ಅವೊತ್ತೊಂದಿನ ನಮ್ಮ ಸೋದರತ್ತಿ ಮನ್ಯಾಗ ಹಾಡು ಕೇಳ್ತಿದ್ದೆ. ಒಂದೆರಡು ಸಲ ಅಲ್ಲ, ನಾಲ್ಕೈದು ಸಲ ಅದೇ ಟೇಪು ತಿರಗಸ್ತಿದ್ದೆ. ಮರುದಿನ ನಮ್ಮಾವ ಕೇಳಿದ್ರು.. ಅಲ್ಲಮ್ಮ ಪುಟ್ಟಿ, ಆ ಹಲ್ಕಾ ಹಲ್ಕಾ ಅಂತ ಬೈಕೊಂತ ಹಾಡ್ತಾನಲ್ಲಮ್ಮ, ಆ ಹಾಡು ಹಚ್ಚು ಅಂತಂದ್ರು. ಯಾವುದದು ಬೈಕೊಂತ ಹಾಡೂದು ಅಂತ ತೆಲಿ ಕೆಡಸ್ಕೊಂಡೆ.. ಯಾವುದ್ರಿ ಮಾಮಾರಿ ಅಂತ ಅವರಿಗೇ ಕೇಳಿದೆ.

ಅದೇ ಪುಟ್ಟಕ್ಕ, ನೆನ್ನೆ ಸಂಜೀತನಾ ಕೇಳಿದಿಯಲ್ಲ ಆ ಹಾಡು ಅಂದ್ರು..

ತಲಿಗೆ ಸುತ್ತಗಿ ತೊಗೊಂಡು ಹೊಡದ್ಹಂಗ ತಲಿ ಸುತ್ತಿ ಬಂದಿತ್ತು. ನಾನು ಕೇಳಿದ್ದು ನಮ್ಮ ಉಸ್ತಾದ್ ನುಸ್ರತ್ ಫತೇ ಅಲಿ ಖಾನ್ ಅವರು ಹಾಡಿದ್ದ

ಯೇ ಜೋ ಹಲ್ಕಾ ಹಲ್ಕಾ ಸುರೂರ್ ಹೈ, ತೇರಿ ನಜರ್ ಕಾ ಕುಸೂರ್ ಹೈ ಅಂತ ಅಬ್ದುಲ್ ಹಮೀದ್ ಆದಮ್ ಅವರ ಕಲಾಮ್ ಅದು. ಸ್ವಾತಂತ್ರ್ಯ ಪೂರ್ವದ ಭಾರತೀಯ ಕವಿಗಳಲ್ಲಿ ಅತಿ ಹೆಚ್ಚು ಹೆಸರು ಮಾಡಿದವರು. 1981ರೊಳಗ ಪಾಕಿಸ್ತಾನದಾಗ ಅವರು ನಿಧನರಾದರು.
.ರೂಬರೂಹ್ | ಮೇರೆ ರಷ್ಕ್ ಎ ಖಮರ್; ಏನಿದರ ಅರ್ಥ?.ರೂಬರೂಹ್- ಅಷ್ಟಕ್ಕೂ ಏನು ಹೇಳ್ತದ ಈ ಹಾಡು...
ಆದ್ರ ಈ ಕಲಾಮಿನಾಗ ಕಣ್ಣು ನೋಟವನ್ನು ಅದೆಷ್ಟು ಚಂದ ಹೊಗಳ್ತಾರಂದ್ರ, ಹದಿಹರೆಯದ ಪ್ರೀತಿಯೊಳಗ ನೋಡಿದಲ್ಲೆಲ್ಲ ಪ್ರಿಯತಮೆಯ ಕಣ್ಣು ಕಂಡಂಗ, ಮುಖ ಕಂಡಂಗ ಅದೊಂದು ನಮೂನಿ ನಶಾ ಇರ್ತದಲ್ಲ, ಅಂಥ ಪ್ರೀತಿಯನ್ನು ಇಲ್ಲಿ ಹಾಡಿಹೊಗಳಿ ಬರೀತಾರ. ಆದ್ರ ಆ ನಶಾ ಬಗ್ಗೆಯೂ ಅಷ್ಟೇ ಕಕ್ಕುಲಾತಿ.

ಹರಟಿ ಭಾಳಾಯ್ತು ಅಂತನಿಸ್ತನ.. ಬರ್ರಿ, ಸೀದಾ ಹಾಡಿನ ಕಡೆ ಹೋಗೂನಂತ.

ಯೇ ಜೊ ಹಲ್ಕಾ ಹಲ್ಕಾ ಸುರೂರ್ ಹೈ, ತೇರಿ ನಜರೋಂಕಾ ಕುಸೂರ್ ಹೈ

ಕೆ ಶರಾಬ್ ಪೀನಾ ಸಿಖಾದಿಯಾ

ये जो हल्का हल्का सुरूर है
ये तेरी नज़र का क़ुसूर है

कि शराब पीना सीखा दिया
तिरे प्यार ने तिरी चाह ने

तेरी बहकी-बहकी निगाह ने मुझे इक शराबी बना दिया

( ಗಾಳಿಕೆನಿಯಂಥ ಹಗುರ ಅಮಲೊಂದು ಆಗೇದಲ್ಲ, ನಿನ್ನ ಕಣ್ನೋಟದ ದೋಷ ಅದ, ನನಗ ಕುಡಿಯಾಕ ಕಿಲಿಸಿದ್ವು ಇವು, ನಿನ್ನ ಪ್ರೀತಿ, ನಿನ್ನ ಬಯಕಿ, ನಿನ್ನ ಚಾಂಚಲ್ಯದ ನೋಟ ನನಗ ಕುಡುಕನಾಗಿಸಿದ್ವು)

ಹೊಗ್ಗೊ ವನ, ತನ್ನ ಪ್ರೀತಿಗೆ, ತನ್ನ ನಶಾಕ್ಕ ಹುಡುಗಿ ಮ್ಯಾಲೆ ಹಾಕಿ ಹಾಡಿದ್ನ ಕವಿ ಅಂತನಿಸೂದ್ರೊಳಗೇ ಇನ್ನೊಂದು ಸಾಲು ಸಾಲ ಕೊಟ್ಟಂಗ ಹೇಳ್ತಾರ...

शराब कैसी ख़ुमार कैसा
ये सब तुम्हारी नवाज़िशें हैं
पिलाई है किस नज़र से तू ने
कि मुझ को अपनी ख़बर नहीं है

ಎಂಥ ಶರಾಬದು, ಅದೆಂಥ ನಶಾ ಇದು, ಅಂತಿಂಥ ನಶಾ ಅಲ್ಲ, ಬೇಹೋಶ್ ಆಗುವಂಥದ್ದು, ಹೋಶ್ ಪ್ರಜ್ಞೆ, ಇದು ಪ್ರಜ್ಞೆನೇ ಕಳದುಕೊಳ್ಳೂವಂಥದ್ದು, ಅದೆಂಥ ನೋಟದಿಂದ ಕುಡಿಸಿದಿ ನೀ ನನಗ.. ನಂದು ನನಗೇ ಖಬರು ಇಲ್ಲ..

ಇಷ್ಟು ಕಳದುಹೋಗೀನಿ, ಮರತೇಹೋಗೀನಿ ನಾನು ಅನ್ಕೊಂತ ಆ ಕ್ಷಣದಾಗ ಹೆಂಗನಸ್ತದ ಗೊತ್ತೇನು ದುನಿಯಾ?

ಮಸ್ತ್...

ಮಸ್ತ್.. ಮಸ್ತ್ ಮಸ್ತ್.. ಸಾರಾ ಜಹಾಂ ಮಸ್ತ್ ಜಹಾಂ ಕಾ ನಿಜಾಮ್ ಮಸ್ತ್.. ಇಡೀ ಜಗತ್ತು ಮಸ್ತನಿಸ್ತದ. ಮಸ್ತ ಜಗತ್ತಿನದ ದೇವರೂ ಮಸ್ತದಾನ ಅನಸ್ತದ. ಮಸ್ತ್ ಅನ್ನೂದು ಬರೇ ಪದ ಅಲ್ಲ, ಅದೊಂದು ಅನುಭೂತಿ ಇಲ್ಲಿ. ಮುಂದಿನ ಸಾಲು ಹೇಳ್ತದ, ನಾನಷ್ಟೇ ನಶಾದೊಳಗಿರಲ್ಲ. ಮದಿರೆ ಇರುವ ಕುಂಭವೂ ಅಂದ್ರ ಆ ಮಡಕೆಯೂ, ಶೀಶಾನೂ ಗಾಜಿನ ಬಾಟಲಿಯೂ, ಸುಬು ಅಂದ್ರ ಸಣ್ಣ ಕುಳ್ಳಿಯೂ, ಜಾಮ್ನೂ ಅಂದ್ರ ಮದಿರೆಯ ಬಟ್ಟಲೂ ಮಸ್ತ್ ಅದಾವ. ಜಗತ್ತಿನ ಅಣು, ಕಣಗಳೆಲ್ಲ ಮಸ್ತ್ ಅನಸಾತಾವ. ಆ ನಶಾದೊಳಗ ಮರತೇ ಹೋಗ್ಯಾವ. ದಿನ್ ಮಸ್ತ್, ರಾತ್ ಮಸ್ತ್ ಶಾಮ್ ಮಸ್ತ್, ಸೆಹರ್ ಮಸ್ತ್.. ದಿನ, ರಾತ್ರಿ, ಮುಂಜೇನೆ, ಸಂಜೀಕ ಎಲ್ಲಾನೂ ನಶೆಯೊಳಗ ಧುತ್ ಆಗ್ಯಾವ. ಚಂದ ಆಗ್ಯಾವ. ಪ್ರೇಮದ ಬಣ್ಣದೊಳಗ ಮಿಂದೆದ್ದಾವ..

ಯೇ ತೊ ಸಾಖಿ ಹರ್ ತರಹಾ ಕಿ ತೇರೆ ಮೈಖಾನೆ ಮೆ ಹೈ ಇನ್ನ ಯಾರಯಾರ ಬಗ್ಗೆ ಹೇಳಲಿ ಸಾಖಿ, ಎಲ್ಲ ಥರದವರೂ ನಿನ್ನ ಮಧುಶಾಲೆಯೊಳಗದಾರ. ಎಲ್ಲಾರೂ ಮಸ್ತ್ ಅದಾರ. ನಿನ್ನ ಕಂಗಳ ಕಾಂತಿಯೊಳಗ ಕಳದು ಹೋಗ್ಯಾರ.

ಅದೂನು ತುಸುವಂದ್ರು, ತುಸು ಆ ಕಣ್ಣಾಗಿನ ಮೈಖಾನೆಯೊಳಗೇ ಅದಾರ

दिन मस्त रात मस्त सहर मस्त शाम मस्त
यूँ तो साक़ी हर तरह की तेरे मयख़ाने में है

वो भी थोड़ी सी जो इन आँखों के पैमाने में है
सब समझता हूँ तेरी इश्वा-गरी ऐ साक़ी

काम करती है नज़र नाम है पैमाने का

ಇದೆಲ್ಲ ಜಾದೂ ನಿನ್ನ ನೋಟದ್ದು, ನಿನ್ನಕಂಗಳಿಂದ ಕುಡಿಸಿದ ಮಧುವಿನದ್ದು. ಆದ್ರ ಅಪವಾದ ಮಾತ್ರ ಮದಿರೆಯ ಬಟ್ಟಲಿಗೆ, ನಿನ್ನ ಈ ಚಾಂಚಲ್ಯದ ಕಂಗಳು ನನ್ನ ಕುಡುಕನನ್ನಾಗಿಸಿದವು, ಆ ಪಟ್ಟವನ್ನು ನೀಡಿದವು. ಅಂತ ಹೇಳ್ತಾರ.
.ಪಾಡ್ಕಾಸ್ಟ್ ರೂಬರೂಹ್: ಅಷ್ಟಕ್ಕೂ ಏನು ಹೇಳ್ತದ ಈ ಹಾಡು...ಪ್ರಜಾವಾಣಿ ಪಾಡ್ಕಾಸ್ಟ್ ರೂಬರೂಹ್: ಮೇರೆ ರಷ್ಕ್ ಎ ಖಮರ್.
ಮುಂದಿನ ಸಾಲುಗಳೆಲ್ಲ ಆರಾಧನೆಯನ್ನೇ ಹೇಳ್ತಾವ. ನನಗ ನಮಾಜು ಬರೂದಿಲ್ಲ, ಪೂಜೆನೂ ಬರೂದಿಲ್ಲ. ನಿನ್ನ ಪ್ರೀತಿಯೇ ನನ್ನ ಜೀವನ ಅದ. ನೀ ಮುಂದ ಬಂದಾಗ ಆರಾಧನೆ ಮಾಡ್ತೀನಿ. ಅಲ್ಲಿಗೆ ಜೀವನ ಸಾರ್ಥಕ ಅಂತ.

ಈ ಹಾಡು ಕೇಳೂದಾದ್ರ ನೀವು ನುಸ್ರತ್ ಫತೇ ಅಲಿ ಖಾನ್ ಅವರ ಧ್ವನಿಯೊಳಗೇ ಕೇಳ್ರಿ. ಬದುಕು ಹಗುರ ಅನಿಸ್ತದ. ನನಗ ನೀ ಬೇಕೆಬೇಕು ಅನ್ನುವ ಮೋಹ ಕಳದು, ನೀ ಇದ್ದಲ್ಲಿರು, ನಿನ್ನ ಪ್ರೀತಿಸೂದು ನನಗ ಗೊತ್ತದ ಅನ್ನುವ ಆರಾಧನೆ ಕಲಸ್ತದ.

ಪ್ರೀತಿ ಅಂದ್ರ ನಾವು ಮಾಡುವ ಕಾಳಜಿ ಮತ್ತು ನಾವು ನೀಡುವ ಸಮಯವೇ ಆಗಿರ್ತದ. ಆದ್ರ ಆ ಜೀವ ನಮ್ಮೊಟ್ಟಿಗೆ ಇಲ್ಲಾಂದ್ರ ಏನು ಮಾಡೂದು? ಆ ಜೀವದ ಕ್ಷೇಮಕ್ಕಾಗಿ ಸಜದಾ ಮಾಡಬೇಕು. ದುವಾ ಮಾಡಬೇಕು. ಇದು ಖರೇ ಪ್ರೀತಿ. ಉಳಿದಿದ್ದೆಲ್ಲವೂ ನನ್ನದೆನ್ನುವ ಸುಳ್ಳು. ನಾವು ತೋರಬಹುದಾದ ಪ್ರೀತಿಗಿಂತಲೂ ನಾವು ಮಾಡುವ ಪ್ರೀತಿಯೇ ಶ್ರೇಷ್ಠ ಎಂದೆಲ್ಲ ಕಲಿಸುವಂಥ ಈ ಹಾಡುಗಳು ನಮ್ಮನ್ನ, ನಮ್ಮ ಮನಸನ್ನ ಮೋಹದಿಂದ ಸಾಫ್ ಮಾಡ್ತಾವ. ಸ್ವಚ್ಛೆ ಆಗೂದು, ಪರಿಶುದ್ಧ ಆಗೂದು ಅಂದ್ರ ಮೋಹ ಕಳಚಿಕೊಳ್ಳೂದು. ಎಲ್ಲಾ ನೀನೇ ಅಂತ ಹೇಳೂದು ಅದೆಷ್ಟು ಸರಳದ. ಮತ್ಯಾಕ ನಾವು ಅಷ್ಟು ಕಠಿಣ ಮಾಡ್ಕೊತೀವಿ?

ಈ ವಾರ ತುಸು ಈ ಹಾಡನ್ನು ಕೇಳೂನಂತ. ಮುಂದಿನವಾರ ಮತ್ತ ರೂಬರೂ ಆಗೂನು, ಹೊಸ ಹಾಡಿನೊಂದಿಗೆ. ಕಾಯ್ತೀರಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.