ಗದಗ: ‘ಸಮಕಾಲೀನ ಭಾರತೀಯ ಸಾಹಿತ್ಯವು ಜನರ ನೈಜ ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹರಿಯಾಣ ಕುರುಕ್ಷೇತ್ರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವೀರೇಂದ್ರ ಪಾಲ್ ಹೇಳಿದರು.

ನಗರದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ವಿದ್ಯಾ ಲಯದ ಐಕ್ಯುಎಸಿ ಮತ್ತು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಸಮ ಕಾಲೀನ ಭಾರತೀಯ ಸಾಹಿತ್ಯದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

‘ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾವು ಪಾಶ್ಚಿಮಾತ್ಯ ಕಣ್ಣುಗಳಿಂದ ನೋಡುತ್ತಿದ್ದೇವೆ. ಗಂಗಾ, ಯಮುನೆಯನ್ನು ಪೂಜಿಸುತ್ತೇವೆ ಎಂದು ಹೇಳುವ ನಾವು ಅವುಗಳನ್ನು ಸರಿಪಡಿಸಲಾರದಷ್ಟರ ಮಟ್ಟಿಗೆ ಕಲುಷಿತ ಗೊಳಿಸಿದ್ದೇವೆ. ಆದರೆ, ಮೇಘಾಲಯದ ಉಮಂಗೋಟ್ ನದಿಯ ಸ್ವಚ್ಛತೆಯು ಅಲ್ಲಿನ ಬುಡಕಟ್ಟು ಜನರು ನಿಸರ್ಗವನ್ನು ಎಷ್ಟು ಪವಿತ್ರವಾಗಿ ಕಾಣುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹರಿಯಾಣದ ಗುರು ಜಂಬೇಶ್ವರ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿಜಯಕುಮಾರ್ ಮಾತನಾಡಿ, ‘ಸಾಹಿತ್ಯ ನಮ್ಮ ಬದುಕಿನ ವಿವಿಧ ಆಯಾ ಮಗಳನ್ನು ಒಳಗೊಂಡು ಜನರ ಮನಸ್ಸು ಮತ್ತು ಬುದ್ಧಿಯನ್ನು ಬೆಳಗುತ್ತದೆ. ಸಾಹಿತ್ಯ ದಲ್ಲಿ ಸುಂದರ ಬದುಕಿಗೆ ಬೇಕಾದ ರಾಶಿರಾಶಿ ವಿಚಾರಗಳಿವೆ’ ಎಂದು ಹೇಳಿದರು.

ಬೇರೆ ಬೇರೆ ಮಹಾವಿದ್ಯಾಲಯ ಹಾಗೂ ವಿವಿಧ ರಾಜ್ಯಗಳಿಂದ ಬಂದಿದ್ದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪ್ರಬಂಧ ಮಂಡಿಸಿದರು.

ಪ್ರೊ. ಜಿ.ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಶ್ಮಿತಾ ಪೂಜಾರ ಪ್ರಾರ್ಥಿಸಿದರು.

ಪ್ರೊ. ಬಿ.ಆರ್.ಚಿನಗುಂಡಿ, ಪ್ರೊ. ಸ್ನೇಹಾ ಕೊಡಗುಳಿ ಪರಿಚಯಿಸಿದರು. ಸಂಜನಾ ಹಾಗೂ ಸಂಗೀತಾ ವಣಗೇರಿ ನಿರೂಪಿಸಿದರು. ಪ್ರೊ.ನಾಗರಾಜ್ ಬಳಿಗೇರ ಹಾಗೂ ಪ್ರೊ. ನಾಗರಾಜ್ ಓಬ್ಬಯ್ಯ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-23-753019261

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.