತಿಯು ವಿಭೀಷಣನಿಗೆ ‘ಪ್ರಭುವಿನ ಆಣತಿಯಂತೆ ಲೋಕ ಮಾನ್ಯೆಗೆ ಶಿರಸ್ನಾನ ಮಾಡಿಸಿ ಶೀಘ್ರದಿಂದ ಕರೆದು ತಾ’ ಎಂದು ಹೇಳುವನು.

ಮತ್ತೆ ಮೈಥಿಲಿಗೆ ತಲೆಬಾಗಿಸಿ ನಮಸ್ಕರಿಸುವನು. ಕವಿಯು ಆ ಭಾವಕ್ಕೆ ಸಮನಾದ ಹೊಸಪದ ‘ಪಣೆಮಣಿ’ ನೂತು ಕಾವ್ಯ ಹೆಣೆದಿದ್ದಾರೆ.

ಮತ್ತೆ ಮೈಥಿಲಿಗೆ

ಪಣೆಮಣಿದು ಕೈಮುಗಿದು →ಬೀಳ್ಕೊಂಟ್ಟನಂಜನಾ

ನಂದನಂ ಪ್ರತಿವಂದನಂಗೆಯ್ದಳಂ, ಪೂಜ್ಯೆ

ರಘೂನಂದನಾನಂದೆಯಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.