ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಮಾನವೀಯತೆ ಸಂದೇಶ ಸಾರಿದ ಮಹಾತ್ಮ ಗೌತಮ ಬುದ್ಧನ ಜನ್ಮದಿನವನ್ನು 'ಬುದ್ಧ ಪೂರ್ಣಿಮೆ' ಅಥವಾ 'ಬುದ್ಧ ಜಯಂತಿ' ಎಂದು ಆಚರಿಸಲಾಗುತ್ತದೆ.

ವೈಶಾಖ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ದಿನವು ಬೌದ್ಧ ಧರ್ಮೀಯರಿಗೆ ಮಾತ್ರವಲ್ಲದೆ, ಇಡೀ ಮನುಕುಲಕ್ಕೆ ಅತ್ಯಂತ ಪವಿತ್ರವಾದ ದಿನ. ಈ ದಿನವನ್ನು 'ತ್ರಿವಿಧ ಪಾವನ ದಿನ' ಎಂದೂ ಕರೆಯಲಾಗುತ್ತದೆ.

ಬುದ್ಧ ಪೂರ್ಣಿಮೆಗೆ ಬೌದ್ಧ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಬುದ್ಧನ ಜೀವನದ ಮೂರು ಪ್ರಮುಖ ಘಟನೆಗಳು ಇದೇ ವೈಶಾಖ ಪೂರ್ಣಿಮೆಯ ದಿನದಂದು ಸಂಭವಿಸಿವೆ ಎಂದು ಧರ್ಮಗುರುಗಳು ಹೇಳುತ್ತಾರೆ.

ವೈಶಾಖ ಪೂರ್ಣಿಮೆಯ ದಿನದಂದು ನೇಪಾಳದ ಲುಂಬಿನಿಯಲ್ಲಿ ಸಿದ್ಧಾರ್ಥನ (ಬುದ್ಧನ ಬಾಲ್ಯದ ಹೆಸರು) ಜನನವಾಯಿತು. ಸುದೀರ್ಘ ತಪಸ್ಸಿನ ನಂತರ ಬಿಹಾರದ ಗಯಾದಲ್ಲಿ ಅಶ್ವತ್ಥ ಮರದ ಕೆಳಗೆ ಸಿದ್ಧಾರ್ಥನಿಗೆ 'ಬೋಧಿ' ಅಥವಾ ಜ್ಞಾನೋದಯವಾಗಿದ್ದು ವೈಶಾಖ ಪೂರ್ಣಿಮೆ ದಿನದಂದು. ಉತ್ತರ ಪ್ರದೇಶದ ಕುಶಿನಗರದಲ್ಲಿ ಬುದ್ಧ ಮಹಾಪರಿನಿಬ್ಬಾಣವಾಗಿದ್ದು ಇದೇ ದಿನ.

ಹೀಗೆ ಜನನ, ಜ್ಞಾನೋದಯ ಮತ್ತು ಮರಣ ಒಂದೇ ತಿಥಿಯಂದು ಸಂಭವಿಸಿರುವುದು ಈ ದಿನದ ಮಹತ್ವವನ್ನು ಹೆಚ್ಚಿಸಿವೆ. ಹಾಗಾಗಿ ಬೌದ್ಧ ಧರ್ಮಿಯರಿಗೆ ಈ ದಿನ ಅತ್ಯಂತ ಮಹತ್ವವಾದುದು.

ರಾಜಕುಮಾರನಾಗಿ ಹುಟ್ಟಿದ ಬುದ್ಧ ಸುಖ-ಭೋಗಗಳನ್ನು ತ್ಯಜಿಸಿ, ಮನುಕುಲದ ದುಃಖಕ್ಕೆ ಪರಿಹಾರ ಹುಡುಕಲು ಹೊರಟರು. ಅವರು ಬೋಧಿಸಿದ ನಾಲ್ಕು ಆರ್ಯ ಸತ್ಯಗಳು ಇಂದಿಗೂ ಪ್ರಸ್ತುತವಾಗಿವೆ.

ಆಸೆಯನ್ನು ಗೆದ್ದರೆ ದುಃಖವನ್ನು ದೂರ ಮಾಡಬಹುದು ಎಂದು ಹೇಳಿದ ಬುದ್ಧ ಸರಿಯಾದ ದೃಷ್ಟಿ, ಸಂಕಲ್ಪ, ನಡತೆ, ಮಾತುಗಳನ್ನು ಅನುಸರಿಸುವ ಮೂಲಕ ದುಃಖದಿಂದ ಮುಕ್ತಿ ಪಡೆಯಬಹುದು ಎಂದು ಜಗತ್ತಿಗೆ ಸಾರಿದರು.

ಬುದ್ಧ ಪೂರ್ಣಿಮೆ ದಿನ ಬೌದ್ಧ ವಿಹಾರಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಭಕ್ತರು ಬಿಳಿ ಬಟ್ಟೆ ಧರಿಸಿ ಬುದ್ಧನ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾರೆ. ಪ್ರಾರ್ಥನೆ, ಧ್ಯಾನ ಮತ್ತು ಧರ್ಮಗ್ರಂಥಗಳ ಪಠಣ ಮಾಡುವರು. ಪ್ರಾಣಿ ಹಿಂಸೆ ತಡೆಯಲು ಈ ದಿನ ಮಾಂಸಾಹಾರವನ್ನು ತ್ಯಜಿಸಲಾಗುತ್ತದೆ. ಬಡವರಿಗೆ ಅನ್ನದಾನ, ಬಟ್ಟೆ ಮತ್ತು ದಾನಧರ್ಮ ಮಾಡುವ ಮೂಲಕ ಬುದ್ಧನ ಕರುಣೆಯ ಗುಣವನ್ನು ಸ್ಮರಿಸಲಾಗುತ್ತದೆ.

ಭಾರತ ಮಾತ್ರವಲ್ಲದೆ ಶ್ರೀಲಂಕಾ, ತೈಲ್ಯಾಂಡ್, ಟಿಬೆಟ್, ಚೀನಾ, ಜಪಾನ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.