ಜನಪದರ ಬಾಯಲ್ಲಿ ಕಥೆಗಳ ಭಂಡಾರವೇ ಅಡಗಿದೆ. ಬಾಲ್ಯದ ಸಂಜೆಯ ಹೊತ್ತಿನಲ್ಲಿ ಅಜ್ಜಿಯರ ಬಾಯಿಂದ ಕೇಳಿಬರುತ್ತಿದ್ದ ಕಥೆಗಳು, ಹೊಲಗಳಲ್ಲಿ ಕೆಲಸ ಮಾಡುವಾಗ ರೈತರ ತುಟಿಗಳಲ್ಲಿ ಹುಟ್ಟುತ್ತಿದ್ದ ಹಾಡುಗಳು–ಇವೆಲ್ಲ ಈಗ ನಿಧಾನವಾಗಿ ವಿರಳವಾಗುತ್ತಿವೆ. ಆ ಕಳೆದುಹೋಗುತ್ತಿರುವ ಮೌಖಿಕ ಸಂಪತ್ತನ್ನು ಹಿಡಿದು ಉಳಿಸುವ ಪ್ರಯತ್ನವಾಗಿ ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತು ಜಿ. ಕೃಷ್ಣಪ್ರಸಾದ್ ಅವರು ‘ಭೂಮಿಗೆ ರಾಗಿ ಬಂದಿದ್ದು– ಕೃಷಿ ಪರಿಸರ ಜನಪದ ಕಥೆಗಳು’ ಕೃತಿಯನ್ನು ಹೊರತಂದಿದ್ದಾರೆ.

ಮಳೆಯ ಹಿಂದಿನ ಕಥೆಯಿಂದ ಹಿಡಿದು ಭೂಮಿಗೆ ಎಳ್ಳು ಬಂದಿದ್ದು ಹೇಗೆ, ಅವರೆಕಾಳಿಗೆ ಗೆರೆ ಏಕೆ ಬಂದಿದೆ ಎಂಬ ಕುತೂಹಲಕರ ವಿವರಣೆಗಳವರೆಗೆ–ಈ ಕೃತಿಯಲ್ಲಿರುವ ಕಥೆಗಳು ಪ್ರಕೃತಿಯೊಂದಿಗೆ ಮಾನವನ ನಂಟನ್ನು ಹೇಳುತ್ತವೆ. ಭೂಮಿಗೆ ಮನುಷ್ಯರು ಬಂದದ್ದು ಹೇಗೆ, ದನಗಳು ಬೇಸಾಯದ ಭಾಗವಾದದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಜನಪದರು ತಮ್ಮದೇ ಕಲ್ಪನೆ ಮತ್ತು ಜೀವನಾನುಭವದಿಂದ ಉತ್ತರಗಳನ್ನು ಕಟ್ಟಿಕೊಟ್ಟಿದ್ದಾರೆ. ಆದ್ರಿ ಮಳೆ, ಕುಮಾರರಾಮ ಮೊದಲಾದ ಕಥೆಗಳು ಈ ಸಂಕಲನಕ್ಕೆ ಇನ್ನಷ್ಟು ವೈವಿಧ್ಯ ತರುತ್ತವೆ.

ಬೇಸಾಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಜನಪದರು ಮಳೆ, ಭೂಮಿ, ಬೀಜ, ಕೆರೆ, ಧಾನ್ಯ ಇತ್ಯಾದಿಗಳ ಸುತ್ತ ಅನೇಕ ಕಥೆಗಳನ್ನು ರೂಪಿಸಿದ್ದಾರೆ. ಇವು ತಲೆತಲಾಂತರಗಳಿಂದ ಬಾಯಿಯಿಂದ ಬಾಯಿಗೆ ಸಾಗುತ್ತಾ ಬಂದಿದ್ದು, ಈಗಲೂ ರೈತರು, ಬುಡಕಟ್ಟು ಸಮುದಾಯಗಳು ಮತ್ತು ವಿಭಿನ್ನ ಭೌಗೋಳಿಕ ಪ್ರದೇಶಗಳಲ್ಲಿ ಜೀವಂತವಾಗಿವೆ. ಅಂಥ ಕಥೆಗಳನ್ನು ಆಯ್ದು, ಸಂಗ್ರಹಿಸಿ, ಈ ಕೃತಿಯಲ್ಲಿ ದಾಖಲಿಸಲಾಗಿದೆ.

ಸುಮಾರು ನಲವತ್ತಕ್ಕೂ ಹೆಚ್ಚು ಕಥೆಗಳಿರುವ ಈ ಸಂಕಲನದ ಪ್ರತಿಯೊಂದು ಕಥೆಯಲ್ಲೂ ಜನಪದರ ಲೋಕದೃಷ್ಟಿ, ಜೀವನದೃಷ್ಟಿ, ಸ್ಥಳೀಯ ಜ್ಞಾನ, ಅವರ ವಿನೋದಪ್ರವೃತ್ತಿ ಮತ್ತು ಬದುಕಿನ ಕೌಶಲಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಮೂಲ ಹಸ್ತಪ್ರತಿಯ ಮಾದರಿಗಳನ್ನು ಕೂಡ ಸಂಗ್ರಹಿಸಿ ಪ್ರಕಟಿಸಿರುವುದು ಈ ಕೃತಿಗೆ ದಾಖಲಾತಿ ಮೌಲ್ಯವನ್ನೂ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.