ಶೀರ್ಷಿಕೆಯೇ ಹೇಳುವಂತೆ ಕರಾವಳಿಯ ಇತಿಹಾಸದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಕೊಡುಗೆಯನ್ನು ಪರಿಚಯಿಸುವ ಕೃತಿಯಿದು. ಮಲಬಾರ್ ಪ್ರದೇಶದಿಂದ ಹಿಡಿದು ಉತ್ತರ ಕನ್ನಡದವರೆಗೂ ಆಡಳಿತ ನಡೆಸಿದ್ದ ಇವರಿಬ್ಬರು, ಬ್ರಿಟಿಷರ ವಿರುದ್ಧ ಮಾಡಿದ ಹೋರಾಟ, ಸ್ಥಳೀಯ ರಾಜರೊಂದಿಗೆ ಕಾಯ್ದುಕೊಂಡಿದ್ದ ಸೌಹಾರ್ದ ಸಂಬಂಧ, ಧರ್ಮಗಳ ನಡುವೆ ಸೌಹಾರ್ದತೆ ನೆಲೆಸಲು ಮಾಡಿದ್ದ ಪ್ರಯತ್ನಗಳನ್ನು ದಾಖಲೆಗಳ ಸಮೇತ ಚಿತ್ರಿಸಲಾಗಿದೆ. ಕರಾವಳಿಯ ಬ್ರಾಹ್ಮಣ, ಜೈನ, ಒಕ್ಕಲಿಗ ಹಾಗೂ ಬಂಟ ಸಮುದಾಯಗಳೊಂದಿಗೆ ಇವರಿಗಿದ್ದ ಸ್ನೇಹ ಸಂಬಂಧಗಳ ಕುರಿತಾದ ದಾಖಲೆಗಳನ್ನು ನೀಡಲಾಗಿದೆ. ಬದಲಾದ ಸನ್ನಿವೇಶದಲ್ಲಿ ಹೈದರ್ ಹಾಗೂ ಟಿಪ್ಪುವನ್ನು ಕೋಮುವಾದದ ಕನ್ನಡಿಯಿಂದ ನೋಡುವ ಅಪಾಯಗಳನ್ನೂ ಪುಸ್ತಕ ತೆರೆದಿಡುತ್ತದೆ.

ಟಿಪ್ಪು ಕೋಮುವಾದಿ, ಕ್ರಿಶ್ಚಿಯನ್ ವಿರೋಧಿ, ಹಿಂದೂ ವಿರೋಧಿ, ದೇವಸ್ಥಾನಗಳ ಭಂಜಕ ಎನ್ನುವ ಆರೋಪಗಳಿಗೂ ಇಲ್ಲಿ ಉತ್ತರವಿದೆ. ರಾಜಕೀಯ ಸಿದ್ಧಾಂತಗಳಿಗೆ ಸಿಲುಕಿದ, ತಿರುಚಿದ ಇತಿಹಾಸವನ್ನು ತಿದ್ದುವ ಪ್ರಯತ್ನವನ್ನು ಲೇಖಕ ಮಾಡಿದ್ದಾರೆ. ಪ್ರತಿಯೊಂದು ಅಧ್ಯಾಯಕ್ಕೂ ಆಧಾರವನ್ನು ಉಲ್ಲೇಖಿಸಲಾಗಿದೆ. ಇತಿಹಾಸ-ವರ್ತಮಾನದ 35 ಪುಸ್ತಕಗಳನ್ನು ಅಧ್ಯಯನ ಮಾಡಿ ಈ ಕೃತಿ ರಚಿಸಲಾಗಿದೆ ಎಂದು ಲೇಖಕರೇ ಹೇಳಿಕೊಂಡಿದ್ದಾರೆ.

ಇವರಿಬ್ಬರು ಆಗಿನ ಕಾಲದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕುವ ಸಾಹಸ ಮಾಡಿದ್ದು, ಸಮಾಜ ಸುಧಾರಣೆ, ಸಮಸಮಾಜದ ನಿರ್ಮಾಣಕ್ಕೆ ಹಾಕಿದ ಕ್ರಾಂತಿಕಾರಿ ಹೆಜ್ಜೆಗಳ ಉಲ್ಲೇಖವಿದೆ. ಕಪ್ಪ ಕೊಡಲಾಗದ ರಾಜರುಗಳಿಗೆ ವಿನಾಯಿತಿ, ಅವರೊಂದಿಗೆ ಕ್ರೂರವಾಗಿ ನಡೆದುಕೊಂಡ ತನ್ನ ಪ್ರತಿನಿಧಿಗಳನ್ನೇ ವಜಾ ಮಾಡಿದ ನಿದರ್ಶನಗಳನ್ನು ಇಲ್ಲಿ ನೀಡಲಾಗಿದೆ. ಮಠ ಹಾಗೂ ಸ್ವಾಮೀಜಿಗಳೊಂದಿಗೆ ಇದ್ದ ಆಪ್ತ ಸಂಬಂಧಗಳನ್ನೂ ಲೇಖಕ ದಾಖಲಿಸಿದ್ದಾರೆ. ಸ್ಥಳೀಯ ಹೋರಾಟಗಳಿಗೆ ಟಿಪ್ಪುವೇ ಸ್ಫೂರ್ತಿಯಾದ ನಿದರ್ಶನಗಳ ದಾಖಲೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.