ಬೌದ್ಧ ಧರ್ಮವು ಕೇವಲ ಒಂದು ಧರ್ಮವಲ್ಲ, ಅದು ಒಂದು ಜೀವನ ಪದ್ಧತಿ. ಈ ಪದ್ಧತಿಯನ್ನು ಅತ್ಯಂತ ನಿಷ್ಠೆಯಿಂದ ಪಾಲಿಸುವವರೇ ಬೌದ್ಧ ಬಿಕ್ಕುಗಳು.

ಗೌತಮ ಬುದ್ಧನು ಹಾಕಿಕೊಟ್ಟ ಅಹಿಂಸೆ, ಕರುಣೆ ಮತ್ತು ಜ್ಞಾನದ ಹಾದಿಯಲ್ಲಿ ನಡೆಯುವ ಇವರು, ಸಮಾಜಕ್ಕೆ ಶಾಂತಿಯ ಸಂದೇಶವನ್ನು ನೀಡುವ ಜೀವಂತ ಪ್ರೇರಣೆಗಳಾಗಿದ್ದಾರೆ.

ಬಿಕ್ಕು ಎಂದರೆ ಯಾರು?

'ಬಿಕ್ಕು' ಎಂಬ ಪದವು ಪಾಲಿ ಭಾಷೆಯಿಂದ ಬಂದಿದೆ. ಇದರ ಅರ್ಥ 'ಭಿಕ್ಷೆ ಬೇಡುವವನು' ಅಥವಾ 'ಸಂಸಾರವನ್ನು ತ್ಯಜಿಸಿದವನು' ಎಂದಾಗುತ್ತದೆ. ಲೌಕಿಕ ಸುಖ-ಭೋಗಗಳನ್ನು ತ್ಯಜಿಸಿ, ಮೋಕ್ಷದ ಹುಡುಕಾಟದಲ್ಲಿ ತೊಡಗಿರುವ ಪುರುಷರನ್ನು 'ಬಿಕ್ಕು' ಎಂದು ಮತ್ತು ಮಹಿಳೆಯರನ್ನು 'ಬಿಕ್ಕುಣಿ' ಎಂದು ಕರೆಯಲಾಗುತ್ತದೆ.

ಬೌದ್ಧ ಬಿಕ್ಕುಗಳ ಜೀವನ ಅತ್ಯಂತ ಸರಳತೆಯಿಂದ ಕೂಡಿದೆ. ಅವರ ಜೀವನದ ಕೆಲವು ಮುಖ್ಯ ಲಕ್ಷಣಗಳು ಇಲ್ಲಿವೆ...

ಸರಳ ಉಡುಪು: ಇವರು ಸಾಮಾನ್ಯವಾಗಿ ಕೇಸರಿ ಅಥವಾ ಕಡು ಕೆಂಪು (Maroon) ಬಣ್ಣದ ವಸ್ತ್ರಗಳನ್ನು ಧರಿಸುತ್ತಾರೆ. ಇದು ತ್ಯಾಗದ ಸಂಕೇತವಾಗಿದೆ.

ಅಲ್ಪ ಆಸೆಗಳು: ಬಿಕ್ಕುಗಳು ತಮ್ಮ ಬಳಿ ಕೇವಲ ಎಂಟು ಅಗತ್ಯ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಲು ಅನುಮತಿಯಿರುತ್ತದೆ (ಮೂರು ವಸ್ತ್ರಗಳು, ಒಂದು ಭಿಕ್ಷಾಪಾತ್ರೆ, ಕವಚ, ಸೂಜಿ-ದಾರ ಇತ್ಯಾದಿ).

ವಿನಯ ಪೀಠಕ: ಬಿಕ್ಕುಗಳ ನಡವಳಿಕೆಗಳನ್ನು ನಿಯಂತ್ರಿಸಲು 'ವಿನಯ ಪೀಠಕ' ಎಂಬ ನಿಯಮಾವಳಿಗಳಿವೆ. ಇವು ಶಿಸ್ತಿನ ಜೀವನಕ್ಕೆ ದಾರಿದೀಪವಾಗಿವೆ.

ಧ್ಯಾನ ಮತ್ತು ಮೌನ: ದಿನದ ಬಹುಪಾಲು ಸಮಯವನ್ನು ಇವರು ಧ್ಯಾನ ಮತ್ತು ಧರ್ಮಗ್ರಂಥಗಳ ಅಧ್ಯಯನದಲ್ಲಿ ಕಳೆಯುತ್ತಾರೆ.

ದೈನಂದಿನ ಜೀವನದ ಕ್ರಮ...

ಬೌದ್ಧ ಬಿಕ್ಕುಗಳ ದಿನಚರಿ ಸೂರ್ಯೋದಯಕ್ಕೂ ಮುನ್ನವೇ ಆರಂಭವಾಗುತ್ತದೆ. ಮುಂಜಾನೆ ಎದ್ದ ಕೂಡಲೇ ಮನಸ್ಸಿನ ಶಾಂತಿಗಾಗಿ ಧ್ಯಾನ ಮಾಡುತ್ತಾರೆ.

ನಂತರ ತಾವು ನೆಲೆಸಿರುವ ಹಳ್ಳಿ ಅಥವಾ ನಗರಗಳಲ್ಲಿ ಸಂಚರಿಸಿ ಭಕ್ತರು ನೀಡುವ ಆಹಾರವನ್ನು ಸ್ವೀಕರಿಸುತ್ತಾರೆ. ಅಹಂಕಾರ ಹೋಗಲಾಡಿಸಿ ವಿನಯ ಕಲಿಸುತ್ತದೆ ಎಂಬ ನಂಬಿಕೆಯಿಂದ ಬೀಕ್ಷೆ (ಆಹಾರ) ಬೇಡುತ್ತಾರೆ . ನಂತರ ಅವರು ಸಮಾಜದ ಜನರಿಗೆ ಬುದ್ಧನ ತತ್ವಗಳನ್ನು ಬೋಧಿಸುತ್ತಾರೆ.

ಪ್ರಾಚೀನ ಕಾಲದ ನಳಂದಾ ಮತ್ತು ತಕ್ಷ ಶಿಲೆಯಂತಹ ವಿಶ್ವವಿದ್ಯಾಲಯಗಳಲ್ಲಿ ಬಿಕ್ಕುಗಳೇ ಶಿಕ್ಷಕರಾಗಿದ್ದರು. ಇಂದಿಗೂ ಅನೇಕ ವಿಹಾರಗಳು ಉಚಿತ ಶಿಕ್ಷಣ ನೀಡುತ್ತಿವೆ.

ಇಂದಿನ ಒತ್ತಡದ ಜಗತ್ತಿನಲ್ಲಿ ಬಿಕ್ಕುಗಳು ಜನರಿಗೆ ಧ್ಯಾನ ಕಲಿಸುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಲು ನೆರವಾಗುತ್ತಿದ್ದಾರೆ. ಜಗತ್ತಿನಲ್ಲಿ ಯುದ್ಧ ಮತ್ತು ದ್ವೇಷ ಹೆಚ್ಚಾದಾಗ, ಬುದ್ಧನ 'ಅಹಿಂಸೋ ಪರಮೋ ಧರ್ಮಃ' ಎಂಬ ಮಂತ್ರ ಸಾರುವವರು ಇವರೇ ಆಗಿದ್ದಾರೆ.

ಬೌದ್ಧ ಬಿಕ್ಕುಗಳು ಕೇವಲ ವೈಯಕ್ತಿಕ ಮುಕ್ತಿಯನ್ನು ಬಯಸದೇ, ಅವರು ಸಮಾಜದ ಸುಧಾರಣೆಗೂ ಶ್ರಮಿಸಬೇಕು ಎಂದು ಪೀಠಕಗಳಲ್ಲಿ ಹೇಳಲಾಗಿದ್ದು ಅದರಂತೆ ಅವರು ನಡೆಯುತ್ತಾರೆ. ಬೌದ್ಧ ಬಿಕ್ಕುಗಳು ಸರಳ ಬದುಕು ನಮಗೆ ಆಸೆಗಳನ್ನು ಮಿತಗೊಳಿಸಿ ನೆಮ್ಮದಿಯಿಂದ ಇರುವುದನ್ನು ಕಲಿಸಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.