‘ಈ ಐಪಿಎಲ್ನಲ್ಲಿ ಯಾವ್ದಾರೂ ಟೀಮು 300 ರನ್ ಹೊಡಿಬೌದಾ ಮಂಜಣ್ಣ..’ ಹೆಗಲ ಮೇಲಿದ್ದ ಟವಲ್ ಅನ್ನು ಸರಿ ಮಾಡ್ಕೊಂಡು ಕುತೂಹಲದಿಂದ ಕೇಳಿದರು ರಾಜೇಗೌಡರು.

‘ರಾಜಣ್ಣ, ಈ ಸಲ ಮುನ್ನೂರ್ ವಡೀತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಈ ಸಲಾನೂ ಕಪ್ ನಮ್ದೇ. ನಮ್ ಕೊಯ್ಲಿ ಸಂಚುರಿ ಮ್ಯಾಲ್ ಸಂಚುರಿ ಮಾಡ್ತಾನ್ ನೋಡ್ತೀರು..’ ಮಂಜಣ್ಣ ಕ್ರಿಕೆಟ್ ಪರಿಣತನಂತೆ ಮಾತನಾಡುತ್ತಿದ್ದಾಗ ಮಧ್ಯ ಬಾಯಾಕಿದ ರಾಜೇಗೌಡರು, ‘ಅದ್ಹೇಂಗ್ ಯೇಳ್ತಿಯಪಾ. ಕೊಯ್ಲಿ ಏನು ನಮ್ಮೂರ್ ಹುಡುಗನೇ..’ ಅಂದರು.

‘ಮಂಡ್ಯಕ್ಕೂ ಕೊಯ್ಲಿಗೂ ಭಾಳ ನೆಂಟಸ್ತಿಕೆ ಅದೆ. ಅದು ಮಣ್ಣಿನ ಸಂಬಂಧ ಕಣಣ್ಣೋ. ರನ್ಗಳು ನಮ್ಮೂರಿನ ಮಣ್ಣು ಹಾಕಿರೋ ಪಿಚ್ನಲ್ಲಿಯೇ ಬಂದಿದ್ದು’ ಎಂದು ಮಂಜಣ್ಣ ನಕ್ಕರು.

ರಾಜೇಗೌಡರು ‘ಎಲ್ಲಿಯ ಕೊಯ್ಲಿ, ಎತ್ತಣ ಮಂಡ್ಯ’ ಎಂದು ಅಚ್ಚರಿಗೊಂಡರು.

ಇದು ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕುರಿತ ಲೋಕಾರೂಢಿಯ ಮಾತುಕತೆ ಅನಿಸಬಹುದು. ಆದರೆ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಮಂಡ್ಯಕ್ಕೆ ಸಂಬಂಧ ಬೆಸೆದಿದ್ದು ಕ್ರಿಕೆಟ್ ಪಿಚ್!

ಭಾರತದ ಹಳ್ಳಿ, ನಗರಗಳಲ್ಲಿ ಕ್ರಿಕೆಟ್ ಆಡುವವರು, ನೋಡುವವರ ಮಧ್ಯೆ ಮಣ್ಣಿನ ನಂಟು ಬೆಸೆಯುವ ಪಿಚ್ ಬಗೆಗಿನ ಮಾತುಕತೆಗಳೇ ಸ್ವಾರಸ್ಯಕರ. ಆದರೆ ಮಂಡ್ಯ ಜಿಲ್ಲೆಗೆ ಮಾತ್ರ ಇಂತಹ ಮಾತುಕತೆಗಳು ಮೊದಲ ಮಳೆಯ ಹನಿಗಳಿಗೆ ನೆಂದ ಮಣ್ಣಿನ ಘಮಲಿನಷ್ಟೇ ಅಪ್ಯಾಯಮಾನ. ಆ ಮೂಲಕ ಕರ್ನಾಟಕಕ್ಕೂ ಹೆಮ್ಮೆ.

ಇದು ಹೇಗೆ ಶುರುವಾಯ್ತು...

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಮಾಡಲು ಮಂಡ್ಯ ಜಿಲ್ಲೆಯ ಕೆರೆಯೊಂದರಲ್ಲಿ ಸಿಗುವ ಮಣ್ಣನ್ನು ಬಳಸಲಾಗಿದೆ. ಕ್ರಿಕೆಟ್ ಚೆಂಡಿನ ಪುಟಿತ, ಲಯಬದ್ಧ ಚಲನೆ ಮತ್ತು ಜಿಗುಟುತನಕ್ಕೆ ಈ ಮಣ್ಣು ಪೂರಕವಾಗಿದೆ. ಅದಕ್ಕಾಗಿಯೇ ಈಗ ಬಹಳಷ್ಟು ಊರುಗಳ ಕ್ರಿಕೆಟ್ ಪಿಚ್ಗಳಲ್ಲಿ ಮಂಡ್ಯದ ಮಣ್ಣಿನ ಘಮಲು ಕಾಣಸಿಗುತ್ತಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಿಯೇ ಪಿಚ್ ಮಾಡಬೇಕೆಂದರೂ ಮೊದಲು ಗಮನ ಸೆಳೆಯುವುದು ಮಂಡ್ಯದ ಮಣ್ಣಿನ ಗುಣಮಟ್ಟವೇ.

ಬೆಂಗಳೂರಿನ ಹೊರವಲಯದ ದೇವನಹಳ್ಳಿ ಬಳಿ ನಿರ್ಮಾಣವಾಗಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ 32 ಪಿಚ್ಗಳಿವೆ. ಎಲ್ಲಕ್ಕೂ ಮಂಡ್ಯದ ಮಣ್ಣು ಬಳಸಲಾಗಿದೆ. ಈಚೆಗೆ ಇಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳಲ್ಲಿ ದೆಹಲಿ ತಂಡದಲ್ಲಿ ಆಡಿದ್ದ ವಿರಾಟ್ ಶತಕ ಬಾರಿಸಿದ್ದರು. ದೇಶದ ವಿವಿಧ ಮೈದಾನಗಳಲ್ಲಿ ಅವರು ಸಾಧನೆ ಮಾಡಿದ ಸಂದರ್ಭಗಳಲ್ಲಿ ಕೆಲವರು, ಮಂಡ್ಯ ಮಣ್ಣಿನ ಪಿಚ್ಗಳ ಜೊತೆ ಅವರ ಯಶಸ್ಸನ್ನು ಹೋಲಿಕೆ ಮಾಡುತ್ತ, ತಾತ್ಕಾಲಿಕ ಸಂಬಂಧವನ್ನು ಕಲ್ಪಿಸುತ್ತಾರೆ. ಅದರಲ್ಲಿ ಕೊಹ್ಲಿಯನ್ನು ಕನ್ನಡಿಗರು ಹೆಚ್ಚು ಪ್ರೀತಿಸುವುದು ಸಹ ಕಾರಣವಾಗಿದೆ.

‘ವಿರಾಟ್ ಮತ್ತು ಮಂಡ್ಯದ ಮಣ್ಣಿಗೂ ಒಂದು ರೀತಿಯ ಅವಿನಾವಭಾವ ಸಂಬಂಧವಿದೆ. ಮಂಡ್ಯದ ಮಣ್ಣು ಬಳಕೆ ಮಾಡಲಾದ ಪಿಚ್ಗಳ ಮೇಲೆ ವಿರಾಟ್ ಯಶಸ್ವಿಯಾಗಿದ್ದಾರೆ. ಆ ಮಣ್ಣಿನಲ್ಲಿ ಜಿಗುಟುತನ ಹೆಚ್ಚಾಗಿದೆ. ಮರಳಿಗಿಂತ ಮಣ್ಣಿನ ಅಂಶವೂ ಹೆಚ್ಚು. ಅದರ ಪರಿಣಾಮವಾಗಿ ಚೆಂಡಿನ ವೇಗ, ಪುಟಿತ, ಚಲನೆಯ ಲಯ ಹಾಗೂ ಹುಲ್ಲಿನ ಬೆಳವಣಿಗೆ ಅದ್ಭುತವಾಗಿದೆ. ಇದು ಕಂದುಬಣ್ಣದ ಮಣ್ಣು’ ಎಂದು ಪಿಚ್ ಪರಿಣತರೊಬ್ಬರು (ಹೆಸರು ಗೋಪ್ಯವಾಗಿಡುವ ಕರಾರು) ಹೇಳುತ್ತಾರೆ.

ಈ ಮಣ್ಣನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸಿದ ಕೀರ್ತಿ ಮಂಡ್ಯದ ಜನತಾ ಶಿಕ್ಷಣ ಸಮಿತಿಯ(ಪಿಇಟಿ)ಮಾಜಿ ಅಧ್ಯಕ್ಷರಾದ ದಿವಂಗತ ಎಚ್.ಡಿ. ಚೌಡಯ್ಯನವರಿಗೆ ಸಲ್ಲುತ್ತದೆ. 2003ರಲ್ಲಿ ಪಿಇಟಿ ಕಾಲೇಜು ಮೈದಾನದಲ್ಲಿ ಕರ್ನಾಟಕ ಮತ್ತು ಬಂಗಾಳ ನಡುವಣ ರಣಜಿ ಪಂದ್ಯ ನಡೆದಿತ್ತು. ಆ ಪಂದ್ಯಕ್ಕಾಗಿ ಮೈದಾನದಲ್ಲಿ ಪಿಚ್ ಸಿದ್ಧಪಡಿಸಲು ರಾಜ್ಯದೆಲ್ಲೆಡೆ ಮಣ್ಣು ಹುಡುಕಿದ್ದರು. ಆದರೆ ತಮ್ಮ ಜಿಲ್ಲೆಯಲ್ಲಿಯೇ ಇದ್ದ ಕೆರೆಯೊಂದರ ಮಣ್ಣನ್ನು ಪರೀಕ್ಷೆಗೆ ಕಳಿಸಿ ಅದನ್ನೇ ಪಿಚ್ ಮಾಡಲು ಬಳಸಿ ಯಶಸ್ವಿಯಾದರು. ಅದರೊಂದಿಗೆ ‘ಸಕ್ಕರೆ ಜಿಲ್ಲೆ’ಯ ಮಣ್ಣಿನ ಕಂಪು, ಇಂಗ್ಲಿಷರ ನಾಡಿನಲ್ಲಿ ಜನಿಸಿದ ಕ್ರಿಕೆಟ್ ಲೋಕವನ್ನು ಆವರಿಸಲು ಶುರುವಾಯಿತು.

ಇವತ್ತು ಕ್ರಿಕೆಟ್ನಲ್ಲಿ ಆಧುನಿಕ ತಂತ್ರಜ್ಞಾನಗಳು ಬಂದಿವೆ. ಟೆಸ್ಟ್, ಏಕದಿನ, ಟಿ20, ದಿ ಹಂಡ್ರೆಡ್ ಇತ್ಯಾದಿ ಮಾದರಿಗಳು ಜನಪ್ರಿಯವಾಗಿವೆ. ಅದರಲ್ಲೂ ಭಾರತವು ಕ್ರಿಕೆಟ್ ಜಗತ್ತಿನ ‘ದೊಡ್ಡಣ್ಣ’ನಾಗಿ ಬೆಳೆದಿದೆ. ಏನೆಲ್ಲ ಆದರೂ ಕ್ರಿಕೆಟ್ ಆಟದ ಗ್ರಾಮೀಣ ನಂಟು ಮಾತ್ರ ಉಳಿದುಕೊಂಡಿದೆ. ಅದು ಪಿಚ್ ಮೂಲಕ ಎಂಬುದು ವಿಶೇಷ.

ಪಿಚ್ ಹುಟ್ಟಿದ ಕತೆ

ಈ ಪಿಚ್ ಎಂಬ ಪರಿಕಲ್ಪನೆ ಹುಟ್ಟಿದ ಕತೆಯೇ ಸ್ವಾರಸ್ಯಕರ. 16ನೇ ಶತಮಾನದಲ್ಲಿ ಇಂಗ್ಲೆಂಡ್ನ ಹಳ್ಳಿಗಳಲ್ಲಿ ಕ್ರಿಕೆಟ್ ಆಡುವವರು ನಿರ್ದಿಷ್ಟ ಅಳತೆಯ ಪಿಚ್ ಸಿದ್ಧಪಡಿಸುತ್ತಿರಲಿಲ್ಲ. ಖಾಲಿ ಹೊಲ–ಗದ್ದೆಗಳು, ದೂಳು ಹಾರುವ ನೆಲದ ಮೇಲೆ ಕ್ರಿಕೆಟ್ ಆಡುತ್ತಿದ್ದರು. ಆದರೆ ನಿರ್ದಿಷ್ಟ ಅಳತೆ ಇರದ ಪಿಚ್ಗಳಲ್ಲಿ ಬ್ಯಾಟರ್ ಮತ್ತು ಬೌಲರ್ಗಳಿಗೆ ಸಮಾನ ಅವಕಾಶ ಸಿಗುತ್ತಿರಲಿಲ್ಲ. ಅದೇ ಸಂದರ್ಭದಲ್ಲಿ ಹೊಲಗಳನ್ನು ಸರ್ವೆ ಮಾಡಲು ಎಡ್ಮಂಡ್ ಗುಂಟರ್ಸ್ ಎಂಬ ವ್ಯಕ್ತಿ 66 ಅಡಿ (22 ಯಾರ್ಡ್ಸ್) ಉದ್ದದ ಸರಪಳಿಯನ್ನು (ಗುಂಟರ್ಸ್ ಚೈನ್) ನಿಗದಿ ಮಾಡಿದರು. ಭೂಮಿ, ನಿವೇಶನಗಳ ಅಳತೆ ಮಾಡಲು ಅದನ್ನು ಬಳಸುತ್ತಿದ್ದರು. ಕ್ರಿಕೆಟ್ ಆಡುವವರೂ ಅದೇ ಸರಪಳಿಯನ್ನು ಮಾನದಂಡವಾಗಿಟ್ಟುಕೊಂಡು ಪಿಚ್ ಗುರುತಿಸಿದರು. ಅಲ್ಲಿಂದ ಇಲ್ಲಿಯವರೆಗೂ ಅದೇ ಅಳತೆ ಮುಂದುವರಿದಿದೆ.

‘ಪಿಚ್ ಎಂಬ ವಿಷಯವೇ ಬೃಹತ್ ಗ್ರಂಥಕ್ಕೆ ಸಮಾನ. ಕ್ರಿಕೆಟ್ ಬೆಳೆದಂತೆ ಪಿಚ್ ಕುರಿತ ಸಂಶೋಧನೆ, ತಂತ್ರಜ್ಞಾನಗಳೂ ವಿಸ್ತಾರವಾಗುತ್ತಿವೆ. ಪಿಚ್ ಸಿದ್ಧತೆ, ನಿರ್ವಹಣೆ, ಗುಣಮಟ್ಟ ಸುಧಾರಣೆಗಳ ಇತ್ಯಾದಿ ಪ್ರಾವೀಣ್ಯತೆಯ ಕ್ಷೇತ್ರವಾಗಿದೆ. ಅದಕ್ಕಾಗಿ ವಿಶ್ವದಾದ್ಯಂತ ತಜ್ಞರೇ ಇದ್ದಾರೆ’ ಎಂದು ಬಿಸಿಸಿಐ ಅಂಪೈರ್ ಅಭಿಜಿತ್ ಬೆಂಗೇರಿ ಹೇಳುತ್ತಾರೆ.

ಪ್ರಮುಖವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಲ್ಲಿ 18ನೇ ಶತಮಾನದಿಂದಲೇ ವಿಶೇಷ ರೀತಿಯ ಪಿಚ್ಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭವಾದವು. ಆದರೆ ಅಲ್ಲಿಯ ಪಿಚ್ಗಳಿಗೂ ಭಾರತದ ಕ್ರೀಡಾಂಗಣಗಳಲ್ಲಿರುವ ಅಂಕಣಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.

‘ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ಗಳಲ್ಲಿರುವ ಹವಾಗುಣ ಮತ್ತು ಮಣ್ಣಿನ ಗುಣಕ್ಕೆ ತಕ್ಕಂತೆ ಅಲ್ಲಿಯ ಪಿಚ್ಗಳು ಸಿದ್ಧವಾಗಿರುತ್ತವೆ. ಆ ದೇಶಗಳ ಬಹುತೇಕ ಎಲ್ಲ ನಗರಗಳಲ್ಲಿಯೂ ಇರುವ ಪಿಚ್ಗಳ ಗುಣಸ್ವಭಾವ ಶೇಕಡ 90ರಷ್ಟು ಒಂದೇ ರೀತಿ ಇರುತ್ತದೆ. ಹೆಚ್ಚಾಗಿ ಚಳಿಯ ವಾತಾವರಣ ಅಲ್ಲಿರುತ್ತದೆ. ಆದರೆ ಭಾರತದಲ್ಲಿ ಹಾಗಲ್ಲ. ಒಂದೊಂದು ಊರಿಗೂ ಹವಾಮಾನ, ಮಣ್ಣಿನ ಗುಣ ಬದಲಾಗುತ್ತೆ. ಒಂದು ದೇಶ, ಒಂದು ಚುನಾವಣೆ, ಒಂದು ದೇಶ, ಒಂದು ಕರೆನ್ಸಿ ಇತ್ಯಾದಿ ಸ್ಲೋಗನ್ ಹೇಳಬಹುದು. ಆದರೆ ಭಾರತದಲ್ಲಿ ಒಂದು ದೇಶ, ಒಂದೇ ರೀತಿಯ ಪಿಚ್ ಎಂಬುದು ಯಾವ ಕಾಲಕ್ಕೂ ಸಾಧ್ಯವಿಲ್ಲದ ಮಾತು. ಅದಕ್ಕಾಗಿಯೇ ಇಲ್ಲಿಯ ಕ್ರಿಕೆಟ್ ಮತ್ತು ಕ್ರಿಕೆಟಿಗರ ಶೈಲಿ ಮತ್ತು ಆಟದ ಗಮ್ಮತ್ತು ಬೇರೆಯೇ ಆಗಿದೆ’ ಎಂದು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯೂರೇಟರ್ ಶಿವಕುಮಾರ್ ಈ ಹಿಂದೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಕರ್ನಾಟಕದಲ್ಲಿಯೂ ಅಷ್ಟೇ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಮತ್ತು ಹುಬ್ಬಳ್ಳಿಯ ರಾಜನಗರ ಕ್ರೀಡಾಂಗಣದ ಪಿಚ್ ಮಧ್ಯೆ ವ್ಯತ್ಯಾಸವಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕರ್ನಾಟಕ ಮತ್ತು ಜಮ್ಮು–ಕಾಶ್ಮೀರ ನಡುವಣ ರಣಜಿ ಟ್ರೋಫಿ ಫೈನಲ್ ನಡೆದಿತ್ತು. ಆ ಪಂದ್ಯದಲ್ಲಿ ವೇಗದ ಬೌಲರ್ಗಳು ಮಿಂಚಿದ್ದರು. ಕೆಂಪು ಮಣ್ಣಿನ ಪಿಚ್ನಲ್ಲಿ ಕಾಶ್ಮೀರದ ಬ್ಯಾಟರ್ಗಳೂ ರನ್ಗಳ ಹೊಳೆ ಹರಿಸಿದ್ದರು. ಅಂದಹಾಗೆ, ಹುಬ್ಬಳ್ಳಿಯ ಪಿಚ್ ಮಾಡಲು ಕಲಘಟಗಿ ತಾಲ್ಲೂಕಿನ ಕೆರೆಯೊಂದರಲ್ಲಿ ಸಿಕ್ಕ ಮಣ್ಣನ್ನು ಬಳಸಲಾಗಿತ್ತು. ಉತ್ತರ ಕರ್ನಾಟಕದಲ್ಲಿ ಕೆಲವು ಊರುಗಳಲ್ಲಿ ಕ್ರಿಕೆಟ್ ಪಿಚ್ಗೆ ಯೋಗ್ಯವಾದ ಮಣ್ಣು ಸಿಗುತ್ತಿದೆ.

‘ಮಣ್ಣಿನ ಗುಣಮಟ್ಟ ನಿರ್ಧರಿಸಲು ಪಿಎನ್ಜಿ ಪ್ರಯೋಗಾಲಯಕ್ಕೆ ಕಳಿಸಬೇಕು. ಆದರೆ ಯಾವುದೇ ಗ್ರಾಮದಿಂದ ಮಣ್ಣು ತೆಗೆದುಕೊಳ್ಳುವುದು ತುಂಬಾ ಸವಾಲಿನ ಕೆಲಸ. ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಅನುಮತಿ ಬೇಕೇಬೇಕು. ಈ ಪ್ರಕ್ರಿಯೆಯು ತುಂಬಾ ಸಮಯ ತೆಗೆದುಕೊಳ್ಳುತ್ತದೆ’ ಎಂದು ಪಿಚ್ ನಿರ್ಮಾಣದಲ್ಲಿ ಅನುಭವ ಇರುವ ಅಧಿಕಾರಿಯೊಬ್ಬರು ಹೇಳುತ್ತಾರೆ.

ಎಲ್ಲ ಸವಾಲುಗಳನ್ನು ದಾಟಿ ಬಂದ ನಂತರ ಪಿಚ್ ರೂಪ ಪಡೆಯುವ ಮಣ್ಣಿನಲ್ಲಿ ದಿಗ್ಗಜ ಆಟಗಾರರು ಬೆಳೆದಿದ್ದಾರೆ. ಅವರಲ್ಲಿ ಬಹಳಷ್ಟು ಜನರು ತಾವು ಆಡಿದ ಪಿಚ್ನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ 2013ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ತಮ್ಮ ವೃತ್ತಿಜೀವನದ ಕೊನೆ ಟೆಸ್ಟ್ ಆಡಿದಾಗ ಪಿಚ್ಗೆ ನಮಸ್ಕರಿಸಿ ಭಾವುಕರಾಗಿದ್ದರು. 22 ಯಾರ್ಡ್ಸ್ನಲ್ಲಿ ತಾವು ಕಳೆದ 24 ವರ್ಷಗಳನ್ನು ಮೆಲುಕು ಹಾಕಿದ್ದರು. ಎರಡು ವರ್ಷದ ಹಿಂದೆ ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಿಚ್ನ ಮಣ್ಣನ್ನು ಸವಿದಿದ್ದರು. ಇತ್ತೀಚೆಗೆ ಅಹಮದಾಬಾದಿನಲ್ಲಿ ಟಿ20 ವಿಶ್ವಕಪ್ ಜಯಿಸಿದಾಗ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಪಿಚ್ ಮಣ್ಣನ್ನು ಹಣೆಗೆ ಹಚ್ಚಿಕೊಂಡು ಕೈಮುಗಿದಿದ್ದರು. ಇಂತಹ ಹಲವು ಭಾವುಕ ಕ್ಷಣಗಳು ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ದಾಖಲಾಗಿವೆ.

ಕ್ರಿಕೆಟ್ ಆಟ ಬದಲಾಗುತ್ತಿದೆ. ಹೊಸ ಮಾದರಿಗಳು ಬರುತ್ತಿವೆ. ಆದರೆ ಒಂದು ಸಂಗತಿ ಮಾತ್ರ ಬದಲಾಗುವುದಿಲ್ಲ; ಅದು ಮಣ್ಣಿನ ನಂಟು.

ಒಂದು ಹಳ್ಳಿಯಲ್ಲಿ ನಾಲ್ವರು ಚಹಾ ಕುಡಿಯುತ್ತಾ ಕ್ರಿಕೆಟ್ ಬಗ್ಗೆ ಮಾತನಾಡಿದರೂ ಮಾತು ಕೊನೆಗೆ ಪಿಚ್ ಮೇಲೇ ಬಂದು ನಿಂತೇ ಬಿಡುತ್ತದೆ:

‘ಪಿಚ್ ಕೈ ಕೊಟ್ಟಿತ್ತಪ್ಪಾ…’
‘ಸ್ಪಿನ್ಗೆ ಸೂಕ್ತವಾಗಿತ್ತು…’
‘ಪಿಚ್ಚೇ ಸರಿಯಿರ್ಲಿಲ್ಲ…’

ಈ ಮಾತುಗಳಲ್ಲೇ ಪಿಚ್ನ ಮಹತ್ವ ಅಡಗಿದೆ. ಹಾಗೆಯೇ ಅದೇ ಮಣ್ಣಿನಲ್ಲಿ ಕನಸುಗಳ ಬೀಜ ಬಿತ್ತಿದ ಆಟಗಾರರು ಕ್ರಿಕೆಟ್ ಇತಿಹಾಸ ಬರೆಯುತ್ತಿದ್ದಾರೆ.

ಚಿನ್ನಸ್ವಾಮಿ ಮತ್ತು ಕಸ್ತೂರಿರಂಗನ್

ಕ್ರಿಕೆಟ್ ಪಿಚ್ ಗುಣಮಟ್ಟ ಅರಿಯಲು ಈಗ ತಂತ್ರಜ್ಞಾನವಿದೆ. ಆದರೆ ದಶಕಗಳ ಹಿಂದೆ ಪಿಚ್ ಸಿದ್ಧತೆಯ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಆದರೆ 70ರ ದಶಕದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಿದ್ಧಗೊಳಿಸುವ ಹೊಣೆ ಹೊತ್ತ ಎಸ್. ಕಸ್ತೂರಿರಂಗನ್ ಅವರು ತಮ್ಮದೇ ಆದ ತಂತ್ರ ಕಂಡುಕೊಂಡಿದ್ದರು.

ಕಲ್ಲು ಬಂಡೆಗಳ ತಾಣವಾಗಿದ್ದ ಜಾಗವನ್ನು ಸುಂದರ ಪಿಚ್ ಆಗಿ ನಿರ್ಮಿಸಿದರು. ಗುಲಾಬಿ ಬೆಳೆಗಾರರಾಗಿದ್ದ ಕಸ್ತೂರಿರಂಗನ್ ಅವರು ಕ್ರಿಕೆಟಿಗರೂ ಹೌದು. ಮಣ್ಣಿನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಭಾರತದ ಮೊದಲ ಪಿಚ್ ಕ್ಯೂರೇಟರ್ ಎಂಬ ಹೆಗ್ಗಳಿಕೆಯೂ ಅವರದ್ದು. ಪಂದ್ಯಕ್ಕೆ ಪಿಚ್ ಸಿದ್ಧವಾಗಿರುವುದನ್ನು ಗುರುತಿಸಲು ಅವರು ನಾಣ್ಯವನ್ನು ಮೇಲಿನಿಂದ ಒಗೆಯುತ್ತಿದ್ದರು. ನಾಣ್ಯದ ‘ಟಿಣ್ ಟಿಣ್’ ಸದ್ದಿನ ಮೂಲಕ ಪಿಚ್ ಮರ್ಮ ಅರಿಯುತ್ತಿದ್ದರು. ಹಲವು ವರ್ಷಗಳ ಕಾಲ ಅವರು ಇಲ್ಲಿಯ ಪಿಚ್ ಕ್ಯೂರೇಟರ್ ಆಗಿದ್ದರು. ಅವರಿಗೆ ದೊಡ್ಡ ಶಿಷ್ಯಬಳಗವೇ ಇದೆ. ಅವರ ಮಗ ಶ್ರೀರಾಮ್ ಕೂಡ ಕ್ಯೂರೇಟರ್ ಆಗಿದ್ದಾರೆ.

ಈಗ ಪಿಚ್ ಕಾಠಿಣ್ಯ ಮತ್ತು ಮಣ್ಣಿನ ಹದ ಅರಿಯಲು ಕ್ಲಿಂಗ್ ಯಂತ್ರವನ್ನು ಬಳಸಲಾಗುತ್ತದೆ.

ಪಿಚ್ಗಳ ವೈವಿಧ್ಯಗಳು

100ರಿಂದ 150 ಕಿ.ಮೀ ವೇಗದಲ್ಲಿ ಸಾಗಿಬರುವ ಗಟ್ಟಿ ಚೆಂಡಿಗೆ ಮೈಯೊಡ್ಡಿ ನಿಂತು ಆಡುವ ಜಗತ್ತಿನ ಏಕೈಕ ಆಟವೆಂದರೆ ಕ್ರಿಕೆಟ್. ಬ್ಯಾಟರ್ಗಳ ರಕ್ಷಣೆಯ ಜೊತೆಗೆ ಬೌಲರ್ಗಳಿಗೂ ತಕ್ಕ ಯಶಸ್ಸು ಸಿಗುವಂತಾಗಬೇಕು.

ಅದಕ್ಕಾಗಿ ಆಯಾ ಊರಿನ ಹವಾಗುಣ ಮತ್ತು ನೆಲದ ಗುಣಕ್ಕೆ ತಕ್ಕಂತೆ ಪಿಚ್ಗಳು ಸಿದ್ಧವಾಗುತ್ತವೆ. ಮೊದಲಿನಿಂದಲೂ ನಾಲ್ಕು ಬಗೆಯ ಪಿಚ್ಗಳು ಬಳಕೆಯಲ್ಲಿವೆ.

ಹಸಿರು ಪಿಚ್ಗಳ ಮೇಲ್ಮೈನಲ್ಲಿ ಹುಲ್ಲಿನ ಪುಟ್ಟ ಗರಿಕೆಗಳು ಇರುತ್ತವೆ. ತೇವಾಂಶವು ಹೆಚ್ಚಿರುತ್ತದೆ. ಆದ್ದರಿಂದ ವೇಗದ ಬೌಲರ್ಗಳಿಗೆ ನೆರವು ಸಿಗುತ್ತದೆ. ಚೆಂಡಿನ ಚಲನೆ, ಸ್ವಿಂಗ್ಗೆ ಅನುಕೂಲ. ಏಕಾಗ್ರತೆ ಮತ್ತು ಉತ್ತಮ ಕೌಶಲ ಹೊಂದಿರುವ ಬ್ಯಾಟರ್ಗಳು ಇಂತಹ ಪಿಚ್ನಲ್ಲಿ ಹೆಚ್ಚು ಯಶಸ್ಸು ಸಾಧಿಸಬಲ್ಲರು.

ಶುಷ್ಕ ಮೇಲ್ಮೈನ ಗಟ್ಟಿಯಾದ ಪಿಚ್ಗಳು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಾಣಸಿಗುತ್ತವೆ. ಚೆಂಡು ಹೆಚ್ಚು ಬೌನ್ಸ್ ಮತ್ತು ವೇಗವಾಗಿ ಚಲಿಸುತ್ತದೆ. ಬ್ಯಾಟರ್ಗಳಿಗೆ ಇಂತಹ ಪಿಚ್ನಲ್ಲಿ ಆಡುವುದು ಕಠಿಣ ಸವಾಲು. ಗಾಯಗೊಳ್ಳುವ ಪ್ರಮಾಣವೂ ಹೆಚ್ಚು.

ದೂಳು ಹಾರುವ ಪಿಚ್ಗಳು ಭಾರತದಲ್ಲಿ ಹೆಚ್ಚು. ಇವು ಸ್ಪಿನ್ ಬೌಲರ್ಗಳ ಸ್ನೇಹಿಯಾಗಿರುತ್ತವೆ. ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡು ಅಥವಾ ಮೂರನೇ ದಿನದಿಂದಲೇ ಸ್ಪಿನ್ನರ್ಗಳು ವಿಜೃಂಭಿಸಲು ಆರಂಭಿಸುವ ಪಿಚ್ಗಳು ಇವು. ತಿರುಗುವ ಚೆಂಡನ್ನು ಎದುರಿಸುವ ಕೌಶಲವಿರುವ ಬ್ಯಾಟರ್ಗಳು ಇಲ್ಲಿ ಯಶಸ್ವಿಯಾಗುತ್ತಾರೆ.

ಹೈಬ್ರಿಡ್ ಮತ್ತು ಕೃತಕ ಪಿಚ್ಗಳು ಇತ್ತೀಚೆಗೆ ಪ್ರಚಲಿತವಾಗಿವೆ. ಟರ್ಫ್ ಮತ್ತು ಸಿಂಥೆಟಿಕ್ ಫೈಬರ್ ಮ್ಯಾಟ್ಗಳನ್ನು ಬಳಸಿ ಸಿದ್ಧಪಡಿಸುವ ಪಿಚ್ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.