ಪುಸ್ತಕವೊಂದು ಹಲವಾರು ಪುಸ್ತಕಗಳ ಓದುವ ಕುತೂಹಲ ಮೂಡಿಸುವಂತಿದ್ದರೆ..? ಇದ್ದಕ್ಕಿದ್ದಂತೆ ಆದಿಪುರಾಣ ಅರ್ಥೈಸಿಕೊಳ್ಳುವುದು ಹೇಗೆ? ಪಂಪನ ರಚನೆಯನ್ನು ಗಮಕದಲ್ಲಿ ಓದಿ, ವ್ಯಾಖ್ಯಾನಿಸುವವರು ಇದ್ದಾರೆಯೇ ಎಂದು ಹುಡುಕಲಾರಂಭಿಸಿದರೆ, ಹುಡುಕಾಡಿ, ತಡಕಾಡಿ ದೇಹವೇ ದೇಶ ಎಂಬ ಪುಸ್ತಕದ ಮೂಲ ಕೃತಿಯನ್ನೂ ವಿಕ್ರಮವ್ ವಿಸಾಜಿ ಅವರ ಅನುವಾದಿತ ಕೃತಿಯನ್ನೂ ತರಿಸಿಕೊಳ್ಳುವಂತೆ ಮಾಡಿದರೆ; ಸಖೀಗೀತ ಹುಡುಕಿದರೆ; ಮುಕ್ತಾಯಕ್ಕನ ರಚನೆಗಳ ಓದಿಗೆ ತೆರೆದುಕೊಂಡರೆ.. ಇಂಥ ಹತ್ತು ಹಲವಾರು ರೆಗಳನ್ನು ಸೃಷ್ಟಿಸಿ, ಸಾಮಾನ್ಯರ ಓದಿನ ಹರವನ್ನು ವಿಸ್ತರಿಸುವಂತಿದೆ ಬಹುಮುಖಿ ಪಠ್ಯಗಳ ಓದು. ಇಲ್ಲಿ ಲೇಖಕರು ಇವೆಲ್ಲವೂ ಈ ಮೊದಲೇ ಪ್ರಕಟಣೆಯಾದ ಬರೆಹಗಳೆಂದೂ ಕೆಲವೊಂದು ಸಾಂದರ್ಭಿಕ ಲೇಖನಗಳೆಂದೂ ಹೇಳಿದ್ದಾರೆ. ಆದರೆ ಈ ಪುಸ್ತಕದಲ್ಲಿ ಆ ಎಲ್ಲ ಮಿತಿಯನ್ನೂ ಮೀರಿ ಓದುಗರಿಗೆ ಹೊಸ ಓದಿನ ರುಚಿಯನ್ನು ಹತ್ತಿಸುವ ಕೆಲಸವನ್ನು ಈ ಪುಸ್ತಕ ಸಶಕ್ತವಾಗಿ ಮಾಡುತ್ತದೆ. ಅಂಕಣ ಬರೆಹ ಆಗಿರುವುದರಿಂದ ಪದಮಿತಿಯ ಚೌಕಟ್ಟಿಗೆ ಇವನ್ನು ಒಳಪಡಿಸಿರುವುದರಿಂದ ಓದಿದ್ದೆಲ್ಲವೂ ಇನ್ನಷ್ಟು ಬೇಕು ಎನಿಸುವಂತಿವೆ. ಪುಸ್ತಕ ರೂಪದಲ್ಲಿ ತರುವಾಗ ವಿಸ್ತರಿಸುವ ಸಾಧ್ಯತೆ ಇದ್ದರೂ, ಹಾಗೆಯೇ ಉಳಿಸಿಕೊಂಡಿರುವುದು ಓದುಗರನ್ನು ಹಿಡಿದಿಡುತ್ತವೆ. ಕೆಲವೊಂದು ಬರೆಹಗಳು ಈ ಮೊದಲೂ ಇದನ್ನು ಓದಿದ್ದೆವು ಎಂದೆನಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಆದರೆ ಇನ್ನು ಮುಂದೆ ಏನು ಓದುವುದು; ಹೊಸದೇನು ಓದುವುದು ಎಂದು ವಿಚಾರಿಸುವಂಥ ಹೊಸ ಓದುಗರಿಗೆ ಇದು ಓದಿನ ವಿಸ್ತಾರವಾದ ಸಾಗರವನ್ನು ಪುಟ್ಟದೊಂದು ಮಡಕೆಯಲ್ಲಿ ತುಂಬಿ ತಂದು, ನಿನ್ನ ಬೊಗಸೆಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊ ಎಂದು ಹೇಳುವಂತಿದೆ. ವಿರಾಮದ ವಿಸ್ತೃತ ಓದಿಗೆ ಪ್ರೇರಕವಾಗುವಂತಿದೆ ಈ ಪುಸ್ತಕ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1239490554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.