ಹುಟ್ಟೂರು ಎಂಬುದು ಪ್ರತಿಯೊಬ್ಬರೂ ಹಂಬಲಿಸುವ ನೆಮ್ಮದಿ ನೀಡುವ ಸ್ಥಳ. ಬದುಕು ಕಟ್ಟಿಕೊಳ್ಳಲು ಊರು ಬಿಟ್ಟರೂ, ಆಗಾಗ್ಗ ಹುಟ್ಟೂರಿಗೆ ಭೇಟಿ ನೀಡಿ ಸಂಭ್ರಮಿಸುವ ಸುಖವನ್ನು ಬಹುತೇಕರು ವ್ಯಕ್ತಪಡಿಸಿರುತ್ತಾರೆ. ಹೀಗೆ ಹುಟ್ಟೂರು ಮತ್ತು ಅಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ಸಂಭ್ರಮಿಸಿ ಅದಕ್ಕೆ ಅಕ್ಷರ ರೂಪವನ್ನು ಕೆಲವರು ನೀಡಿದ್ದಾರೆ. ಅಂಥದ್ದರಲ್ಲಿ ಉತ್ತನೂರು ವೆಂಕಟೇಶ ಅವರು ‘ನನ್ನೂರ ನೆನಪುಗಳು’ ಒಂದು.

ವೆಂಕಟೇಶ ಅವರು ಈ ಕೃತಿಯಲ್ಲಿ ತಮ್ಮ ಹುಟ್ಟೂರಾದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಉತ್ತನೂರು ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. 60ರ ದಶಕದಲ್ಲಿ ಊರಿನ ಚಿತ್ರಣ ಹೇಗಿತ್ತು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಚಾರಿತ್ರಿಕ ಹಾಗೂ ಸಾಂಸ್ಕೃತಿಕವಾಗಿ ತಮ್ಮ ಹುಟ್ಟೂರಿನ ಸೊಬಗನ್ನು ಇಲ್ಲಿ ದಾಖಲಿಸಿದ್ದಾರೆ. ಆಗಿನ ಸಂದರ್ಭದಲ್ಲಿ ಕೊರತೆಗಳ ನಡುವೆಯೂ ಒಂದು ಬಗೆಯ ಉಲ್ಲಾಸದ ಬದುಕನ್ನು ಆವರಿಸಿಕೊಂಡಿದ್ದ ಕಾಲಘಟ್ಟದ ಊರಿನ ಕಥನವನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ.

ಕೃತಿಯಲ್ಲಿ ಹಬ್ಬಗಳು, ಧಾರ್ಮಿಕ ಉತ್ಸವಗಳು, ಊರಿನ ಸಾಮರಸ್ಯದ ಆಚರಣೆಯ ಜತೆಗೆ ಸಾಂಸ್ಕೃತಿಕ ವೈವಿಧ್ಯವನ್ನು ವಿವರಿಸಿದ್ದಾರೆ. ಇದು ಒಂದೂರಿನ ಕಥೆಯಾಗಿಯೂ ಮತ್ತು ಲೇಖಕ ವೆಂಕಟೇಶ ಅವರ ಆತ್ಮಕಥನ ರೂಪದಲ್ಲೂ ಇದೆ. ಕೃತಿಯಲ್ಲಿ 21 ವಿಭಾಗಗಳಿವೆ. ಅವುಗಳಲ್ಲಿ ಊರಿನ ಚಿತ್ರಣ, ಅದರ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ಆಗಿನ ಜನಜೀವನ, ಕೃಷಿ ಮತ್ತು ಜಾನಪದ, ವಿವಿಧ ದೇವಾಲಯಗಳ ಐತಿಹ್ಯ ಮತ್ತು ಅಲ್ಲಿನ ಆಚರಣೆ ಸಹಿತ ಉತ್ತನೂರು ಗ್ರಾಮವನ್ನು ಕಣ್ಣೆದುರು ತಂದಿದ್ದಾರೆ.

ನನ್ನೂರ ನೆನಪುಗಳು ಕಥನಕ್ಕೆ ಕಲಾವಿದ ಪಿ.ವಿಶ್ವನಾಥ್ ಅವರ ರೇಖಾಚಿತ್ರಗಳು ಇನ್ನಷ್ಟು ಮೆರಗು ನೀಡಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-51-1044342628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.