ನಾಯಕನಹಟ್ಟಿ: ‘ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮಿನುಗಿದವರು ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್. ಕಾದಂಬರಿ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ’ ಎಂದು ಪಿಡಿಒ ಡಿ.ಕೆ.ರಜನಿಕಾಂತ್ ಹೇಳಿದರು.

ತಳುಕು ಗ್ರಾಮದ ಟಿ.ಎಸ್.ವೆಂಕಣ್ಣಯ್ಯ ಸ್ಮಾರಕ ಗ್ರಂಥಾಲಯದಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಮಂಗಳವಾರ ನಡೆದ ತರಾಸು ಅವರ 106ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದರು.

‘ಕಾದಂಬರಿ ಲೋಕದಲ್ಲಿ ಅನಭಿಷಕ್ತ ದೊರೆಯಾಗಿದ್ದ ಅ.ನ.ಕೃಷ್ಣರಾಯರ ನಂತರ ಅವರ ಶಿಷ್ಯ ತ.ರಾ.ಸುಬ್ಬರಾವ್ ಆ ಸ್ಥಾನ ತುಂಬುತ್ತ ಬಂದರು. ಅವರ ಐತಿಹಾಸಿಕ ಕಾದಂಬರಿಗಳು ಚಿತ್ರದುರ್ಗವನ್ನು ಜಗತ್ತಿಗೆ ಪರಿಚಯಿಸಿದವು. ‘ನಾಗರಹಾವು’, ‘ದುರ್ಗಾಸ್ತಮಾನ’ ಚಿತ್ರದುರ್ಗದ ಹಿರಿಮೆ ಗರಿಮೆಯನ್ನು ಎತ್ತಿತೋರಿಸಿದ ಮಹತ್ವದ ಕೃತಿಗಳು. ‘ಬೆಂಕಿಯ ಬಲೆ’, ‘ಗಾಳಿಮಾತು’, ‘ಚಂದನದಗೊಂಬೆ’, ‘ಚಂದವಳ್ಳಿಯ ತೋಟ’, ‘ಹಂಸಗೀತೆ’, ‘ಮಸಣದ ಹೂ’ ಇವರ ಕಾದಂಬರಿಯಾಧಾರಿತ ಚಲನಚಿತ್ರಗಳಾಗಿ ಯಶಸ್ಸು ಗಳಿಸಿವೆ’ ಎಂದು ಹೇಳಿದರು.

‘1956ರಲ್ಲಿ ಇವರ ಹಂಸಗೀತೆ ಕಾದಂಬರಿ ಆಧರಿಸಿ ಹಿಂದಿಯಲ್ಲಿ ‘ಬಸಂತ್ಬಹಾರ್’ ಚಲನಚಿತ್ರ ಬಿಡುಗಡೆಯಾಯಿತು. ಹೀಗೆ ಅವರ ಬರವಣಿಗೆ ಸತ್ವಯುತವಾಗಿತ್ತು’ ಎಂದರು.

‘ತ.ರಾ.ಸು ಅವರ ಜನ್ಮದಿನವನ್ನು ಜಿಲ್ಲಾ ಕೇಂದ್ರದಲ್ಲಿ ಆಚರಣೆ ಮಾಡುವುದಕ್ಕಿಂತ ಅವರ ಸ್ವಗ್ರಾಮ ತಳುಕಿನಲ್ಲಿ ಆಚರಿಸುವುದು ಹೆಚ್ಚು ಮಹತ್ವಪೂರ್ಣ. ಈ ಕಾರಣಕ್ಕೆ ಇಲ್ಲಿ ಸರಳವಾಗಿ ಆಚರಣೆ ಮಾಡಲಾಗಿದೆ’ ಎಂದು ಮುಖಂಡ ಟಿ.ಕೃಷ್ಣಮೂರ್ತಿ ಹೇಳಿದರು.

ಗ್ರಾಮಸ್ಥರಾದ ನಾಗರಾಜ್, ಶಾಂತಕುಮಾರ್, ವೀರೇಶ ವಾಲ್ಮೀಕಿ, ಗುರುಪ್ರಕಾಶ್, ಆನಂದ, ಯಶೋದಮ್ಮ, ಸಿ.ಪಿ.ವೀರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-44-154848670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.