ಚಲಂ (ಆತ್ಮಕಥೆ)
ಕನ್ನಡಕ್ಕೆ: ಲಕ್ಕೂರು ಆನಂದ
ಪ್ರ: ಸೃಷ್ಟಿ ಪಬ್ಲಿಕೇಷನ್ಸ್ ಬೆಂಗಳೂರು
ಸಂ.: 98450 96668

ಗುಡಿಪಾಟಿ ವೆಂಕಟಾಚಲಂ ಅವರ ಬದುಕನ್ನು ಅವರದೇ ಮಾತಿನಲ್ಲಿ ನಿರೂಪಿಸುತ್ತಾ ಹೋಗಿದೆ ಈ ಕೃತಿ. ಚಲಂ ಅವರ ಜೀವನಗಾಥೆ ಕನ್ನಡದಲ್ಲಿ ಈಗಾಗಲೇ ಬಂದಿವೆ. ಆದರೆ, ಈ ಕೃತಿಯ ವೈಶಿಷ್ಟ್ಯ ಇರುವುದು ಚಲಂ ಅವರ ಬದುಕಿನ ಕಥೆಯನ್ನು ಅವರೇ ಹೇಳುತ್ತಾ ಹೋಗಿರುವುದು. ಯಾವುದನ್ನೂ ಫಿಲ್ಟರ್ ಮಾಡದ ಅವರ ಪ್ರಾಮಾಣಿಕ ನಡೆ ಓದುಗನಿಗೆ ಇಷ್ಟವಾಗುತ್ತದೆ. ಒಂದೆಡೆ ಪ್ರಬಲ ಸ್ತ್ರೀ ಕಾಳಜಿಯುಳ್ಳ ವ್ಯಕ್ತಿಯಾಗಿ ಕಾಣುವ ಚಲಂ, ಮತ್ತೊಂದು ಕೋನದಲ್ಲಿ ಅಪ್ಪಟ ಪ್ರೇಮಿಯಾಗಿ, ವ್ಯಾಮೋಹಿಯಾಗಿಯೂ ಕಾಣುತ್ತಾರೆ.

ಬ್ರಹ್ಮ ಸಮಾಜದ ತತ್ವಗಳನ್ನು ಅನುಸರಿಸಿದರೂ ಅಲ್ಲಿನ ಕಟ್ಟುಪಾಡುಗಳು ಚಲಂ ಸ್ವಭಾವಕ್ಕೆ ಹಾಗೂ ಬದುಕಿಗೆ ಒಗ್ಗುವುದಿಲ್ಲ. ಅಲ್ಲಲ್ಲಿ ಕಾಣಿಸುವ ಚಿತ್ತ ಚಾಂಚಲ್ಯ, ಸ್ತ್ರೀ ವ್ಯಾಮೋಹ, ಓದುವಿಕೆಯ ಪರಿ, ಜೀವನ ಹೋರಾಟ, ಬರಹ ಇತ್ಯಾದಿ ಎಲ್ಲವನ್ನೂ ಚಲಂ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಚಿಂತಕರ ಚಾವಡಿಯಲ್ಲಿ ಖ್ಯಾತರಾಗುವ ಚಲಂ, ತಮ್ಮದೇ ಬದುಕಿನ ಗೋಜಲುಗಳಲ್ಲಿ ಸಿಲುಕುವುದು, ಯಾವುದು ಸರಿ– ತಪ್ಪು ಎಂಬ ನಿರ್ಧಾರಕ್ಕೂ ಬರಲಾಗದೇ ತೊಳಲಾಡುವ ಪ್ರಸಂಗಗಳು, ಎದುರಿಸಿದ ಸಂಕಷ್ಟಗಳೂ ಕೃತಿಯಲ್ಲಿ ದಾಖಲಾಗಿವೆ. ಚಲಂ ಬಾಲ್ಯದ ಅಧ್ಯಾಯಗಳು ಆಗಿನ ದಿನಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಂತಿವೆ. ಈ ಚಿಂತಕನ ಆತ್ಮಕಥೆಯನ್ನು ಮೂಲ ಧ್ಯೇಯಕ್ಕೆ ಚ್ಯುತಿ ಬಾರದಂತೆ ಲಕ್ಕೂರು ಆನಂದ ಅವರು ಕನ್ನಡಕ್ಕೆ ತಂದಿದ್ದಾರೆ. ಚಲಂ ಅವರ ಬದುಕಿನ ಕುರಿತು ಕುತೂಹಲವುಳ್ಳವರು ಓದಬೇಕಾದ ಕೃತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.