ಕನ್ನಡ ಸಾಹಿತ್ಯ ಜಗತ್ತಿಗೆ ಮುದ್ದಣ ಕವಿಯ ಕೊಡುಗೆ ಅಪಾರ. ಭಿನ್ನ ಕಾವ್ಯನಾಮದ ಮೂಲಕ ತನ್ನ ಕೃತಿಗಳನ್ನು ಪ್ರಕಟಿಸುತ್ತಿದ್ದ ನಂದಳಿಕೆ ಲಕ್ಷ್ಮಿನಾರಾಯಣಯ್ಯ ಅವರ ಬದುಕು, ಕೃತಿ, ಕಾವ್ಯ ಜಗತ್ತನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ ‘ಮುದ್ದಣ ಕೃತಿ ಕರಜನ’. ಹನ್ನೊಂದು ಅಧ್ಯಾಯಗಳಿದ್ದು, ಮುದ್ದಣ ಕವಿ ಯಾರು? ಆತನ ಮೂಲವೆಲ್ಲಿ ಎಂಬಿತ್ಯಾದಿ ವಿವರಗಳನ್ನು ಮೊದಲ ಅಧ್ಯಾಯದಲ್ಲಿ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ದಾಖಲಿಸಿದ್ದಾರೆ.

‘ಕನ್ನಡ ಸಾಹಿತ್ಯದಲ್ಲಿ ಮುದ್ದಣನ ಪ್ರತ್ಯೇಕತೆ–ವಿಶಿಷ್ಟತೆ–ಹೊಸದಾರಿ ಏನೆಂಬುದನ್ನು ಕನ್ನಡ ಸಾಹಿತ್ಯಜ್ಞರು ಬಲ್ಲರು. ಅವನ ಕೃತಿಗಳು ಪಠ್ಯವಾಗಿ ಕೂಡ ಜನಪ್ರಿಯತೆಯನ್ನು ಗಳಿಸಿವೆ. ಆತನ ಎಲ್ಲ ಕೃತಿಗಳನ್ನು ಪೂರಕ ವಿಷಯಗಳೊಡನೆ ಪ್ರತ್ಯೇಕ ಪ್ರಸ್ತಾವನೆಗಳ ಸಹಿತವಾಗಿ ಸಂಪಾದಿಸಿ ಸಂಪುಟವಾಗಿಸಿ ಸಾಹಿತ್ಯಲೋಕಕ್ಕೆ ಪ್ರೊ.ನಾವಡರು ಹೊಸದಾಗಿ ನೀಡಿದ್ದಾರೆ’ ಎಂದು ಪಾದೇಕಲ್ಲು ವಿಷ್ಣುಭಟ್ಟರು ಕೃತಿಯ ಬೆನ್ನುಡಿಯಲ್ಲಿ ಬರೆದಿದ್ದಾರೆ.

‘ಕರಜನ’ ಎಂಬುದು ತುಳುಪದ. ಈ ಪದಕ್ಕೆ ಬಂಗಾರವಿಡುವ ಪೆಟ್ಟಿಗೆ ಎಂದರ್ಥವಿದೆ. ಇಡೀ ಪುಸ್ತಕದ ವೈಶಿಷ್ಟ್ಯವೇನು? ಇದರ ಮಹತ್ವವೇನು ಎಂಬುದನ್ನು ಎರಡನೇ ಅಧ್ಯಾಯದಲ್ಲಿ ಬಸವರಾಜ ಕಲ್ಗುಡಿ ವಿವರಿಸಿದ್ದಾರೆ.

ಕೃತಿಯ ಒಳಗೇನಿದೆ ಎಂಬುದಕ್ಕೆ ಪೀಠಿಕೆಯಂತಿದೆ ‘ಕರಜನ ತೆಗೆಯುವ ಮೊದಲು’ ಅಧ್ಯಾಯ. ‘ಪ್ರಸ್ತಾವನೆ’ಯಲ್ಲಿ ಮುದ್ದಣನ ಕೃತಿಗಳ ಹೂರಣವಿದೆ. ಮುದ್ದಣನ ‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ’, ‘ಅದ್ಭುತ ರಾಮಾಯಣಂ’, ‘ಶ್ರೀರಾಮಪಟ್ಟಾಭಿಷೇಕಂ’, ‘ರಾಮಾಶ್ವಮೇಧಂ’ ಕೃತಿಗಳನ್ನು ಸೂಕ್ತ ವಿವರಣೆಯೊಂದಿಗೆ ನೀಡಲಾಗಿದೆ. ಹಳಗನ್ನಡದಲ್ಲಿರುವ ಮುದ್ದಣನ ಕೃತಿಗೆ ವಿವರಣೆ ಮತ್ತು ಪದಗಳ ಅರ್ಥವನ್ನು ಇದರಲ್ಲಿ ನೀಡಲಾಗಿದೆ. ಹಳಗನ್ನಡ ಬಾರದವರಿಗೂ ಮುದ್ದಣನ ಸಾಹಿತ್ಯವನ್ನು ಅರ್ಥ ಮಾಡಿಸುವ ಯತ್ನವಿಲ್ಲಿ ಕಾಣಿಸುತ್ತದೆ. ಮುದ್ದಣನ ಕುರಿತು ಅಧ್ಯಯನ ಮಾಡುವ ಆಸಕ್ತಿ ಹೊಂದಿರುವವರಿಗೆ ಆತನ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಕೃತಿಯಿದು.

ಮುದ್ದಣ ಕೃತಿ ಕರಜನ ಸಂ: ಎ.ವಿ.ನಾವಡ ಪ್ರ:ಶೋಧನ ಪ್ರಕಾಶನ ಸಂ:9449839988

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.