ಆಹಾರ ಭದ್ರತೆ ಎಂದರೆ ಕೇವಲ ಜನಸಂಖ್ಯೆಗೆ ತಕ್ಕಷ್ಟು ಆಹಾರ ಪೂರೈಕೆ ಮಾಡುವುದಲ್ಲ; ನಮ್ಮ ಸುತ್ತಲಿನ ವೈವಿಧ್ಯಮಯ ಆಹಾರ ಮೂಲಗಳನ್ನು ಸಮರ್ಪಕವಾಗಿ ಗುರುತಿಸಿ, ಬಳಸಿಕೊಳ್ಳುವುದೂ ಆಗಿದೆ. ಈ ಜೀವನ ಮಾದರಿಯನ್ನು ಮಳೆ ಹೇರಳವಾಗಿರುವ ಕರಾವಳಿ ಮತ್ತು ಮಲೆನಾಡಿನ ಜನರು ಸಹಜವಾಗಿ ಅಳವಡಿಸಿಕೊಂಡಿದ್ದರು. ಪ್ರಕೃತಿಯೇ ಅವರ ಆಹಾರ ಸಂಸ್ಕೃತಿಗೆ ಬೆನ್ನೆಲುಬಾಗಿತ್ತು.

ಆದರೆ ಆಧುನೀಕರಣದ ಅಬ್ಬರದಲ್ಲಿ ಈ ಭಾಗಗಳಲ್ಲಿಯೂ ಕೈತೋಟ, ಕಾಡುಸೊಪ್ಪು, ಸ್ಥಳೀಯ ಆಹಾರ ಪದ್ಧತಿ ಆಧಾರಿತ ಆಹಾರ ಭದ್ರತೆಯ ಕಲ್ಪನೆ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಇಂಥ ಸಂದರ್ಭದಲ್ಲಿ ‘ಹಿತ್ತಲ ಸುತ್ತಲೂ’ ಕೃತಿ ಕೇವಲ ಒಂದು ಪುಸ್ತಕವಾಗಿಯೇ ಉಳಿಯದೆ, ಕೈತೋಟದ ಸಂಸ್ಕೃತಿಯನ್ನು ಪುನರುಜ್ಜೀವಗೊಳಿಸುವ ಕೈಪಿಡಿಯಂತೆ ನೆರವಾಗುತ್ತದೆ.

ಹಿತ್ತಲಲ್ಲಿ ನಾವು ಏನು ಬೆಳೆಸುತ್ತೇವೆ ಎಂಬುದಷ್ಟೇ ಮುಖ್ಯವಲ್ಲ; ತಾನಾಗಿಯೇ ಮೊಳೆತು ಬೆಳೆಯುವ ಅನೇಕ ಸಸ್ಯಗಳು, ಸೊಪ್ಪುಗಳಲ್ಲೂ ಅಪಾರ ಔಷಧೀಯ ಗುಣಗಳಿವೆ. ನಮ್ಮ ಪೂರ್ವಜರು ಅವನ್ನು ಅಡುಗೆಮನೆಯ ಪ್ರಯೋಗಗಳ ಮೂಲಕವೇ ಕಂಡುಹಿಡಿದಿದ್ದರು. ಆ ಪರಂಪರೆಯ ಜ್ಞಾನವನ್ನು ಈ ಕೃತಿ ಸರಳವಾಗಿ ದಾಖಲಿಸುತ್ತದೆ.

ಸಮೃದ್ಧ ಕೈತೋಟದಲ್ಲಿ ದೊರೆಯುವ ಸಾವಯವ ತರಕಾರಿಗಳು, ಹಣ್ಣುಗಳು, ಗೆಡ್ಡೆ–ಗೆಣಸುಗಳು, ವಿವಿಧ ಸೊಪ್ಪುಗಳ ಬಗ್ಗೆ ಇಲ್ಲಿರುವ ಮಾಹಿತಿ ಗಮನಾರ್ಹ. ಯಾವ ಪದಾರ್ಥದಲ್ಲಿ ಯಾವ ವಿಟಮಿನ್ ಇದೆ, ಅದನ್ನು ಅಡುಗೆಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ಚಿತ್ರಸಹಿತವಾಗಿ ವಿವರಿಸಿದ್ದಾರೆ.

ಕೈತೋಟ ಮತ್ತು ಹೆಣ್ಣುಮಕ್ಕಳ ಸಂಬಂಧ ಹಿಂದಿನಿಂದಲೂ ಆಪ್ತ. ಒಂದು ಮನೆಯ ಹಿತ್ತಲನ್ನು ನೋಡಿದರೆ ಆ ಮನೆಯ ಬದುಕಿನ ಸೊಗಡು ಅರಿವಾಗುತ್ತದೆ. ವಿಶೇಷವಾಗಿ ಮಲೆನಾಡು ಮತ್ತು ಕರಾವಳಿಯ ಮಹಿಳೆಯರ ಬದುಕಿನಲ್ಲಿ ಕೈತೋಟ ಒಂದು ಸಹಜ ಸಂಸ್ಕೃತಿ. ಇಂಥ ಮಹಿಳೆಯರೇ ಸೇರಿ ಈ ವಿಶಿಷ್ಟ ಕೃತಿಯನ್ನು ಸಂಪಾದಿಸಿರುವುದು ಇನ್ನಷ್ಟು ಅರ್ಥಪೂರ್ಣವಾಗಿದೆ. ಸಾಂಪ್ರದಾಯಿಕ ಜ್ಞಾನವನ್ನು ಉಳಿಸಬೇಕು, ಅದನ್ನು ಮುಂದಿನ ಪೀಳಿಗೆಗೆ ಅಕ್ಷರ ರೂಪದಲ್ಲಿ ಹಸ್ತಾಂತರಿಸಬೇಕು ಎಂಬ ಆಶಯ ಈ ಕೃತಿಯ ಹಿಂದಿದೆ.

ಪ್ರಕಾಶನ: ವನಸ್ತ್ರೀ

ದರ ₹ 200

ಪುಟಗಳು 247

ಸಂಪರ್ಕ: 98868 56364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.