ರಾಜ್ಯದಲ್ಲಿ ಮುಂಗಾರು ಪೂರ್ವದ ಅವಧಿ ಮಾರ್ಚ್ನಿಂದ ಮೇ ಅಂತ್ಯದವರೆಗೆ ಇರುತ್ತದೆ. ಇದು ಕೇವಲ ಹವಾಮಾನ ಬದಲಾವಣೆಯ ಕಾಲವಾಗದೆ, ಗ್ರಾಮೀಣ ಭಾರತದ ಸಾಂಸ್ಕೃತಿಕ ಉತ್ಸವಗಳ ಸುಗ್ಗಿ ಕಾಲ ಎಂದೇ ಖ್ಯಾತವಾಗಿದೆ.

ಬೇಸಿಗೆ ಬಿಸಿಲು ಏರುತ್ತಿದ್ದಂತೆ, ಇತ್ತ ಕೃಷಿ ಚಟುವಟಿಕೆಗಳಿಗೆ ವಿರಾಮ ಸಿಗುತ್ತದೆ. ಯುಗಾದಿಯೊಂದಿಗೆ ಮಳೆಗಾಗಿ ಪ್ರಕೃತಿಯನ್ನು ಹಾಗೂ ಗ್ರಾಮ ದೇವತೆಗಳನ್ನು ಪ್ರಾರ್ಥಿಸುವ ವಿಶಿಷ್ಟ ಸಂಪ್ರದಾಯ ನಮ್ಮ ನಾಡಿನಲ್ಲಿದೆ. ಈ ಅವಧಿಯಲ್ಲಿ ರಾಜ್ಯದಾದ್ಯಂತ ಸಾಲು ಸಾಲು ಜಾತ್ರೆಗಳು, ರಥೋತ್ಸವಗಳು ಜರುಗುತ್ತವೆ.

ಮುಂಗಾರು ಪೂರ್ವದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಪ್ರಸಿದ್ಧ ಮತ್ತು ಐತಿಹಾಸಿಕ ಜಾತ್ರೆಗಳ ಕುರಿತು ಒಂದು ವಿಸ್ತೃತ ನೋಟ ಇಲ್ಲಿದೆ...

ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ

ದಕ್ಷಿಣ ಕರ್ನಾಟಕದ ಮುಂಗಾರು ಪೂರ್ವದ ಅತ್ಯಂತ ದೊಡ್ಡ ಮತ್ತು ಪ್ರಾಚೀನ ಉತ್ಸವ ಎಂದರೆ ಬೆಂಗಳೂರಿನ 'ತಿಗಳರಪೇಟೆಯ ಧರ್ಮರಾಯಸ್ವಾಮಿ ಕರಗ ಮಹೋತ್ಸವ'. ಚೈತ್ರ ಮಾಸದ ವಸಂತ ಕಾಲದಲ್ಲಿ ನಡೆಯುವ ಈ ಉತ್ಸವ ತಿಗಳರ ಸಮುದಾಯದಿಂದ ಆಚರಿಸಲ್ಪಡುತ್ತದೆ.

ಇದು ದ್ರೌಪದಿ ದೇವಿಯ ಸಂಕೇತ. ಮಧ್ಯರಾತ್ರಿಯ ಹೊತ್ತಿಗೆ ಕರಗ ಹೊತ್ತ ಪೂಜಾರಿ ಇಡೀ ನಗರದಾದ್ಯಂತ ಸಂಚರಿಸುವ ದೃಶ್ಯ ವೈಭವ ಕಣ್ಣಿಗೆ ಸೊಗಸು. ಮಳೆ-ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುವ ಈ ಉತ್ಸವವ ಕೋಮು ಸೌಹಾರ್ದತೆಗೂ ಹೆಸರಾಗಿದೆ.

ಸಿದ್ದಗಂಗಾ ಹಾಗೂ ಯಡಿಯೂರು ಸಿದ್ಧಲಿಂಗೇಶ್ವರ ಜಾತ್ರೆ

ಸಿದ್ಧಗಂಗಾ ಜಾತ್ರೆಗೆ ಶಿವರಾತ್ರಿಯ ಮುನ್ನ ಹಾಗೂ ನಂತರದ ದಿನಗಳಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಇದು ಕೇವಲ ಧಾರ್ಮಿಕ ಜಾತ್ರೆ ಮಾತ್ರವಲ್ಲದೆ ಬೃಹತ್ ಕೃಷಿ ಮೇಳವಾಗಿದೆ. ಈ ವೇಳೆ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯ ಮಾರ್ಗದರ್ಶನ, ಸಹಕಾರ ಸಿಗಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಿದ್ದಗಂಗಾ ಜಾತ್ರೆ ಹೆಚ್ಚು ಪ್ರಸಿದ್ದಿ ಪಡೆದಿದೆ.

ಯಡಿಯೂರು ಸಿದ್ಧಲಿಂಗೇಶ್ವರ ರಥೋತ್ಸವ: ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ (ಮಾರ್ಚ್/ಏಪ್ರಿಲ್) ನಡೆಯುವ ಈ ರಥೋತ್ಸವಕ್ಕೆ ದಕ್ಷಿಣ ಕರ್ನಾಟಕದಿಂದ ದಂಡು ದಂಡಾಗಿ ಭಕ್ತರು ಬರುತ್ತಾರೆ. ನವಧಾನ್ಯಗಳ ಪೂಜೆ ಮತ್ತು ಮಳೆಯ ಕೃಪೆಗಾಗಿ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ

ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವವು ಜಗತ್ಪ್ರಸಿದ್ಧವಾಗಿದೆ. ಮೈಸೂರು ರಾಜಮನೆತನದ ಭದ್ರತಾ ಕೊಠಡಿಯಿಂದ ತರಲಾಗುವ ವಜ್ರಖಚಿತ 'ವೈರಮುಡಿ' ಕಿರೀಟವನ್ನು ದೇವರಿಗೆ ಇಟ್ಟು ರಾತ್ರಿ ವೇಳೆ ನಡೆಸುವ ರಥೋತ್ಸವವನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಜನ ಸೇರುತ್ತಾರೆ.

ಮುಂಗಾರು ಮಳೆಗೆ ಮುನ್ನ ಭೂಮಿಯನ್ನು ಹದಗೊಳಿಸುವ ಹೊತ್ತಿನಲ್ಲಿ ನಡೆಯುವ ಈ ಉತ್ಸವ ಗ್ರಾಮೀಣ ಜನರಿಗೆ ದೊಡ್ಡ ಸಾಂಸ್ಕೃತಿಕ ಹಬ್ಬ.

ಹುಬ್ಬಳ್ಳಿಯ ಸಿದ್ಧಾರೂಢರ ರಥೋತ್ಸವ

ಮಹಾಶಿವರಾತ್ರಿಯ ಸಂದರ್ಭದಲ್ಲಿ ಆರಂಭವಾಗಿ ಮುಂಗಾರು ಪೂರ್ವದ ದಿನಗಳವರೆಗೂ ಉತ್ತರ ಕರ್ನಾಟಕದಲ್ಲಿ ಜಾತ್ರೆಗಳ ಸರಣಿ ಇರುತ್ತದೆ. ಅದರಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ ರಥೋತ್ಸವ ಪ್ರಮುಖವಾದದ್ದು. ಇಲ್ಲಿಗೆ ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶಗಳಿಂದಲೂ ಭಕ್ತರು ಬರುತ್ತಾರೆ. ಈ ಜಾತ್ರೆಯಲ್ಲಿ ನಡೆಯುವ ದಾಸೋಹ (ಅನ್ನದಾನ) ಜಗತ್ಪ್ರಸಿದ್ಧ.

ಸವದತ್ತಿ ಎಲ್ಲಮ್ಮನ ಜಾತ್ರೆ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಚೈತ್ರ ಪೂರ್ಣಿಮೆ ದಿನಗಳಲ್ಲಿ (ಏಪ್ರಿಲ್) ಬೃಹತ್ ಜಾತ್ರೆ ನಡೆಯುತ್ತದೆ. ದಕ್ಷಿಣ ಭಾರತದ ಅತಿ ದೊಡ್ಡ ಶಕ್ತಿ ಪೀಠಗಳಲ್ಲಿ ಇದು ಒಂದು. ಇಲ್ಲಿಗೆ ಕೃಷಿ ಕಾರ್ಮಿಕರು ಹಾಗೂ ರೈತರು ಮುಂಗಾರು ಹಂಗಾಮು ಆರಂಭವಾಗುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ತಂಡೋಪತಂಡವಾಗಿ ಬರುತ್ತಾರೆ. ಹರಕೆ ಹೊತ್ತ ಭಕ್ತರು 'ಉದೋ ಉದೋ' ಎಂಬ ಜಯ ಘೋಷದೊಂದಿಗೆ ದೇವಿಗೆ ಮುತ್ತು ಕಟ್ಟುವ ಮತ್ತು ಪೂಜೆ ಸಲ್ಲಿಸುವ ಆಚರಣೆ ಇಲ್ಲಿದೆ.

ಗ್ರಾಮೀಣ ಆರ್ಥಿಕತೆ ಮತ್ತು ಜಾನಪದ ಕಲೆಗಳಿಗೆ ಮರುಜೀವ

ಮುಂಗಾರು ಪೂರ್ವದ ಜಾತ್ರೆಗಳು ಕೇವಲ ದೇವರ ದರ್ಶನಕ್ಕೆ ಸೀಮಿತವಾಗಿಲ್ಲ. ಇವುಗಳ ಹಿಂದೆ ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿವೆ.

ದನಗಳ ಜಾತ್ರೆ: ಮುಂಗಾರು ಹಂಗಾಮಿನಲ್ಲಿ ಉಳುಮೆ ಮಾಡಲು ರೈತರಿಗೆ ಸದೃಢವಾದ ಎತ್ತುಗಳು ಮತ್ತು ದನಕರುಗಳ ಅವಶ್ಯಕತೆ ಇರುತ್ತದೆ. ರಾಮದುರ್ಗ, ಮುಧೋಳ, ಸಿದ್ದಗಂಗಾ ಮುಂತಾದ ಕಡೆಗಳಲ್ಲಿ ಜಾತ್ರೆಯ ಅಂಗವಾಗಿ ಬೃಹತ್ ದನಗಳ ಜಾತ್ರೆ ನಡೆಯುತ್ತದೆ. ಇಲ್ಲಿ ಕೋಟ್ಯಂತರ ರೂಪಾಯಿಗಳ ಜಾನುವಾರು ವ್ಯಾಪಾರ ನಡೆಯುತ್ತದೆ.

ಕೃಷಿ ಪರಿಕರಗಳ ಮಾರುಕಟ್ಟೆ: ರೈತರಿಗೆ ಬೇಕಾಗುವ ನೊಗ, ನೇಗಿಲು, ಕುಂಟೆ, ಹಗ್ಗ ಹಾಗೂ ಕೃಷಿ ಕೆಲಸಕ್ಕೆ ಬೇಕಾಗುವ ಕತ್ತಿ-ಕೊಡಲಿಗಳು ಈ ಜಾತ್ರೆಗಳಲ್ಲೇ ಹೆಚ್ಚಾಗಿ ಮಾರಾಟವಾಗುತ್ತವೆ.

ಮನರಂಜನೆ: ನಾಟಕ ಕಂಪನಿಗಳು, ಸರ್ಕಸ್ ಗ್ರಾಮೀಣ ಜನರಿಗೆ ಮನರಂಜನೆ ನೀಡಿದರೆ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಗೀಗೀ ಪದಗಳ ಕಲಾವಿದರಿಗೆ ಈ ಜಾತ್ರೆಗಳೇ ಜೀವನೋಪಾಯ.

ರಾಜ್ಯದ ಮುಂಗಾರು ಪೂರ್ವದ ಜಾತ್ರೆಗಳು ಭೂಮಿ ತಾಯಿಯನ್ನು ಸತ್ಕರಿಸುವ, ಮಳೆರಾಯನನ್ನು ಆಹ್ವಾನಿಸುವ ಮತ್ತು ಮನುಷ್ಯ ಸಂಬಂಧಗಳನ್ನು ಬೆಸೆಯುವ ಅದ್ಭುತ ಕೊಂಡಿಗಳು. ಇಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ಮುಂಬರುವ ಮುಂಗಾರು, ದೇಶಕ್ಕೆ ಸಮೃದ್ಧಿ ತರಲಿ ಎಂಬ ಆಶಯವನ್ನು ಸಾರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.