ಅಗ್ದಿ ಏನೂ ಆಗಿಲ್ಲ ಅನ್ನುಹಂಗ ನನ್ಮುಂದ ಕುಂತು ಏನಾಯಿತು? ಯಾಕಿಷ್ಟು ದುಃಖ, ಕಣ್ತುಂಬಿ ಬಂದಿದ್ದು ಯಾಕ ಅಂತೆಲ್ಲ ಕೇಳಬ್ಯಾಡ ಮಾರಾಯ.. ಎಲ್ಲಾರ ಮುಂದ ನಿನ್ನ ಹೆಸರೇ ಬರಬಹುದು.. ಆ ಕಥಿ ಈಗ ಬ್ಯಾಡ ಬಿಡು. ಹೆಂಗ ನೀ ಕಾರಣ, ಯಾಕ ನೀ ಕಾರಣ ಅನ್ನೂದು ಈಗರೆ ಹೇಳುವ ಜರೂರು ಏನೈತಿ..? ಇದ್ದಾಗ ಮುದ್ದಾಮ್ ಹೇಳೂನಂತ... ಅನ್ಕೊಂತ ತಡಕೊಬಹುದು.

ಮುಂದಿನ ಸಾಲು ಅದೆಂಥ ಮತಲಬಿ ದುನಿಯಾ ಇದು ಅನ್ನೂದನ್ನ ಹೇಳ್ತದ. ಹೌದಲ್ಲ.. ಅಗ್ದಿ ನಮ್ಮೋರು ಅನ್ಕೊಂಡೋರೆ ವಿಷದ, ಮಾತಿನ ಕೂರಂಬುಗಳನ್ನು ನಮ್ಮತ್ತ ತೂರಿಬಿಡ್ತಾರ.

ಗೆಳೆಯರ ಊರಾಗ, ದ್ವೇಷದ ಬಾಣದೇಟುಗಳನ್ನುಂಡು ಯಾರ ಯಾರ ಹೆಸರು ಆರ್ತನಾಗಿ ಕರದೆ.. ಆ ಕಥಿನೂ ಇನ್ನ ಯಾವಾಗರೆ..

ಹಂಗ ನೋವುಂಡಾಗ ಯಾರನ್ನ ನೆನಸಿದೆ, ಯಾರು ಏನನ್ನು ನನ್ನ ಪಾಲಿಗೆ ಕೊಟ್ರು.. ಯಾರವರೆಲ್ಲ, ನಮ್ಮೊಟ್ಟಿಗೆ ಉಂಡು ನಮಗೇ ಮೋಸ ಮಾಡಿದವರು... ಇರಲಿ.. ಆ ಕಥಿನೂ ಹೇಳ್ತೇನಿ.. ಯಾವಾಗರೆ..

ಅದರ ಮುಂದಿನ ಸಾಲು, ಅಗ್ದಿ ಪ್ರೀತಿ ಇದ್ದ ಸಂಗಾತಿಗಳ ನಡುವೆ ಬಂದ ಇನ್ನೊಬ್ಬರು ಯಾರು? ಬಂದಿದ್ದಾದರೂ ಯಾಕ, ಹೆಂಗ? ಅದನ್ನೊಂದು ಸೋಲು ಗೆಲುವುಗಳ ಆಟ ಅನ್ಕೊಂಡಂಗ..

ಪ್ರೀತಿಯ ಬಾಝಿ, ನಿಷ್ಠೆಯ ಪಥದೊಳಗ
ಗೆದ್ದೋರು ಯಾರು, ಸೋತೋರು ಯಾರು..
ಇರಲಿ ಆ ಕಥಿನೂ ಇನ್ನ ಯಾವಾಗರೆ..

ಹಿಂಗ ಈ ಕೊನಿಯ ನಾಲ್ಕು ಪದಗಳು ಯೇ ಕಹಾನಿ ಫಿರ್ ಸಹಿ... ಅಂತ
ಹಿಂಗ ಫಿರ್ ಸಹಿ ಅಂತ್ಹೇಳುವಾಗ ಹೇಳುವ ಅವಕಾಶಗಳು ಬರ್ತಾವೋ ಇಲ್ವೊ..

ಜೀವನ ಸಣ್ದು.. ಕಥಿ ದೊಡ್ದೊಡ್ಡುವು... ಹೇಳಬೇಕನಿಸಿದ್ರ ಹೇಳ್ರಿ. ಆದ್ರ ಹೇಳೂದ್ರಿಂದ ಏನೂ ಸುಧಾರಣೆ, ಬದಲಾವಣೆ ಆಗೂದಿಲ್ಲಂದ್ರ, ಫಿರ್ ಸಹಿ ಅಂತ ಗುನುಗಿಕೊಂಡು ಸುಮ್ನಾಗ್ರಿ..

ಮುಂದಿನವಾರ ಮತ್ತೊಂದು ನಜ್ಮ್ ಜೊತಿಗೆ ಬರ್ತೀನಿ, ಕಾಯ್ತೀರಲ್ಲಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.