ಮಂಗಳೂರು: 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೊಂಕಣಿ ಸಾಹಿತಿ ಎಚ್.ಎಂ.ಪೆರ್ನಾಲ್ ಅವರಿಗೆ ಎಂಡಿವಿಕೆ ಎಚ್ಎಂ ಅಭಿನಂದನ್ ಸಮಿತಿ, ವಿವಿಧ ಕೊಂಕಣಿ ಸಂಘ– ಸಂಸ್ಥೆಗಳ ವತಿಯಿಂದ ಪುರಭವನದಲ್ಲಿ ಮೇ 15ರಂದು ಸಂಜೆ 5.30ಕ್ಕೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅಭಿನಂದನಾ ಸಮಿತಿ ಸಂಚಾಲಕ ಮೆಲ್ವಿನ್ ರಾಡ್ರಿಗಸ್, ಸಂಜೆ 5.45ಕ್ಕೆ ಉಸ್ತಾದ್ ರಫೀಕ್ ಖಾನ್ ಮತ್ತು ತಂಡದಿಂದ ಸಿತಾರ್ ಫ್ಯೂಷನ್ ಸಂಗೀತ ಕಾರ್ಯಕ್ರಮ, 6.30ಕ್ಕೆ ಎಡ್ಡಿ ಸಿಕೇರ್, ಮುಹಮ್ಮದ್ ಮುಆದ್ ಜಿ.ಎಂ. ಅವರಿಂದ ಎಚ್.ಎಂ.ಪೆರ್ನಾಲ್ ಅವರ ಕವಿತೆಗಳ ವಾಚನ ನಡೆಯಲಿದೆ. 7ಕ್ಕೆ ಶಕುಂತಳಾ ಆರ್. ಕಿಣಿ, ವಿಲ್ಸನ್ ಕಟೀಲ್ ಅವರು ‘ಜಿವಿತಾಚೊ, ಸಾಹಿತ್ಯಾಚೊ ಸಂಭ್ರಮ್’ನಲ್ಲಿ ಎಚ್.ಎಂ.ಪೆರ್ನಾಲ್ ಅವರೊಂದಿಗೆ ಸಂವಾದ ನಡೆಸುವರು ಎಂದು ತಿಳಿಸಿದರು.

7.30ಕ್ಕೆ ‘ಅಭಿನಂದನ್ ಸಂಭ್ರಮ್’ ನಡೆಯಲಿದ್ದು, ಟೈಟಸ್ ನೊರೊನ್ಹಾ ಪ್ರಾಸ್ತಾವಿಕವಾಗಿ ಮಾತನಾಡುವರು. ಬಳಿಕ ಸನ್ಮಾನ ನಡೆಯಲಿದೆ. ಮುಖ್ಯ ಅತಿಥಿ ಯಾಗಿ ಸಾಹಿತಿ ಜಯಂತ್ ಕಾಯ್ಕಿಣಿ ಭಾಗವಹಿಸುವರು. ಅಭಿನಂದನಾ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ ಅಧ್ಯಕ್ಷತೆ ವಹಿಸುವರು ಎಂದರು.

ಸಮಿತಿ ಸದಸ್ಯರಾದ ಎಡ್ಡಿ ಸಿಕ್ವೇರಾ, ಟೈಟಸ್ ನೊರೊನ್ಹಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-29-132070968

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.