ಕೆಂಪು ಸಿಗ್ನಲ್. ಮಧ್ಯಾಹ್ನದ ಬಿಸಿಲು. ಎರಞಿಪಾಲಂನ ಜಂಕ್ಷನ್ನಲ್ಲಿ ವಾಹನಗಳ ಸಾಲು... ಕಾರುಗಳ ಹಾರ್ನ್, ಬಸ್ಗಳ ಗರ್ಜನೆ, ಜನರ ಓಡಾಟ–ನಗರ ತನ್ನದೇ ಗಡಿಬಿಡಿಯಲ್ಲಿ ಮುಳುಗಿದೆ. ಅಷ್ಟರಲ್ಲಿ ಒಂದು ಸ್ಕೂಟರ್ ಸಾಲಿನಿಂದ ಹೊರಬಂದು ಫುಟ್ಪಾತ್ಗೆ ನುಗ್ಗುತ್ತದೆ. ಪಾದಚಾರಿಗಳು ಬೆಚ್ಚಿಬಿದ್ದು ಬದಿಗೆ ಸರಿಯುತ್ತಾರೆ. ಕೆಲವರು ಅಸಹನೆಯ ನೋಟ ಬೀರುತ್ತಾರೆ. ಯಾರೂ ಮಾತಾಡುವುದಿಲ್ಲ.

ಆ ಕ್ಷಣದಲ್ಲಿ, ನೆರೆಕೂದಲನ್ನು ಹಿಂದೆ ಕಟ್ಟಿಕೊಂಡು, ಸೀರೆ ಉಟ್ಟ ವೃದ್ಧೆಯೊಬ್ಬರು ಫುಟ್ಪಾತ್ ಮಧ್ಯೆ ನಿಂತುಕೊಳ್ಳುತ್ತಾರೆ. ಅವರ ಕಣ್ಣುಗಳಲ್ಲಿ ಭಯವಿಲ್ಲ, ಧ್ವನಿಯಲ್ಲಿ ನಡುಕುವಿಲ್ಲ.

‘ಇದು ಪಾದಚಾರಿಗಳ ರಸ್ತೆ. ಹಿಂದಕ್ಕೆ ಹೋಗಿ’

ಸ್ಕೂಟರ್ ಸವಾರ ಅಚ್ಚರಿಯಿಂದ ನೋಡುತ್ತಾನೆ. ‘ಪಕ್ಕಕ್ಕೆ ಸರಿಯಿರಿ’ ಎಂದು ಅವನೇ ಸೂಚನೆ ಕೊಡಲು ಯತ್ನಿಸುತ್ತಾನೆ. ಆದರೆ ಆ ವೃದ್ಧೆ ಒಂದು ಹೆಜ್ಜೆಯೂ ಹಿಂದಕ್ಕೆ ಸರಿಯುವುದಿಲ್ಲ. ಅವನು ಮುನ್ನುಗ್ಗಲು ಪ್ರಯತ್ನಿಸುತ್ತಾನೆ. ಅವರು ಕಾಲು ಅಡ್ಡಗಟ್ಟಿ ನಿಲ್ಲಿಸುತ್ತಾರೆ. ಬ್ಯಾಗ್ನಿಂದ ಮೊಬೈಲ್ ತೆಗೆದು ವಾಹನದ ಸಂಖ್ಯೆ ದಾಖಲಿಸಲು ಮುಂದಾಗುತ್ತಾರೆ. ಕ್ಷಣಕಾಲ ತೀವ್ರ ಮೌನ. ನಂತರ ಸ್ಕೂಟರ್ ಹಿಂದಿರುಗಿ ರಸ್ತೆಗೆ ಇಳಿಯುತ್ತದೆ.

ಪಕ್ಕದ ಕಟ್ಟಡದ ಮಳಿಗೆಯ ಮೇಲ್ಛಾವಣಿಯಿಂದ ಈ ದೃಶ್ಯವನ್ನು ಯಾರೋ ಚಿತ್ರೀಕರಿಸುತ್ತಾರೆ. ವಿಡಿಯೊ ಸಾಮಾಜಿಕ ಜಾಲತಾಣಕ್ಕೆ ತಲುಪಿದ ಕ್ಷಣದಿಂದಲೇ ಅದು ಕಾಳ್ಗಿಚ್ಚಿನಂತೆ ಹರಡುತ್ತದೆ.

‘ಸಿಂಗಂ ಪೆಣ್ಣೆ!’
‘ಇದನ್ನೇ ನಾಗರಿಕ ಧೈರ್ಯ ಅಂದ್ರು!’
‘73ರಲ್ಲಿ ಇಷ್ಟೊಂದು ಆತ್ಮವಿಶ್ವಾಸ!’
‘ಫುಟ್ಪಾತ್ಗಾಗಿ ಹೋರಾಡಿದ ನಿಜವಾದ ನಾಯಕಿ!’

ಥಮ್ಸ್ಅಪ್ ತೋರಿಸುತ್ತಿರುವ ಆ ವೃದ್ಧೆಯ ಚಿತ್ರ ವೈರಲ್ ಆಗುತ್ತದೆ. ಸಾವಿರಾರು ಶೇರ್ಗಳು. ಲಕ್ಷಾಂತರ ವೀಕ್ಷಣೆಗಳು. ಪ್ರಶಂಸೆಯ ಸುರಿಮಳೆ.

ಆ ವೃದ್ಧೆ– 73 ವರ್ಷದ ಪ್ರಭಾವತಿ. ಕೋಯಿಕ್ಕೋಡ್ನ ಜನಪ್ರಿಯ ‘ಪ್ರಭೇಚಿ’.

‘ಈ ಅನುಭವ ನನಗೆ ಹೊಸದೇನಲ್ಲ’

‘ಫುಟ್ಪಾತ್ನಲ್ಲಿ ವಾಹನ ತಡೆದದ್ದು ಇದೇ ಮೊದಲಲ್ಲ’ ಎಂದು ಅವರು ಸಮಾಧಾನದಿಂದ ಹೇಳುತ್ತಾರೆ.

‘ಪಾದಚಾರಿ ಮಾರ್ಗ ಪಾದಚಾರಿಗಳಿಗೆ. ಇದು ನಿಯಮ. ಈ ವಿಚಾರದಲ್ಲಿ ರಾಜಿಯೇ ಇಲ್ಲ.’

ಕೋಯಿಕ್ಕೋಡ್ ಜಿಲ್ಲೆಯ ಎರಞಿಪಾಲಂನ ಕೊಯೇರಿಯ ಪಾಲಂನಲ್ಲಿ ವಾಸಿಸುವ ಪ್ರಭಾವತಿ ಅಮ್ಮ, ಹೋರಾಟದ ಮನೋಭಾವವನ್ನು ಬಾಲ್ಯದಲ್ಲೇ ಮೈಗೂಡಿಸಿಕೊಂಡವರು. ಎಡ ಚಳವಳಿಯಲ್ಲಿ ಸಕ್ರಿಯರಾಗಿದ್ದ ಸೋದರಮಾವ ಮನೆಗೆ ತರುತ್ತಿದ್ದ ಪತ್ರಿಕೆಗಳು, ನಿಯತಕಾಲಿಕೆ
ಗಳು, ಪುಸ್ತಕಗಳು ಅವರ ಚಿಂತನೆಗೆ ದಿಕ್ಕು ತೋರಿಸಿವೆ. ಅನ್ಯಾಯ ಕಂಡರೆ ಮೌನವಾಗಿರದ ಸ್ವಭಾವ ಅಲ್ಲಿ ಬೆಳೆದದ್ದು.

ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರು ಸಿಪಿಎಂನ ಮಹಿಳಾ ಘಟಕದ ಕೋಯಿಕ್ಕೋಡ್ ಜಿಲ್ಲಾ ಸಮಿತಿಯಲ್ಲಿ ಸಕ್ರಿಯರಾಗಿದ್ದರು. ಕೆ.ಆರ್.ಗೌರಿ ಅಮ್ಮ ಅವರಿಂದ ಪ್ರೇರಣೆ ಪಡೆದವರು. ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳು ಅವರ ಜೀವನದ ಅವಿಭಾಜ್ಯ ಅಂಗವಾಗಿದ್ದವು.

ನಿಯಮ ಪಾಲನೆ; ವೈಯಕ್ತಿಕ ನಂಬಿಕೆ

70ರ ದಶಕದಲ್ಲೇ ಕಾರು, ಬೈಕ್ ಓಡಿಸಲು ಕಲಿತವರು ಪ್ರಭಾವತಿ. ಹುಡುಗರ ಜೊತೆ ಕ್ರಿಕೆಟ್, ಫುಟ್ಬಾಲ್ ಆಡಿದವರು. ಆ ಕಾಲಕ್ಕೆ ಅದು ಅಪರೂಪ. ಹಾಸ್ಟೆಲ್ ವಾರ್ಡನ್ ಆಗಿ ಕೋಯಿಕ್ಕೋಡ್, ತಿರುವನಂತಪುರ, ಎರ್ನಾಕುಳಂ ನಗರಗಳಲ್ಲಿ ಕೆಲಸ ಮಾಡುವಾಗ ಲಂಚದ ವಿರುದ್ಧ ಧ್ವನಿ ಎತ್ತಿದವರು.

‘ನಾನು ಯಾವಾಗಲೂ ನಿಯಮ ಪಾಲಿಸುತ್ತೇನೆ. ಅದು ದೊಡ್ಡ ಸಾಧನೆ ಅಲ್ಲ. ಆದರೆ ಎಲ್ಲರೂ ಪಾಲಿಸಬೇಕು’ ಎಂದು ಅವರು ಹೇಳುತ್ತಾರೆ.

ಒಮ್ಮೆ ಫುಟ್ಪಾತ್ನಲ್ಲಿ ಬಂದ ಬೈಕ್ ಸವಾರನನ್ನು ತಡೆದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಎದುರಿಸಿದ್ದರು. ಕೋಪಗೊಂಡ ಪ್ರಭಾವತಿ ಅಮ್ಮ ಮುಷ್ಟಿ ಮಾಡಿ ಹೊಡೆದಿದ್ದರು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. ಕೊನೆಗೆ ಯುವಕ ಕ್ಷಮೆ ಕೇಳಿದ.

ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವುದರ ಬಗ್ಗೆ ಅವರು ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಮೊಬೈಲ್ನಲ್ಲಿ ಇಂತಹ ಅನೇಕ ವಿಡಿಯೊಗಳಿವೆ. ಆದರೆ ಫೆಬ್ರುವರಿ 10ರ ಘಟನೆ ಮಾತ್ರ ದೇಶದ ಗಮನ ಸೆಳೆದದ್ದು.

ವಿಡಿಯೊವನ್ನು ಚಿತ್ರೀಕರಿಸಿದ್ದ ಅಫ್ಲಾಹ್ ಎಂಬ ಯುವಕ ತನ್ನ ‘ಅಫ್ಲು ಸ್ಟೋರಿಸ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ಇಷ್ಟೊಂದು ದೊಡ್ಡ ಮಟ್ಟದಲ್ಲಿ ಈ ವಿಡಿಯೊ ವೈರಲ್ ಆಗುತ್ತದೆ ಎಂದು ಊಹಿಸಲಿಲ್ಲ’ ಎಂದು ಹೇಳುತ್ತಾರೆ.

ದೇಶಾದ್ಯಂತ ಸುದ್ದಿ

ಕೇರಳ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಕರೆ ಮಾಡಿ ಅಭಿನಂದಿಸಿದರು. ಕೇರಳ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಮನೆಗೆ ಬಂದು ಸನ್ಮಾನಿಸಿದರು. ಪೊಲೀಸರು ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮಗಳಲ್ಲಿ ಅವರನ್ನು ಮಾದರಿಯಾಗಿ ಮುಂದಿಟ್ಟರು. ಸ್ಕೂಟರ್ ಸವಾರನ ಪರವಾನಗಿಯನ್ನು ಅಮಾನತು ಮಾಡಿ, ಒಂದು ವಾರ ಸಂಚಾರ ನಿಯಮ ತರಬೇತಿ ಕೇಂದ್ರಕ್ಕೆ ಕಳುಹಿಸಲಾಯಿತು.

ಟೀಕೆಗಳೂ ಬಂದವು. ‘ಇದು ಪೊಲೀಸರ ಕೆಲಸ, ನಿಮ್ಮದು ಅಲ್ಲ’ ಎಂದೂ ಕೆಲವರು ಹೇಳಿದರು. ಆದರೆ ಪ್ರಭೇಚಿಗೆ ಉತ್ತರ ಸಿದ್ಧ. ‘ನಾನು ಪೊಲೀಸ್ ಅಲ್ಲ. ಆದರೆ ನಾಗರಿಕಳು. ಫುಟ್ಪಾತ್ನಲ್ಲಿ ನಡೆಯುವವರ ಸುರಕ್ಷತೆ ನನ್ನ ಹೊಣೆಗಾರಿಕೆಯೂ ಹೌದು’ ಎನ್ನುತ್ತಾರೆ.

ಕೇರಳ ಸರ್ಕಾರದ ಸಾಕ್ಷರತಾ ಕೋರ್ಸ್ ಪೂರ್ಣಗೊಳಿಸಿರುವ ಅವರು ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಪ್ರತಿದಿನ ಪತ್ರಿಕೆ ಓದುತ್ತಾರೆ. ಟಿ.ವಿ.ಯಲ್ಲಿ ದೈನಂದಿನ ಬೆಳವಣಿಗೆ ಗಮನಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ. ಮೊಬೈಲ್ನಲ್ಲಿ ಸಣ್ಣಪುಟ್ಟ ವಿಡಿಯೊ ಎಡಿಟ್ ಮಾಡುವುದೂ ಗೊತ್ತು.

ಸದ್ಯ ಒಂಟಿ ಜೀವನ. ವೃದ್ಧಾಪ್ಯ ವೇತನ, ಪಡಿತರ, ಸಂಬಂಧಿಕರ ಸಹಾಯ–ಇವೇ ಜೀವನಾಧಾರ. ಆದರೂ ಸ್ವಾಭಿಮಾನ ಕಳೆದುಕೊಂಡಿಲ್ಲ. ‘ಮನಸ್ಸನ್ನು ಪ್ರಫುಲ್ಲವಾಗಿಟ್ಟುಕೊಳ್ಳ
ಬೇಕು. ಅದೇ ಶಕ್ತಿ’ ಎಂದು ಅವರು ನಗುತ್ತಾರೆ.

ಫುಟ್ಪಾತ್ನ ಅರ್ಥ

ನಗರಗಳಲ್ಲಿ ಫುಟ್ಪಾತ್ಗಳು ಬಹಳ ಬಾರಿ ಅಲಂಕಾರ ಮಾತ್ರವಾಗಿವೆ. ಕೆಲವೊಮ್ಮೆ ಅಂಗಡಿಗಳ ವಿಸ್ತರಣೆ, ಕೆಲವೊಮ್ಮೆ ವಾಹನಗಳ ಶಾರ್ಟ್ಕಟ್. ಆದರೆ ನಡೆದುಕೊಂಡು ಹೋಗುವವರಿಗೆ ಅದು ಸುರಕ್ಷಿತ ದಾರಿ.

ಪ್ರಭಾವತಿ ಅಮ್ಮ ಹೇಳುವ ಮಾತು ಸರಳ– ‘ನಡೆಯುವವರಿಗೆ ಭಯವಿಲ್ಲದಿರಲಿ.’

ಅವರ ಹೋರಾಟ ಕೇವಲ ಒಂದು ಸ್ಕೂಟರ್ ವಿರುದ್ಧದ್ದಲ್ಲ. ಅದು ನಿಯಮ ಉಲ್ಲಂಘನೆಯ ವಿರುದ್ಧದ ನಿಲುವು. ಅದು ಮೌನದ ವಿರುದ್ಧದ ಧೈರ್ಯ. ಅದು ‘ಯಾರಾದರೂ ಮಾಡಲಿ’ ಎಂಬ ನಿರೀಕ್ಷೆಯ ಬದಲು ‘ನಾನು ಮಾಡುತ್ತೇನೆ’ ಎನ್ನುವ ನಿರ್ಧಾರ.

ಅಷ್ಟೇನೂ ಸುಸ್ಥಿತಿಯಲ್ಲಿರದ ಮನೆಯಲ್ಲಿ ವಾಸ. ಕೆಲಸ ಮಾಡಲು ಉತ್ಸಾಹ ಇದ್ದರೂ ವಯಸ್ಸಿನ ಕಾರಣ ಅವಕಾಶ ಸಿಗುವುದಿಲ್ಲ. ಆದರೂ ಅವರು ಹೆಮ್ಮೆಯಿಂದ ಹೇಳುತ್ತಾರೆ: ‘I’m still young!’. ಮುಷ್ಟಿ ಬಿಗಿದು ಹೆಬ್ಬೆರಳು ತೋರಿಸುತ್ತಾರೆ. ಆ ನಗುವಿನಲ್ಲಿ ಕುಗ್ಗುವಿಕೆ ಇಲ್ಲ. ಆ ಕಣ್ಣಿನಲ್ಲಿ ಭಯವಿಲ್ಲ.

ಫುಟ್ಪಾತ್ ಮಧ್ಯೆ ನಿಂತ ಆ ಕ್ಷಣ ಕೇವಲ ವೈರಲ್ ವಿಡಿಯೊ ಅಲ್ಲ. ಅದು ಒಂದು ಪಾಠ–ನಾಗರಿಕ ಜವಾಬ್ದಾರಿ ವಯಸ್ಸು ನೋಡದು. ನಿಯಮ ಪಾಲನೆ ಸರ್ಕಾರದ ಆದೇಶದಿಂದ ಮಾತ್ರ ಸಾಧ್ಯವಲ್ಲ; ಅದು ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟಬೇಕು.

73ರ ಪ್ರಭೇಚಿ ಅದನ್ನು ತೋರಿಸಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.