ಕನ್ನಡದಲ್ಲಿ ಗ್ರಾಹಕ ಹಕ್ಕುಗಳ ಕುರಿತು ಗಟ್ಟಿಯಾಗಿ ಧ್ವನಿಯೆತ್ತಿದವರಲ್ಲಿ ವೈ.ಜಿ.ಮುರಳೀಧರನ್ ಕೂಡ ಒಬ್ಬರು. ಈ ವಿಚಾರ ಕುರಿತು ಅವರು ಈತನಕ 3,500ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ನಾಡಿನ ಹಲವು ಪತ್ರಿಕೆಗಳಲ್ಲಿ ಗ್ರಾಹಕ ಜಾಗೃತಿ ಮೂಡಿಸುವ ಇವರ ಅಂಕಣಗಳು ಪ್ರಕಟಗೊಂಡಿವೆ. ಅವುಗಳಲ್ಲಿ ಆಯ್ದ ಬರಹಗಳ ಸಂಗ್ರಹವೇ ‘ಬಳಕೆಸ್ನೇಹಿ ಜಗತ್ತು’ ಕೃತಿ. ‘ಗ್ರಾಹಕ ಆಂದೋಲನ’, ‘ಗ್ರಾಹಕರ ಹಕ್ಕುಗಳು’, ‘ಆರೋಗ್ಯ ನೀತಿ’ ಎಂಬ ಮೂರು ವಿಭಾಗಗಳಲ್ಲಿ ಒಟ್ಟು 42 ಲೇಖನಗಳನ್ನು ಈ ಪುಸ್ತಕ ಹೊಂದಿದೆ.

‘ಖರೀದಿಸಿದ ವಸ್ತುವನ್ನು ಮರಳಿ ಪಡೆಯುವುದಿಲ್ಲ’ ಎಂಬ ಉಲ್ಲೇಖ ಸಾಕಷ್ಟು ವಸ್ತುಗಳಲ್ಲಿ, ಮಳಿಗೆಗಳಲ್ಲಿ ಇರುತ್ತದೆ. ಆದರೆ ಈ ಸಾಲು ಕಾನೂನು ಬಾಹಿರ. ಯಾವುದೇ ಸಂಸ್ಥೆ ಒಂದು ವಸ್ತುವನ್ನು ಮಾರಾಟ ಮಾಡುವಾಗ ಹಲವು ಕಾನೂನುಗಳನ್ನು ಪಾಲಿಸಬೇಕು. ಅವುಗಳಲ್ಲಿ ಯಾವುದೇ ಒಂದು ಪಾಲನೆಯಾಗದಿದ್ದರೂ ಸಂಸ್ಥೆ ಆ ವಸ್ತುವನ್ನು ಮರಳಿ ಪಡೆಯಲೇಬೇಕು. ಇದರ ಅರಿವಿದ್ದ ಗ್ರಾಹಕರೊಬ್ಬರು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖರೀದಿಸಿದ್ದ ಆಹಾರ ಪದಾರ್ಥವೊಂದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರುತ್ತಾರೆ. ‘ಖರೀದಿಸಿದ ವಸ್ತುವನ್ನು ಹಿಂತಿರುಗಿಸಲು ಸಾಧ್ಯವಿದೆ’ ಎಂಬ ಲೇಖನದಲ್ಲಿ ಈ ಇಡೀ ಪ್ರಕರಣ ಮತ್ತು ಅದರ ಫಲಶ್ರುತಿಯನ್ನು ಚೆನ್ನಾಗಿ ವಿವರಿಸಿದ್ದಾರೆ. ನ್ಯಾಯಾಲಯದಲ್ಲಿ ಬಗೆಹರಿದ ಈ ರೀತಿ ಹಲವು ಪ್ರಕರಣಗಳು ಕೃತಿಯಲ್ಲಿ ಸಿಗುತ್ತವೆ. ಜತೆಗೆ, ಸಾಮಾನ್ಯ ಗ್ರಾಹಕನಿಗೆ ಆತನ ಹಕ್ಕಿನ ಕುರಿತು ಜಾಗೃತಿ ಮೂಡಿಸುತ್ತವೆ.

ಗ್ರಾಹಕ ಕಾನೂನು, ಸರ್ಕಾರದ ನೀತಿಗಳ ಕುರಿತು ಹಲವು ಲೇಖನಗಳಿವೆ. ಆದರೆ ಅವುಗಳಲ್ಲಿ ಬಹುತೇಕ ಒಂದು ದಶಕದ ಹಿಂದಿನ ಲೇಖನಗಳು. ಹೀಗಾಗಿ ಕೆಲವು ವಿಷಯಗಳು ಇಂದಿಗೆ ಹಳತು ಅನ್ನಿಸುತ್ತವೆ. ಆದರೆ ಅಂದು ಪ್ರಸ್ತಾಪಿಸಿದ ಒಂದಷ್ಟು ವಿಷಯಗಳಲ್ಲಿ ಇಂದಿಗೂ ಮಹತ್ತರ ಬದಲಾವಣೆ ಆಗದಿರುವುದು ನಮ್ಮ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ. ಗ್ರಾಹಕ ಹಕ್ಕಿನ ಕುರಿತು ಆಸಕ್ತಿ ಇರುವವರು, ಸಾಮಾನ್ಯ ಗ್ರಾಹಕ ತಿಳಿದುಕೊಳ್ಳಲೇಬೇಕಿರುವ ಸಾಕಷ್ಟು ಅಂಶಗಳು ಕೃತಿಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.