ಹೊಸಪೇಟೆ: ‘ಬೆಂಕಿಯ ಮಳೆ’ ಕೃತಿಯಲ್ಲಿರುವ ಹಾಡುಗಳು ಕೇವಲ ಗೀತೆಗಳಲ್ಲ, ದಮನಿತ ವರ್ಗದ ಅಸ್ತಿತ್ವದ ಕೂಗು ಮತ್ತು ಬದುಕಿನ ಮಾರ್ಗವನ್ನು ಸೂಚಿಸುವ ಅಭಿವೃಕ್ತಿಗಳಾಗಿವೆ ಎಂದು ಕವಿ ಹಾಗೂ ಸಂಸ್ಕೃತಿ ಚಿಂತಕ ಆರಿಫ್ ರಾಜಾ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ವತಿಯಿಂದ ನಡೆದ ‘ನಮ್ಮ ಮಾತು–37’ ಕಾರ್ಯಕ್ರಮದ ಅಂಗವಾಗಿ ‘ಬೆಂಕಿಯ ಮಳೆ’ – ಸಮಗ್ರ ಹೋರಾಟದ ಹಾಡುಗಳು ಕೃತಿಯ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.

‘ಕವಿಗಿಂತ ಹಾಡುಗಾರ ಹೆಚ್ಚು ಪ್ರಾಮುಖ್ಯನಾಗುತ್ತಾನೆ ಕಾರಣ, ಕೃತಿಯ ಸಂದೇಶವನ್ನು ಜನತೆಗೆ ತಲುಪಿಸುವ ಜವಾಬ್ದಾರಿ ಹಾಡುಗಾರನ ಮೇಲಿರುತ್ತದೆ’ ಎಂದರು.

ಕೃತಿಯ ಸಂಪಾದಕ ಹಾಗೂ ಕನ್ನಡ ವಿಶ್ವವಿದ್ಯಾಲಯ ಕುಪ್ಪಳ್ಳಿ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ.ಬಿ.ಎಂ.ಪುಟ್ಟಯ್ಯ ಮಾತನಾಡಿ, ‘ಬೆಂಕಿಯ ಮಳೆ’ ಎಂಬ ಶೀರ್ಷಿಕೆಯನ್ನು ಸಿದ್ದಲಿಂಗಯ್ಯ ಅವರ ಕಾವ್ಯದಿಂದ ಪಡೆದಿರುವುದಾಗಿ ತಿಳಿಸಿದರು. ಬೆಂಕಿಯು ನಾಶವನ್ನು ಸೂಚಿಸಿದರೆ ಮಳೆಯು ಸೃಷ್ಟಿಯನ್ನು ಸೂಚಿಸುತ್ತದೆ. ಈ ಎರಡರ ಸಂಯೋಜನೆಯ ಮೂಲಕ ಶೀರ್ಷಿಕೆ ಹೋರಾಟದ ಸ್ವಭಾವವನ್ನು ವ್ಯಕ್ತಪಡಿಸುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೋರಾಟದ ಗೀತೆಗಳು ಸುಗಮ ಸಂಗೀತದ ರೂಪ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು, ಈ ಹಾಡುಗಳು ಕೇರಿಯಿಂದ ನಾಡಿನವರೆಗೆ, ಅಲ್ಲಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಿಸಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ವಹಿಸಿದ್ದರು. ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ಇರುತ್ತದೋ ಅಲ್ಲಿಯವರೆಗೂ ಹೋರಾಟದ ಹಾಡುಗಳು ಮತ್ತೆ ಮತ್ತೆ ಅಸ್ತಿತ್ವ ಪಡೆಯುತ್ತಲೇ ಇರುತ್ತವೆ ಎಂದರು.

ಸಂಶೋಧನಾರ್ಥಿ ಪ್ರವೀಣ ಕಿತ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ನಾಯಕ್, ಕಮಲಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-25-1926841019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.