ಬೆಂಗಳೂರು: ಸರ್ವಶ್ರೇಷ್ಠ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಎಲ್ಲವೂ ಅಡಕವಾಗಿದ್ದು, ಅವು ಜಾತ್ಯತೀತ ಗ್ರಂಥಗಳು ಎಂದು ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯ ಹೇಳಿದರು.

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಆಹಾರ–ವಿಹಾರ, ವಿಚಾರ’ ಕುರಿತು ಮಾತನಾಡಿದರು.

ಪ್ರಕೃತಿ–ವಿಕೃತಿ–ಸಂಸ್ಕೃತಿ ಎಂದ ರೇನು?, ಅಧ್ಯಾತ್ಮ ಜ್ಞಾನ ಮತ್ತು ಮಹಾಭಾರತದ ಯಕ್ಷಪ್ರಶ್ನೆ ಭಾಗದ ಮಹತ್ವವನ್ನು ಅವರು ತಿಳಿಸಿದರು.

ಇದಕ್ಕೂ ಮುನ್ನ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಅವರ ಕುರಿತ ‘ಇಂತಿ ನಿನ್ನ ಪ್ರೀತಿಯ ರಾಮಕೃಷ್ಣ’ ಪುಸ್ತಕ ಜನಾರ್ಪಣೆ ಮಾಡಲಾಯಿತು.

ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಮಾತನಾಡಿ, ‘ನೀರ್ನಳ್ಳಿ ರಾಮಕೃಷ್ಣ ಅವರು ಶಿರಸಿಯ ಪ್ರಕೃತಿ ಸೌಂದರ್ಯದ ಸೊಬಗಿನಡಿ ಬಾಲ್ಯವನ್ನು ಕಳೆದರು. ಸಾಂಸ್ಕೃತಿಕ ಚಟುವಟಿಕೆಗಳಿಂದ ಪ್ರೇರಣೆ ಪಡೆದು, ಪುಟ್ಟಣ್ಣ ಕಣಗಾಲ್ ಅವರಂತಹ ನಿರ್ದೇಶಕರ ಅಡಿ ತಮ್ಮ ಕಲಾ ಪ್ರದರ್ಶನ ನೀಡಿ ಸೈ ಎನಿಸಿಕೊಂಡವರು. ಅಪರೂಪದ ಕಲಾವಿದ’ ಎಂದು ಬಣ್ಣಿಸಿದರು.

ಅಂಕಣಕಾರ ವಾಸುದೇವ ಶಾನಭಾಗ, ಸಂಘಟಕ ಶಾ. ಮಂ. ಕೃಷ್ಣರಾಯ, ನೀರ್ನಳ್ಳಿ ರಾಮಕೃಷ್ಣ ಮಾತನಾಡಿದರು. ಸೌಮ್ಯ ಪ್ರದೀಪ ಹೆಗಡೆ ಹಾಗೂ ಮನಸ್ವಿ ಭಂಡಾರಿ ಅವರು ಪ್ರಸ್ತುತಪಡಿಸಿದ ಭರತನಾಟ್ಯ ಸಭಿಕರಿಗೆ ಮುದ ನೀಡಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಕೆಂಪೇಗೌಡ, ಎಚ್. ಕೆ. ಮಧುಸೂದನ, ಎಸ್. ಜೆ. ಕೃಷ್ಣಮೂರ್ತಿ, ನಿತ್ಯಾನಂದಪ್ಪ, ಗಿರೀಶ್, ಗೀತಾ ಹೆಗಡೆ, ಶ್ರೀವಾಣಿ, ರಾಜೇಶ್ವರಿ ಅಜ್ಜಿಬಾಳ್, ವತ್ಸಲಾ ಆರ್, ಎಲ್. ಎನ್. ಹೆಗಡೆ, ಕವಿಗಳಾದ ಸಿದ್ದಣ್ಣ ಸೊನ್ನದ , ಕೊಪ್ಪರಂ ಅನ್ನಪೂರ್ಣ ಅಣಕಟ್ಟು ಮಧುಸೂಧನ್ ರಾವ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-4-1325181691

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.