ಮೈಸೂರು: ‘ಮಾತಿಲ್ಲ ಗುರುತು ಇದೆ ಕವನಸಂಕಲನವು ಬದುಕಿನಲ್ಲಿ ಕಂಡದನ್ನು ಪದಗಳ ಮೂಲಕ ಹಿಡಿದಿಟ್ಟ ಕೃತಿ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ಇಲ್ಲಿನ ರಂಗಾಯಣದ ವನರಂಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಓದುಗರ ಒಕ್ಕೂಟ, ಸಂಸ್ಕೃತಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಬುಧವಾರ ಎಂ.ಬಿ.ಪ್ರವೀಣ್ ಅವರ ‘ಮಾತಿಲ್ಲ ಗುರುತು ಇದೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಕಡಿಮೆ ಪದಗಳಲ್ಲಿಯೇ ಹೇಳಬಯಸುವ ವಿಷಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಅರ್ಥೈಸಿಕೊಳ್ಳುವವವರು ಕವಿಯ ಭಾವದೊಳಗೆ ಬೆರೆತುಹೊಗಬೇಕು. ಇಲ್ಲಿನ ಕವಿತೆಗಳು ಅಮೂರ್ತ ಚಿತ್ರಕಲೆಯಂತಿದೆ, ಅಸ್ಪಷ್ಟ ಚಿತ್ರಗಳ ಸರಣಿಯನ್ನೇ ಕಾಣಿಸುತ್ತವೆ’ ಎಂದರು.

‘ಕಾವ್ಯದಲ್ಲಿ ಸ್ಪಷ್ಟತೆ ಎನ್ನುವುದೂ ಒಂದು ಭ್ರಮೆಯೆ? ಅಥವಾ ಅಮೂರ್ತತೆಯಲ್ಲೇ ಸ್ಪಷ್ಟತೆಯ ತುಣುಕುಗಳಿವೆಯೆ? ಅಥವಾ ಎಲ್ಲರ ಅನುಭವಗಳೂ ಬಹುತೇಕ ಬಾರಿ ಅಮೂರ್ತವಾಗಿಯೇ ಇರುತ್ತವೆಯೆ? ಹೀಗೆ ಹತ್ತು ಹಲವು ಚಿಂತನೆಗೆ ಹಚ್ಚಬಲ್ಲ ಕಾವ್ಯಕೃತಿ ಇದು’ ಎಂದರು.

ಕೆಎಸ್ಒಯು ಸಹ ಪ್ರಾಧ್ಯಾಪಕ ಪಿ.ಮಣಿ, ‘ಮನುಷ್ಯನ ಒಳ ಮನಸ್ಸಿನ ಮೌನವನ್ನು ಸೂಕ್ಷ್ಮವಾಗಿ ಚಿತ್ರಿಸುವ, ಸಮಾಜದ ವಸ್ತುಸ್ಥಿತಿಗಳನ್ನು ತೋರುವ ಸಂಕಲನ ಇದು’ ಎಂದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ರಾಮೇಗೌಡ(ರಾಗೌ), ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-39-269170443

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.