ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡುವುದು ಪೋಷಕರಿಗೆ ಸವಾಲಾಗಿದೆ. ಕೆಲಸದ ಒತ್ತಡ, ಸಮಯದ ಅಭಾವದಿಂದಾಗಿ ಇದು ಅನಿವಾರ್ಯ ಕೂಡ. ಆದರೆ ಮನೆಯಲ್ಲಿ ಮಕ್ಕಳಿದ್ದಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಮೈಯೆಲ್ಲ ಕಣ್ಣಾಗಿರಬೇಕು. ಇಲ್ಲವಾದರೆ, ದುರಂತಗಳು ಸಂಭವಿಸಿ ಬಿಡುತ್ತವೆ.

ಮೊನ್ನೆಯಷ್ಟೇ ಬಕೆಟ್ನಲ್ಲಿದ್ದ ನೀರಿನಲ್ಲಿ ಮುಳುಗಿ, 11 ತಿಂಗಳ ಕಂದಮ್ಮ ಮೃತಪಟ್ಟಿದ್ದು, ಆ ಘಟನೆಯ ಬಳಿಕ ಮನನೊಂದ ತಾಯಿ ಸಹ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿತ್ತು. ಇದಾದ ನಂತರ ಮಕ್ಕಳನ್ನು ಒಂಟಿಯಾಗಿ ಬಿಡುವುದು ಹೇಗೆ? ಅವರೊಟ್ಟಿಗೆ ಇರುವಾಗ ಪೋಷಕರು ಯಾವ ರೀತಿಯ ಮುನ್ನೆಚ್ಚರಿಕೆ ಅನುಸರಿಸಬೇಕು ಎಂದು ಪಾಲನ ತರಬೇತುದಾರರಾದ ಡಾ. ಶ್ವೇತಾ ಪ್ರಭಾಕರ್ ಅವರು ‘ಪ್ರಜಾವಾಣಿ ಡಿಜಿಟಲ್’ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಕ್ಕಳಿರುವ ಮನೆಯಲ್ಲಿ ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು..

ಮಕ್ಕಳಿರುವ ಮನೆಯಲ್ಲಿ ಪೋಷಕರು ಅವರ ಸುರಕ್ಷತೆಗಾಗಿ ಸಣ್ಣ ಪುಟ್ಟ ಆಟಿಕೆಗಳು, ನಾಣ್ಯಗಳು, ಮಾತ್ರೆಗಳು, ಕತ್ತರಿ, ಚಾಕುಗಳಂತಹ ಅಪಾಯಕಾರಿ ವಸ್ತುಗಳನ್ನು ಕೈಗೆ ಸಿಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಪೋಷಕರು ಮೊಬೈಲ್ನಲ್ಲೇ ಮುಳುಗುವುದರಿಂದಾಗುವ ಅಪಾಯಗಳು..

ಮಕ್ಕಳ ಜೊತೆಗೆ ಇದ್ದಾಗ ಅವರಿಗೆ ಮೊದಲು ಸಮಯ ಕೊಡಬೇಕು. ಮಕ್ಕಳ ಮೇಲೆ ಕೈ ಮಾಡುವುದಾಗಲಿ, ಅವರಿಗೆ ಜೋರಾಗಿ ಬೆದರಿಸುವುದಾಗಲಿ ಮಾಡಲೇಬಾರದು. ಮಕ್ಕಳ ಜೊತೆಗೆ ಹೆಚ್ಚಾಗಿ ಮಾತನಾಡುವುದು ಅವರ ಬೆಳವಣಿಗೆ ವೃದ್ಧಿಯಾಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮೀಯ ಬಾಂಧವ್ಯ ಬೆಳೆಸಲು ಸಹಾಯಕಾರಿಯಾಗುತ್ತದೆ. ಜೊತೆಗೆ ಮಕ್ಕಳಿಗೂ ಮೊಬೈಲ್ ಬಳಕೆ ತಪ್ಪಿಸಬಹುದು.

ಹಠ ಮಾಡುವ ಮಕ್ಕಳನ್ನು ಪೋಷಕರು ನಿಭಾಯಿಸುವುದು ಹೇಗೆ?

ಸಾಮಾನ್ಯವಾಗಿ ಮಕ್ಕಳು ತಮಗೆ ಬೇಕಾದದ್ದನ್ನು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಅಳುತ್ತಾರೆ. ಹಠ ಮಾಡುತ್ತಾರೆ. ಆದರೆ, ಇದನ್ನು ಮರೆ ಮಾಡಲು ಪೋಷಕರು ಅವರಿಗೆ ಮೊಬೈಲ್ ಸೇರಿದಂತೆ ಇಷ್ಟವಾದ ಆಟಿಕೆಗಳನ್ನು ಕೊಡಿಸುತ್ತಾರೆ. ಇದೇ ಪೋಷಕರು ಮಾಡುವ ಮೊದಲ ತಪ್ಪು. ಮಕ್ಕಳು ಸ್ವಲ್ಪ ಹೊತ್ತು ಅತ್ತರೆ ಅಳಲಿ. ಅಳುತ್ತಾರೆ ಎಂದು ಅವರು ಹೇಳಿದಂತೆಯೇ ಕೇಳುವುದನ್ನು ರೂಢಿಸಿಕೊಳ್ಳದಿರಿ. ಇದರಿಂದ ಅವರು ದಿನದಿಂದ ದಿನಕ್ಕೆ ಹಠ ಜಾಸ್ತಿ ಮಾಡುತ್ತಾ ಹೋಗುತ್ತಾರೆ. ಅತ್ತರೆ ನಾವು ಕೇಳಿದ್ದನ್ನು ಕೊಡಿಸುತ್ತಾರೆ ಎನ್ನುವ ಮನೋಭಾವ ಅವರಲ್ಲಿ ಮೂಡುತ್ತದೆ. ಹೀಗಾಗಿ ಆದಷ್ಟು ಮಕ್ಕಳ ಜೊತೆಗೆ ಮಾತನಾಡುವುದು, ಅವರನ್ನು ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುಂತೆ ಮಾಡುವುದರಿಂದ ಹಠವನ್ನು ತಪ್ಪಿಸಬಹುದು.

ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಮಕ್ಕಳನ್ನು ದೂರವಿಡಿ..

ಇತ್ತೀಚೆಗೆ ಮನೆಗಳಲ್ಲಿ ನಾಯಿ, ಬೆಕ್ಕು ಇದ್ದೇ ಇರುತ್ತವೆ. ಯಾವುದೇ ಸಾಕು ಪ್ರಾಣಿಗಳಿದ್ದರು ಮೊದಲು ಅದಕ್ಕೆ ವ್ಯಾಕ್ಸಿನೇಷನ್ ನೀಡಲೇಬೇಕು. ಕೇವಲ ನಾಯಿ ಅಥವಾ ಬೆಕ್ಕುಗಳು ಕಚ್ಚುವುದಲ್ಲದೇ, ಅದರ ಎಂಜಲಿನಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಮೇಲಿನ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸುವುದು ಪೋಷಕರ ಕರ್ತವ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.