ಅನ್ನಪೂರ್ಣಾ ದೇವಿ ಸಂಗೀತ ಪರಂಪರೆಯಲ್ಲಿ ಶಾಪಗ್ರಸ್ತ ಗಂಧರ್ವ ದೇವತೆಯಂತೆ ಬದುಕಿದವರು. ಅವರನ್ನು ಕಂಡವರು, ಕಂಡಷ್ಟು; ಅವರ ಸಾನ್ನಿಧ್ಯ ದಕ್ಕಿದವರಿಗೆ ದಕ್ಕಿದಷ್ಟು–ಹೀಗೆ ಈ ಪುಸ್ತಕದಲ್ಲಿ ಅನೇಕ ನೆನಪುಗಳು ಹರಿದು ಬರುತ್ತವೆ. ಅವರ ಒಡನಾಟದಲ್ಲಿ ಸಿಕ್ಕಿದ್ದು ಕೇವಲ ಅನ್ನ ಆತಿಥ್ಯವಲ್ಲ; ಪ್ರೀತಿ, ಮಮತೆ, ನಿರ್ಲಕ್ಷ್ಯ, ಅನಾಸಕ್ತಿ–ಇವೆಲ್ಲವನ್ನೂ ಅವರ ಶಿಷ್ಯರು, ಅಭಿಮಾನಿಗಳು ದಾಖಲಿಸುತ್ತ ಹೋಗಿದ್ದಾರೆ. ಆ ನೆನಪುಗಳನ್ನೆಲ್ಲ ಒಂದು ಕಡೆ ಜೋಡಿಸಿದಂತಿದೆ ಈ ಕೃತಿ.

ಅನ್ನಪೂರ್ಣಾ ದೇವಿಯ ಬದುಕಿನಲ್ಲಿ ಇಂಗಿಹೋದ ಕಂಬನಿಯ ಕೆಲವು ಹನಿಗಳನ್ನು, ಸಾಗರದಂಥ ಅವರ ವ್ಯಕ್ತಿತ್ವದಿಂದ ಬಾಚಿ ತಂದ ಕಥೆಗಳಿವು ಎನ್ನಿಸತೊಡಗುತ್ತದೆ. ‘ಅವರ ಸಂಕಟವನ್ನು ಪದಗಳಲ್ಲಿ ಹಿಡಿಯಲು ಸಾಧ್ಯವಿಲ್ಲ’ ಎನ್ನುತ್ತಲೇ, ಅವರ ಏಕಾಂತದ ನಿಟ್ಟುಸಿರುಗಳ ಲೆಕ್ಕವನ್ನೂ ಈ ಪುಸ್ತಕ ತೆರೆದಿಡುತ್ತದೆ. ಸಂಗೀತ ಕುಟುಂಬದಲ್ಲಿ ಹುಟ್ಟಿ, ಸಂಗೀತ ಕಲಾವಿದನ ಸಂಗಾತಿಯಾದರೂ, ಅವರು ಬದುಕಿನ ಬಹುತೇಕ ಭಾಗವನ್ನು ಏಕಾಂತದಲ್ಲೇ ಕಳೆಯುತ್ತಾರೆ.

ಅಂತಃಕರಣ ಮತ್ತು ಪ್ರೀತಿಗಲ್ಲದೆ ಮತ್ತಾವುದಕ್ಕೂ ಕರಗದ ಹೆಣ್ಣುಜೀವವಾಗಿ, ತಮ್ಮೊಳಗಿನ ಸಂಗೀತವನ್ನು ಧಾರೆಯೆರೆಯುತ್ತ ಬದುಕುತ್ತಾರೆ. ‘ಕಲಾವಿದರಿಗೆ ತಾರಾಪಟ್ಟ ದೊರೆತರೆ ಅನ್ವೇಷಣೆ ನಿಲ್ಲುತ್ತದೆ’ ಎಂಬ ನಂಬಿಕೆಯಂತೆ, ಅವರು ಖ್ಯಾತಿಯ ಹತ್ತಿರವೂ ಸರಿಯುವುದಿಲ್ಲ. ಹುಡುಕಾಟವನ್ನು ಮುಗಿಸದೇ, ಸದಾ ಅನ್ವೇಷಣೆಯಲ್ಲೇ ಇರುವ ಸಾಧಕಿಯ ರೂಪ ಇಲ್ಲಿ ಕಾಣಿಸುತ್ತದೆ. ವರ್ಷಾನುಗಟ್ಟಲೆ ಮಾತಿಲ್ಲದೆ ಕಳೆಯುವ ಅವರ ಮೌನರಾಗವನ್ನೂ ಈ ಪುಸ್ತಕ ಅಕ್ಷರಗಳಲ್ಲಿ ಹಿಡಿದಿಡುತ್ತದೆ.

ಪುಸ್ತಕ ಮುಗಿದಾಗ ದೊಡ್ಡವರ ಸಣ್ಣತನಗಳ ಬಗ್ಗೆ ದೂರುಗಳಲ್ಲ, ಒಂದು ಮೃದುವಾದ ಅನುಕಂಪ ಮಾತ್ರ ಉಳಿಯುತ್ತದೆ. ದುಮ್ಮಾನ ತೋಡಿಕೊಳ್ಳದೆ, ಕೇವಲ ಕಥೆಯನ್ನು ಹೇಳುವ ನಿರೂಪಣೆಯೇ ಈ ಕೃತಿಯ ದೊಡ್ಡ ಶಕ್ತಿ. ಪುಸ್ತಕದಲ್ಲಿರುವ ಚಿತ್ರಗಳು ಇತಿಹಾಸದೊಂದಿಗೆ ಓದುಗರನ್ನು ಬೆಸೆಯುವ ಕೊಂಡಿಗಳಂತೆ ಕಾಣುತ್ತವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1736910849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.