ಗಂಗಾವತಿ: ಕಾವ್ಯ ಅಂತರಂಗದ ಭಾಷೆ. ಅಂತರಂಗದಲ್ಲಿ ಚಿಂತನ, ಮಂಥನ ನಡೆದಾಗ ಮಾತ್ರ ಕವಿತೆ ಹುಟ್ಟುತ್ತದೆ. ಒಳಗಣ್ಣಿನಿಂದ ನೋಡಿ ರಚಿಸಿದಾಗ ಮಾತ್ರ ಭರವಸೆಯ ಕಾವ್ಯ ಸೃಷ್ಟಿಯಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ, ಶ್ರೀರಾಮನಗರ ಆರುಷಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಬಸವರಾಜ ಗೌಡನಬಾವಿ ಅವರ ಚೊಚ್ಚಲ ಕವನ ಸಂಕಲನ ‘ಅಕ್ಷರಗಳ ಬಿಕ್ಕಳಿಕೆ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಕಾವ್ಯ ಪರಂಪರೆ ಸಮೃದ್ಧವಾದುದು. ಯುವ ಕವಿಗಳು ವಿಭಿನ್ನ ಸಂವೇದನೆಗಳು ಅಭಿವ್ಯಕ್ತಿಸುತ್ತಿದ್ದಾರೆ. ಬಸವರಾಜ ಗೌಡನಬಾವಿ ಅವರ ‘ಅಕ್ಷರಗಳ ಬಿಕ್ಕಳಿಕೆ’ ಸಂಕಲನ ವಿಭಿನ್ನ ಸಂವೇದನೆ, ವಿನ್ಯಾಸದಿಂದ ಗಮನಸೆಳೆಯುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರನ್ನು ಪ್ರೊತ್ಸಾಹಿಸುವಲ್ಲಿ ಮುನ್ನೆಲೆಯಲ್ಲಿದೆ’ ಎಂದರು.

ಸಾಹಿತ್ಯ ಅಕಾಡೆಮಿ ಸದಸ್ಯ ಚನ್ನಬಸಪ್ಪ ಚಿಲ್ಕರಾಗಿ ಮಾತನಾಡಿ, ಬಸವರಾಜ ಗೌಡನಬಾವಿ ಅವರ ಕವಿತೆಗಳು ಗಾಢವಾದ ಸಾಮಾಜಿಕ ಪ್ರಜ್ಞೆ ಹೊಂದಿವೆ ಎಂದರು.

ಮುಮ್ತಾಜ್ ಬೇಗಂ, ಕವಿ ಬಸವರಾಜ ಗೌಡನಬಾವಿ ಮಾತ ನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ,ವಿಜಯಲಕ್ಷ್ಮಿ ನಾರಿನಾಳ, ತಾಲ್ಲೂಕು ಕಸಾಪ ಅಧ್ಯಕ್ಷ ರುದ್ರೇಶ ಆರ್ಹಾಳ, ಉಮಾ ದೇವಿ, ಗುಂಡೂರು ಪವನ ಕುಮಾರ, ರವಿ ಹಾದಿಮನಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-35-33355760

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.