ಮತ್ತೆ ಹಚ್ಚೋಣ ಕನ್ನಡದ ದೀಪ
ಲೇ: ರಾ.ನಂ. ಚಂದ್ರಶೇಖರ
ಪ್ರ: ಸಪ್ನ ಬುಕ್ಹೌಸ್
ಸಂ: 080 40114455

ನಿಜ ಅರ್ಥದಲ್ಲಿ ಭಾಷೆಯೊಂದು ಬದುಕು ಕಟ್ಟಿಕೊಡಬೇಕಾದದ್ದು ಹೇಗೆ ಎನ್ನುವುದನ್ನು ವಿವರವಾಗಿ ಚರ್ಚಿಸಿದೆ ಈ ಕೃತಿ. ಭಾಷೆಯೊಂದು ಕೇವಲ ಸಂವಹನ ಮಾಧ್ಯಮವಾಗಬಾರದು. ಅನ್ನ ಕೊಡುವ ಭಾಷೆಯಾಗಬೇಕು ಎನ್ನುವುದು ಲೇಖಕರ ವಾದ. ಒಂದು ಭಾಷೆಯನ್ನು ಮಾತನಾಡುವ ಜನ ತಮ್ಮ ವೃತ್ತಿ– ಕ್ಷೇತ್ರ ಬಯಸುವ ಕೌಶಲಗಳನ್ನು ಕಲಿತುಕೊಳ್ಳಲೂ ಮುಂದಾಗಬೇಕು. ಯಾವ ಕೆಲಸವನ್ನಾದರೂ ಮಾಡುವ ಮನಸ್ಥಿತಿಯನ್ನೂ ಹೊಂದಬೇಕು. ಇಲ್ಲವಾದಲ್ಲಿ ಉದ್ಯೋಗದಾತರು ಅನ್ಯ ಭಾಷೆಯ ಪ್ರದೇಶದಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ ಎಂಬುದು ಈ ಕೃತಿ ನಡೆಸಿರುವ ಚರ್ಚೆ.

ಬೇರೆ ಭಾಷಿಗರ ವಲಸೆ ಯಾವ ಕಾರಣಕ್ಕಾಗಿ ಆಯಿತು ಎಂಬುದರಿಂದ ಚರ್ಚೆ ಆರಂಭವಾಗಿದೆ. ಕೌಶಲಯುತ ಅಥವಾ ಕೌಶಲರಹಿತ ಕಾರ್ಮಿಕರ ಕೊರತೆ ಎದುರಾದಾಗ ಅಥವಾ ಸ್ಥಳೀಯರು ನಿರ್ದಿಷ್ಟ ಕೆಲಸಕ್ಕೆ ಮುಂದಾಗದೇ ಇದ್ದಾಗ ಪಕ್ಕದ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರಬೇಕಾಯಿತು. ಉದಾಹರಣೆಗೆ ಬೃಹತ್ ಅಣೆಕಟ್ಟೆ ಯೋಜನೆಗಳ ಕಾಮಗಾರಿಗೆ, ಬೃಹತ್ ನಿರ್ಮಾಣಗಳಿಗೆ ವಲಸಿಗರು ಅನಿವಾರ್ಯವಾದರು. ಇದೇ ಪರಿಸ್ಥಿತಿ ಮಾಹಿತಿ ತಂತ್ರಜ್ಞಾನ, ಕಾರ್ಪೊರೆಟ್ ವಲಯಕ್ಕೂ ವಿಸ್ತರಿಸಿತು. ನಮ್ಮವರು ಹೊಸ ಕಲಿಕೆಗೆ, ಹೊಸ ಪ್ರದೇಶಕ್ಕೆ ತೆರೆದುಕೊಳ್ಳದಿರುವುದೇ ಇದಕ್ಕೆ ಕಾರಣ ಎಂಬುದನ್ನು ವಿವಿಧ ಅಧ್ಯಯನ ವರದಿಗಳನ್ನು ಆಧರಿಸಿ ವಿವರಿಸಲಾಗಿದೆ. ಕರ್ನಾಟಕದಲ್ಲಿರುವ ಉದ್ಯಮ ಸಾಧ್ಯತೆಗಳು, ಐತಿಹಾಸಿಕ ಪ್ರವಾಸಿ ತಾಣಗಳು, ಸಂಪನ್ಮೂಲಗಳು, ಕೃಷಿ, ಆಹಾರ ವೈವಿಧ್ಯ, ಭೌಗೋಳಿಕ ಮಾನ್ಯತೆ ಪಡೆದಿರುವ ವಸ್ತುಗಳು, ಭೌಗೋಳಿಕ ವೈಶಿಷ್ಟ್ಯಗಳು, ಸರ್ಕಾರದ ಯೋಜನೆಗಳು ಮತ್ತು ಅವುಗಳ ಪರಿಣಾಮ ಹೀಗೆ ಹಲವಾರು ಆಯಾಮಗಳ ಕುರಿತು ಚರ್ಚಿಸಲಾಗಿದೆ. ವಿವಿಧ ಪತ್ರಿಕಾ ಬರಹಗಳು, ಸುದ್ದಿ ತುಣುಕುಗಳು, ವಿವಿಧ ವರದಿಗಳ, ಪರಿಣತರ ಅಭಿಪ್ರಾಯಗಳ ಉಲ್ಲೇಖಗಳು ಕೃತಿಯ ಹೂರಣದ ತೂಕ ಹೆಚ್ಚಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.