ಸ್ವಾತಂತ್ರ್ಯಪೂರ್ವದ ಗ್ರಾಮೀಣ ಭಾರತದ ಚಿತ್ರಣವನ್ನು ಸರಳಗನ್ನಡದಲ್ಲಿ ಕಟ್ಟಿಕೊಡಲಾಗಿದೆ. ಭೂ ಸುಧಾರಣೆ ಕಾಯ್ದೆ ಬರುವ ಮೊದಲು ಗೇಣಿದಾರರು, ಜಮೀನ್ದಾರರ ನಡುವಿನ ಸಂಬಂಧ, ಬಾಂಧವ್ಯ, ಶೋಷಣೆಯೂ ಸ್ವೀಕಾರ್ಹವಾಗಿದ್ದ ಆ ಕಾಲದ ಧೋರಣೆ ಎಲ್ಲವನ್ನೂ ಎರಡು ಮೂರು ಬಂಟರ ಮನೆತನ ಮತ್ತು ಅವರೊಂದಿಗೆ ಶ್ರಮಿಸುವ ಒಕ್ಕಲಿನವರ ಕಥೆಯಲ್ಲಿ ನಿರೂಪಿಸಲಾಗಿದೆ.

ಗೇಣಿದಾರರ ಭಾಷೆ, ಜಮೀನ್ದಾರರ ಆದೇಶಗಳು ಆ ಕಾಲದ ಕತೆಗಳನ್ನು ಹೇಳುವಂತೆಯೇ ಸಾಂಸ್ಕೃತಿಕ ಚರಿತ್ರೆಯ ದಾಖಲೀಕರಣವೂ ಆಗಿದೆ. ಭೂ ಸುಧಾರಣೆ ಯುಗದಲ್ಲಿ ಆಗುವ ಬದಲಾವಣೆಗಳು, ಒಕ್ಕಲುತನದಲ್ಲಿ ಹುಟ್ಟಿಸುವ ಗೊಂದಲ ಮತ್ತು ಸ್ವಾತಂತ್ರ್ಯ ಎರಡರ ಸಂಘರ್ಷಗಳು ಮಾನವೀಯ ನೆಲೆಯಲ್ಲಿ ನಿರೂಪಣೆಯಾಗುತ್ತ ಬರುತ್ತದೆ.

ಈ ಕಾಲದಲ್ಲಿ ಇಂಥ ಉಚ್ಚನೀಚಗಳೆಂಬ ತರತಮಗಳಿಲ್ಲದಿದ್ದರೂ, ಅವು ಅದ್ಹೇಗೆ ನಮ್ಮಲ್ಲಿ ಬೇರೂರಿವೆ ಎಂಬ ಸೂಕ್ಷ್ಮಗಳು ಇಲ್ಲಿಯ ಕಥನದಿಂದ ಅರಿವಾಗುತ್ತ ಬರುತ್ತದೆ. ಕೆಲವೊಮ್ಮೆ ಓದುಗನೂ ತನ್ನಲ್ಲಿರುವ ಸಣ್ಣತನಗಳೊಂದಿಗೆ ಗುರುತಿಸಬಹುದು. ನಮ್ಮ ಸುತ್ತಲೂ ಇರುವ ಜನರಲ್ಲಿ ಈಗಲೂ ಮರೆಯಾಗದ ಪಾಳೇಗಾರಿಕೆಯ ಮನೋಭಾವದ ಮೂಲ ಯಾವುದು ಎಂಬುದೂ ಅರಿವಿಗೆ ಬರುತ್ತದೆ.

ಸುದೀರ್ಘ ಕಾದಂಬರಿ ಎನಿಸಿದರೂ ಓದಿಸಿಕೊಳ್ಳುವ ಶೈಲಿ ಇರುವುದರಿಂದ ಮುಗಿಸಿಕೊಳ್ಳುತ್ತದೆ. ಕಾದಂಬರಿಯಲ್ಲಿ ಬರುವ ಒಂದೊಂದು ಪಾತ್ರಗಳೂ ಒಂದೊಂದು ಗುಣವನ್ನೇ ಪ್ರತಿನಿಧಿಸುವುದರಿಂದ, ಓದುತ್ತ ಹೋದಂತೆ ಕೃತಿಯೊಂದು ಓದುಗರಲ್ಲಿಯೂ ಬದಲಾವಣೆ ತರುವತ್ತ, ಸುಧಾರಿಸುವಲ್ಲಿ ವಹಿಸುವ ಪಾತ್ರದ ಅರಿವಾಗುತ್ತದೆ. ಭೂ ಸುಧಾರಣೆಯ ಹಿಂದೆ ಮತ್ತು ನಂತರದ ಯುಗದ ದಾಖಲೆಯಂತಿದೆ ಈ ಕೃತಿ.

ಭೂಮಿಗೀತ

ಲೇ: ನಾ.ಮೊಗಸಾಲೆ

ಪ್ರ: ಸಾಹಿತ್ಯ ಪ್ರಕಾಶನ

ಸಂ: 94481 10034

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.