ಇಡೀ ಕೃತಿ ಊರೂರು ಅಲೆಯುತ್ತ, ಅಲೆಮಾರಿ ಬದುಕು ಸವೆಸುವ ಬಂಜಾರ ಸಮುದಾಯದವರ ಚಿತ್ರಣವನ್ನು ಕಟ್ಟಿಕೊಂಡುವುದರಿಂದ, ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಮೇಲಿನ ಸಾಲುಗಳು ಬಹಳ ಅರ್ಥಪೂರ್ಣ ಅನ್ನಿಸುತ್ತವೆ.

ಬಂಜಾರ ಯುವಕ ಇಸರಾನ ಕಥೆಯೊಂದಿಗೆ ಈ ಕೃತಿ ತೆರೆದುಕೊಳ್ಳುತ್ತದೆ. ಅಲೆಮಾರಿಯಾಗಿ ದನ, ಕುದುರೆಗಳ ಜೊತೆ ಅಲೆದಾಡುವ ಈತ ಆಮಗೋತ ಕುಟುಂಬಕ್ಕೆ ಸೇರಿದವನು. ಈತನ ಪತ್ನಿ ಮೂಂಗೀಬಾಯಿ, ಮಕ್ಕಳಾದ ಹೋಬ್ಯಾ, ಖೂಬ್ಯಾ ಅವರ ಬದುಕು, ಬವಣೆಗಳೊಂದಿಗೆ ಕಥೆ ಸಾಗುತ್ತದೆ. ಈ ಕುಟುಂಬದ ಪೂರ್ವಜರನ್ನು ಪರಿಚಯಿಸುತ್ತ, ಸಮುದಾಯದ ಇತಿಹಾಸ ಹೇಳಿಕೊಂಡು ಹೋದ ಶೈಲಿ ಸೊಗಸಾಗಿದೆ. ಮೂರು ತಲೆಮಾರಿನ ಕಥೆ ಇಲ್ಲಿ ಬರುತ್ತದೆ.

ಮಧ್ಯಪ್ರದೇಶದಲ್ಲಿ ಪ್ರಾರಂಭವಾಗುವ ಕಥೆ ಬ್ರಿಟಿಷ್ ಆಳ್ವಿಕೆ ಕಾಲದಲ್ಲಿನ ಬಂಜಾರರ ಸ್ಥಿತಿಗತಿಗಳನ್ನು ಪರಿಚಯಿಸುತ್ತದೆ. ಸ್ವಾತಂತ್ರ ಹೋರಾಟದಲ್ಲಿ ಹೋರಾಟಗಾರರಿಗೆ ಮದ್ದುಗುಂಡುಗಳನ್ನು ಪೂರೈಸುತ್ತ ಈ ಸಮುದಾಯದವರು ದೇಶಭಕ್ತಿ ಮೆರೆದ ಬಗೆಯನ್ನು ವಿವರಿಸುತ್ತದೆ. ಲೇಖಕ ತಾಂಡಾದಲ್ಲಿನ ಅನೇಕ ಘಟನೆ, ಸಂಪ್ರದಾಯಗಳನ್ನು ಬಹಳ ಸರಳವಾಗಿ ಓದುಗನಿಗೆ ದಾಟಿಸಿದ್ದಾರೆ.

ಕೃತಿಯಲ್ಲಿ ಲಂಬಾಣಿ ಸಮುದಾಯದ ಹಾಡುಗಳನ್ನು ಯಥಾವತ್ತಾಗಿ ಬಳಸಿದ್ದಾರೆ. ಅನಕ್ಷರಸ್ಥರಾಗಿದ್ದರೂ ಇಲ್ಲಿನ ಪಾತ್ರಗಳಿಗಿದ್ದ ಸಾಹಿತ್ಯ ಪ್ರಜ್ಞೆ ಅಚ್ಚರಿ ಮೂಡಿಸುತ್ತದೆ. ಜಾನುವಾರುಗಳ ಜತೆ ಲಂಬಾಣಿಗರ ಒಡನಾಡ ಬಹಳ ಆಪ್ಯವಾಗಿದೆ. ಒಟ್ಟಾರೆಯಾಗಿ ಕಥನರೂಪದಲ್ಲಿ ಲಂಬಾಣಿ ಇತಿಹಾಸ ಓದಿದ ಅನುಭವ ನೀಡುವ ಕೃತಿ, ಅಧ್ಯಯನಕ್ಕೂ ಯೋಗ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.