‘ಎರಡು ಖಂಡುಗ’ ಕೇವಲ ಗೇಣಿ ಹೋರಾಟದ ಕಥನವಲ್ಲ; ಮಲೆನಾಡಿನ ರೈತ ಬದುಕಿನ ದೀರ್ಘಕಾಲದ ನೋವು, ಅವಮಾನ, ಹೋರಾಟ ಮತ್ತು ಅಂತಿಮವಾಗಿ ದೊರೆತ ಸಾಮಾಜಿಕ ನ್ಯಾಯದ ದಾಖಲೆಯಾಗಿ ಓದುಗರ ಮುಂದೆ ತೆರೆದುಕೊಳ್ಳುವ ಕೃತಿ. ‘ಉಳುವವನೇ ಹೊಲದೊಡೆಯ’ ಎನ್ನುವ ಘೋಷಣೆ ಕೇವಲ ರಾಜಕೀಯ ಘೋಷವಾಕ್ಯವಾಗಿರದೆ, ಶತಮಾನಗಳಿಂದ ನೆಲದ ಬೆವರನ್ನು ಸುರಿಸಿದವರ ಮಾನವೀಯ ಹಕ್ಕಿನ ಕೂಗಾಗಿದ್ದುದನ್ನು ಕಾದಂಬರಿ ಮನದಟ್ಟಾಗಿಸುತ್ತದೆ.

ಲೇಖಕ ಗೇಣಿ ರೈತನ ಮನಸ್ಥಿತಿಯನ್ನು ಇತಿಹಾಸದ ದಾಖಲೆಗಳೊಂದಿಗೆ ಬೆರೆಸಿ ಕಟ್ಟಿಕೊಟ್ಟಿರುವುದು ಕೃತಿಯ ವಿಶೇಷ. ಹೊಲದಲ್ಲಿ ದುಡಿದರೂ ಭೂಮಿಯ ಮೇಲಿನ ಹಕ್ಕಿಲ್ಲದ ಬದುಕು ಎಷ್ಟು ಕಹಿಯಾಗಿತ್ತು, ಭೂಮಾಲೀಕರ ಅಧಿಪತ್ಯ ಹೇಗೆ ರೈತರನ್ನು ಕುಗ್ಗಿಸಿತು ಎಂಬುದು ಇಲ್ಲಿ ನೈಜತೆಯಿಂದ ಮೂಡಿಬರುತ್ತದೆ. ಆದರೆ ಕಾದಂಬರಿ ಕೇವಲ ಶೋಷಣೆಯ ದಾಖಲೆಯಾಗಿ ನಿಲ್ಲುವುದಿಲ್ಲ; ಹೋರಾಟದ ಮೂಲಕ ಗೌರವ ಮರಳಿ ಪಡೆದ ಸಮುದಾಯದ ಸಂಭ್ರಮವನ್ನೂ ಹೊತ್ತಿದೆ.

ಕಾಗೋಡು ಸತ್ಯಾಗ್ರಹ ಮತ್ತು ನಂತರ ಜಾರಿಗೆ ಬಂದ ಭೂ ಸುಧಾರಣಾ ಕಾನೂನಿನ ನಡುವಿನ ಐತಿಹಾಸಿಕ ಸಂಬಂಧವನ್ನು ಲೇಖಕರು ಕಥೆಯೊಳಗೆ ಸಹಜವಾಗಿ ಹೆಣೆದಿದ್ದಾರೆ. ವಿಶೇಷವಾಗಿ ಡಿ. ದೇವರಾಜ ಅರಸು ಅವರ ಭೂಶಾಸನ ತಿದ್ದುಪಡಿ ಕಾಯ್ದೆಯಿಂದ ಗೇಣಿ ರೈತರಿಗೆ ದೊರೆತ ಹಕ್ಕು, ಒಂದು ಸಮುದಾಯದ ಬದುಕಿನ ದಿಕ್ಕೇ ಬದಲಿಸಿದ ಕ್ಷಣವಾಗಿ ಚಿತ್ರಿತವಾಗಿದೆ. ಈ ಮೂಲಕ ಕಾದಂಬರಿ ಇತಿಹಾಸ, ರಾಜಕೀಯ ಮತ್ತು ಜನಜೀವನದ ಸಂಗಮವಾಗುತ್ತದೆ.

ಭಾಷೆಯೂ ಕೃತಿಯ ದೊಡ್ಡ ಶಕ್ತಿ. ಸಾಗರ ಭಾಗದ ಗ್ರಾಮೀಣ ಶೈಲಿ, ಮಲೆನಾಡಿನ ಸ್ಥಳೀಯ ನುಡಿಗಟ್ಟುಗಳು ಮತ್ತು ಜನಜೀವನದ ವಾಸನೆ ಕಥೆಗೆ ಜೀವ ತುಂಬುತ್ತವೆ. ಒಟ್ಟಾರೆ, ಗೇಣಿ ರೈತರ ಹಕ್ಕುಗಳ ಹೋರಾಟವನ್ನು ಸ್ಮರಿಸುವ ಕೃತಿ ಮಾತ್ರವಲ್ಲ; ನೆಲ, ಮನುಷ್ಯ ಮತ್ತು ನ್ಯಾಯದ ನಡುವಿನ ಸಂಬಂಧವನ್ನು ಮನಮುಟ್ಟುವಂತೆ ದಾಖಲಿಸಿದ ಸಾಮಾಜಿಕ ಕಾದಂಬರಿಯಾಗಿದೆ.

ಲೇ: ಶ್ರೀಧರ ಕೆ.ಎ. ಕೆಳದಿಪುರ

ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ

ಸಂ: 9449886390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.