ಅನಿಮಲ್ ಫಾರ್ಮ್
ಲೇ: ಜಾರ್ಜ್ ಆರ್ವೆಲ್
ಕನ್ನಡಕ್ಕೆ: ಸಹನಾ ಹೆಗಡೆ
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಸಂ: 080–23183311

ಪ್ರಾಣಿಗಳನ್ನು ರೂಪಕವಾಗಿ ಬಳಸಿಕೊಂಡು ಅಧಿಕಾರದ ದುರ್ಬಳಕೆಯನ್ನು ತೀಕ್ಷ್ಣವಾಗಿ ಟೀಕಿಸಿ 1945ರಲ್ಲಿ ‘ಜಾರ್ಜ್ ಆರ್ವೆಲ್’ ರಚಿಸಿದ್ದ ಈ ಕೃತಿ ವರ್ತಮಾನಕ್ಕೂ ಅಷ್ಟೇ ಪ್ರಸ್ತುತ.

ರಾಜಕೀಯ ವಿಡಂಬನೆಗಳಿಂದ ಕೂಡಿದ ಬರವಣಿಗೆಗಳಿಗೆ ಪ್ರಸಿದ್ಧರಾಗಿದ್ದ ಆರ್ವೆಲ್ ಮೂಲ ಹೆಸರು ಎರಿಕ್ ಅರ್ಥರ್ ಬ್ಲೇರ್. ಪ್ರಾಣಿ ಪ್ರಪಂಚವನ್ನು ಮುಂದಿಟ್ಟುಕೊಂಡು ಸಾರ್ವಕಾಲಿಕ ಸತ್ಯವನ್ನು ಹೇಳಿರುವ ಈ ಕೃತಿ ಅಪಾರ ಆಲೋಚನೆಗೆ ಪ್ರೇರೇಪಿಸುತ್ತದೆ. ‘ಅನಿಮಲ್ ಫಾರ್ಮ್’ ಕೃತಿ ಈಗಾಗಲೇ ಕನ್ನಡಕ್ಕೆ ಅನುವಾದವಾಗಿ ಪ್ರಕಟವಾಗಿದೆ. ಕೊಡುಕೊಳ್ಳುವಿಕೆಯ ಮೂಲಕ ಬೇರೆ ಭಾಷೆಯ ಸಾಹಿತ್ಯವು ಕನ್ನಡಿಗರಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆರಂಭಿಸಿರುವ ಯೋಜನೆಯ ಭಾಗವಾಗಿ ಸಹನಾ ಹೆಗಡೆ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೊಟ್ಟಿಗೆಯಲ್ಲಿರುವ ವಿವಿಧ ಪ್ರಾಣಿಗಳೇ ಇಲ್ಲಿನ ಮುಖ್ಯ ಪಾತ್ರಧಾರಿಗಳು. ಅವುಗಳಿಗೆ ಮಾಡಿರುವ ನಾಮಕರಣವೂ ಅಷ್ಟೇ ವಿಶೇಷವನ್ನು ಹೊಂದಿದೆ. ರಷ್ಯಾ ಕ್ರಾಂತಿಯ ಪೂರ್ವ ಮತ್ತು ನಂತರದ ಘಟನೆಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದೆ. ಇಂದಿಗೂ ಪ್ರಸ್ತುತ ಎನ್ನುವಂತೆ ದೌರ್ಜನ್ಯವನ್ನು ಕಾಲ್ಪನಿಕ ಕಥೆಯ ರೂಪದಲ್ಲಿ ಇಲ್ಲಿ ಆರ್ವೆಲ್ ಪ್ರಸ್ತುತಪಡಿಸಿದ್ದಾರೆ. ದಂಗೆ, ದೌರ್ಜನ್ಯ, ತಂತ್ರ–ಪ್ರತಿತಂತ್ರ, ಕುತಂತ್ರವನ್ನು ಕಥೆಯ ರೂಪದಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ಪ್ರಸ್ತುತ ಸ್ಥಿತಿಗೆ ಹೋಲಿಸಿ ಕೃತಿಯನ್ನು ಓದುತ್ತಾ ಹೋದರೆ ಹೆಚ್ಚು ಹತ್ತಿರವಾಗುತ್ತದೆ.

ಆರ್ವೆಲ್ ಅವರ ಜಾಗತಿಕ ದೃಷ್ಟಿಕೋನವನ್ನು ಅರಿತು ಕೃತಿಯ ಅನುವಾದಕ್ಕೆ ಲೇಖಕರು ಇಳಿದಿದ್ದಾರೆ. ಇವುಗಳ ಉಲ್ಲೇಖವನ್ನೂ ಅವರು ಮಾಡಿದ್ದು, ಈ ಕಾರಣದಿಂದ ಅನುವಾದ ಸಮರ್ಥವಾಗಿದೆ. ಕೃತಿಯ ಕೊನೆಯಲ್ಲಿ ಟಿಪ್ಪಣಿಯಲ್ಲಿ ಕೆಲ ಪದಗಳ ವಿವರಣೆಯಿದ್ದಂತೆ, ಆರಂಭದಲ್ಲಿ ಕಥೆಯಲ್ಲಿ ಬರುವ ಪ್ರಾಣಿಗಳ ಹೆಸರು ಹಾಗೂ ಅವುಗಳ ವಿಶೇಷವನ್ನು ನೀಡಿದ್ದರೆ ಓದಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಂತೆ ಆಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.