ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ನಾಡಿನ ಸಾಧಕರ ಪರಿಚಯಿಸುವ ಹೊತ್ತಿಗೆ

Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಡಾ.ಎನ್‌.ಕೆ.ವೆಂಕಟರಮಣ ಅವರು ಇಂಗ್ಲಿಷ್‌ನಲ್ಲಿ ರಚಿಸಿದ ಕೃತಿ ‘ಮಹಾಮಹಿಮರು’. ಇದನ್ನು ಡಾ.ಕೆ.ಆರ್‌.ಕಮಲೇಶ್‌ ಸಂಪಾದಕತ್ವದಲ್ಲಿ ಕನ್ನಡಕ್ಕೆ ಅನುವಾದಿಸಲಾಗಿದೆ. ‘ಜಗತ್ತಿನ ನಾಗರಿಕತೆ ಮತ್ತು ಸಂಸ್ಕೃತಿ ಆ ಜನಾಂಗದಲ್ಲಿ ಜನಿಸಿದ ಮಹಾಪುರುಷರ ಮೇಲೆ ನಿಂತಿರುತ್ತದೆ. ಅವರು ತಮ್ಮ ಕಾಲದ ಜನರನ್ನು ಸನ್ಮಾರ್ಗದಲ್ಲಿ ನಡೆಸಿದ ಮಹಾನುಭಾವರು’ ಎಂದು ಲೇಖಕರು ಪ್ರಾರಂಭದಲ್ಲಿಯೇ ಹೇಳುತ್ತಾರೆ. ಅದರಂತೆ ಇಡೀ ಕೃತಿ ನಾಡಿನ ಹಲವಾರು ಯೋಗಿಗಳು, ಸಾಧಕರು, ಆಧ್ಯಾತ್ಮಿಕ ವ್ಯಕ್ತಿಗಳ ಕಿರುಪರಿಚಯ ಮಾಡಿಕೊಡುತ್ತದೆ.

ಪುಸ್ತಕವನ್ನು ಮೂರು ನೋಟಗಳಾಗಿ ವಿಂಗಡಿಸಲಾಗಿದೆ. ಮೊದಲ ನೋಟದಲ್ಲಿ ಯೋಗ ಪಿತಾಮಹ ಪತಂಜಲಿ ಮಹರ್ಷಿಗಳಿಂದ ಹಿಡಿದು ಶ್ರೀ ಶರವಣ ಬಾಬಾರವರೆಗೆ ನಾಡಿನ ಪ್ರಮುಖ ಯೋಗಿಗಳ ಕುರಿತ ಬರಹಗಳಿವೆ. ಸಂತರು, ಬಾಬಾಗಳು, ಯೋಗಿಗಳು, ಮಠಾಧೀಶರ ಕುರಿತು ಕಿರುನೋಟ ಒದಗಿಸುವ ಬರಹಗಳಿವು. ಎರಡನೇ ನೋಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ ಸಾಧಕರ ಬಗೆಗಿನ ಬರಹಗಳಿವೆ. ವಿಜ್ಞಾನ ಮತ್ತು ಸಂಗೀತದ ಕೊಡುಗೆಗಳ ಕುರಿತಾದ ಲೇಖನವಿದೆ. 

ಮೂರನೇ ನೋಟದಲ್ಲಿ ವೈದ್ಯಕೀಯ, ವಿಜ್ಞಾನ ಜಗತ್ತಿನ ಕುರಿತು ಲೇಖಕರು ಮಾತನಾಡುತ್ತಾರೆ. ವೈದ್ಯವೃತ್ತಿಯ ಕಷ್ಟ–ಸುಖಗಳನ್ನು ತೆರೆದಿಡುತ್ತಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾನವಸಂಪನ್ಮೂಲವನ್ನು ಅವಲೋಕಿಸುವ ಬರಹವಿಲ್ಲಿ ಸಿಗುತ್ತದೆ. ‘ಈ ಕೃತಿ ಒಂದು ಸಾರ್ಥಕ ಶಬ್ದಚಿತ್ರಗಳ ಸಂಕಲನ. ಡಾ.ಎನ್‌.ಕೆ.ವೆಂಕಟರಮಣ ಅವರು ‘ಬ್ರೈನ್‌ವಾಯ್ಸ್‌’ ಪತ್ರಿಕೆಗಾಗಿ ಬರೆದ ಇಂಗ್ಲಿಷ್‌ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಪ್ರಾಚೀನ ಋಷಿಗಳಿಂದ ತೊಡಗಿ ಅರ್ವಾಚೀನ ಮಹಾಪುರುಷರವರೆಗೆ ಮಿಡಿದ ಭಾವಲಹರಿಗಳು ಓದುಗರನ್ನು ಆವರಿಸಿಕೊಂಡು ಬಾಳ್ವೆಗೆ ಬೆಳಕಾಗುತ್ತವೆ’ ಎಂದು ಕಬ್ಬಿನಾಲೆ ವಸಂತ ಭಾರದ್ವಾಜರು ಕೃತಿಯ ಬೆನ್ನುಡಿಯಲ್ಲಿ ಹೇಳಿದ್ದಾರೆ. ⇒v

ಮಹಾಮಹಿಮರು

ಮೂಲ:ಡಾ.ಎನ್‌.ಕೆ.ವೆಂಕಟರಮಣ

ಕನ್ನಡಕ್ಕೆ: ಡಾ.ಕೆ.ಆರ್‌.ಕಮಲೇಶ್‌

ಪ್ರ:ಕಾಮಧೇನು ಪುಸ್ತಕ ಭವನ

ಸಂ:9945002444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT