ಮೈಸೂರು: ಅಲ್ಲಿ ಪುಸ್ತಕಗಳು ತಮ್ಮನ್ನು ರೂಪಿಸಿದ ಕುರಿತ ನೆನಪುಗಳ ಯಾನವಿತ್ತು. ಯಾವ ಪುಸ್ತಕದಿಂದ ಏನು ಕಲಿತೆವೆಂಬ ಕುರಿತು ಕೃತಜ್ಞತೆಯ ಭಾವವಿತ್ತು. ಪುಸ್ತಕಗಳ ಓದಿನಿಂದ ಆಗುವ ಪ್ರಯೋಜನಗಳ ಕುರಿತ ವಿಶ್ಲೇಷಣೆ ಇತ್ತು. ಹೊಸ ಪುಸ್ತಕ ಬಿಡುಗಡೆಯ ಸಂಭ್ರಮವೂ ಇತ್ತು. ಲೇಖಕರಿಗೆ ಸನ್ಮಾನವಿತ್ತು. ಸಭಿಕರೆಲ್ಲರಿಗೂ ಪುಸ್ತಕಗಳ ಕೊಡುಗೆ ಇತ್ತು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ‘ಪತ್ರಕರ್ತರು ಮತ್ತು ಪುಸ್ತಕ ಸಾಂಗತ್ಯ’ ಕುರಿತು ನಡೆದ ಸಂವಾದ ಕಾರ್ಯಕ್ರಮವು ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ವಿಶ್ವ ಪುಸ್ತಕ ದಿನದ ಅಂಗವಾಗಿ ‘ಚಿಂತನ ಚಿತ್ತಾರ’ ಪ್ರಕಾಶನ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಯು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ರಾಜಪ್ಪ ದಳವಾಯಿ ಮತ್ತು ಪತ್ರಕರ್ತೆ ರಶ್ಮಿ ಕೋಟಿ ಅವರು, ಪುಸ್ತಕಗಳ ಲೋಕದಲ್ಲಿ ತಮ್ಮ ಬದುಕು ಅರಳಿದ ಬಗೆಯನ್ನು ಮೆಲುಕು ಹಾಕಿದರು.

‘ತಂದೆ, ಪತ್ರಕರ್ತ ರಾಜಶೇಖರ ಕೋಟಿಯವರು ಮನೆಗೆ ತರಿಸುತ್ತಿದ್ದ ಅಮರಚಿತ್ರ ಕಥೆಯಂಥ ಪುಸ್ತಕಗಳು ಬಾಲ್ಯದ ಬೆರಗನ್ನು ಹೆಚ್ಚಿಸಿದರೆ, ನಂತರ, ಕುವೆಂಪು–ತೇಜಸ್ವಿ, ಥಾಮಸ್ ಹಾರ್ಡಿಯಂಥ ಲೇಖಕರ ಕೃತಿಗಳು ಲೋಕಾನುಭವವನ್ನು ವಿಸ್ತರಿಸಿದವು’ ಎಂದು ಸ್ಮರಿಸಿದರು. ‘ಮನೆಯಲ್ಲಿದ್ದ ಬೃಹದ್ ಗ್ರಂಥಾಲಯ ವ್ಯಕ್ತಿತ್ವವನ್ನು ರೂಪಿಸಿತು’ ಎಂದರು.

ಪ್ರೊ.ಡಿ.ಎ.ಶಂಕರ್ ಅನುವಾದಿಸಿರುವ ‘ಭಗವಾನ್ ಬುದ್ಧ; ನೀತಿ ಸಂಹಿತೆ’ ಕೃತಿಯನ್ನು ಬಿಡುಗಡೆ ಮಾಡಿದ ಅವರು, ಕವಿ ರಂಗನಾಥ ಕಂಟನಕುಂಟೆ ಅವರ ‘ಪ್ರೇಮ ಬಿಕ್ಕು ಮತ್ತು ಬಾಪು ಬಟ್ಟೆ’ ಕವನ ಸಂಕಲನದ ಪ್ರಾತಿನಿಧಿಕ ಪದ್ಯ ‘ಪ್ರೇಮ ಬಿಕ್ಕು’ ಓದಿ ವಿಶ್ಲೇಷಿಸಿದರು.

ಹೆಚ್ಚು ಓದಿ: ‘ಪತ್ರಕರ್ತರು ಹೆಚ್ಚು ಓದಿದರೆ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ. ಲೇಖಕರು ಕೂಡ ಹೆಚ್ಚು ಓದಬೇಕು. ನನಗೆ ಪುಸ್ತಕ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಬದುಕನ್ನು ರೂಪಿಸಿದ್ದೇ ಪುಸ್ತಕಗಳು’ ಎಂದು ಪ್ರೊ.ರಾಜಪ್ಪ ದಳವಾಯಿ ಹೇಳಿದರು.

‘ವ್ಯಕ್ತಿಗಳು ಒಂದೆಡೆ ಸೇರಿದರೆ ಇತರರ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಪುಸ್ತಕಗಳು ಆತ್ಮವಿಮರ್ಶೆಗೆ ದಾರಿ ಮಾಡುತ್ತವೆ. ಮೈಸೂರು ವಿವಿ ಗ್ರಂಥಾಲಯವನ್ನು ನೋಡಿಯೇ ನಾನೂ ಇಲ್ಲಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದೆ’ ಎಂದು ಸ್ಮರಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ‘ಸಿದ್ದಲಿಂಗಯ್ಯ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಲೇಖಕ ಗಂಗಾರಾಂ ಚಾಂಡಾಳ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಸಂವಾದವನ್ನು ನಿರ್ವಹಿಸಿದರು. ಪ್ರಕಾಶನದ ನಿಂಗರಾಜು ಚಿತ್ತಣ್ಣನವರ್ ಮತ್ತು ಕಥೆಗಾರ ನಂದನ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-39-407452605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.