ಹೊಸ ತಲೆಮಾರಿನ ಪ್ರೀತಿ, ಆಕರ್ಷಣೆ, ಪ್ರಣಯ, ಸಂಬಂಧ, ಕನಸು, ತಲ್ಲಣ, ಸೆಳೆತ, ಹಪಾಹಪಿ, ಜೀವಶೈಲಿ, ಚೇಷ್ಟೆ, ಭಂಡತನವನ್ನು ಚಿತ್ರಿಸುವ ಪುಸ್ತಕವಿದು. ಜೆನ್-ಝೀ ಹಾಗೂ ಮಿಲೆನಿಯಲ್ ವಯಸ್ಸಿನವರ ತೊಳಲಾಟಕ್ಕೆ ಹಿಡಿಯ ಕನ್ನಡಿಯೂ ಹೌದು. ಇಲ್ಲಿರುವ ಹನ್ನೊಂದು ಕಥೆಗಳೂ ಇದೇ ವಯಸ್ಸಿನವರಿಗೆ ಸಂಬಂಧಿಸಿದ್ದೇ ಆಗಿವೆ. ಈಗಿನ ಯುವಕರ ಯೋಚನಾ ಲಹರಿ, ಪ್ರೀತಿ ಬಗ್ಗೆ ಅವರಿಗೆ ಇರುವ ಕಲ್ಪನೆಗಳು, ಯಾವುದಕ್ಕೂ ತಯಾರು ಎನ್ನುವ ಅವರ ಧೈರ್ಯವನ್ನು ಇಲ್ಲಿನ ಕಥೆಗಳು ಹೇಳುತ್ತವೆ.

ಇಲ್ಲಿನ ಕಥೆಗಳಲ್ಲಿ ಇರುವ ಘಟನೆಗಳು ನಮ್ಮ ಜೀವನದಲ್ಲಿಯೂ ನಡೆದಿದೆ ಎಂದು ಮೆಲುಕು ಹಾಕಿಕೊಳ್ಳುವಷ್ಟು ಆಪ್ತವಾದವು. ವಯಸ್ಸಿನ ಹುಡುಗರ ಹುಡುಗಾಟಿಕೆಗಳನ್ನು, ಅವರು ಎದುರಿಸುವ ಶೋಷಣೆಯನ್ನು ಕೂಡ ಲೇಖಕರು ಸೂಚ್ಯವಾಗಿ ದಾಖಲಿಸಿದ್ದಾರೆ. ಹದಿಹರೆಯದ ಬಯಕೆಗಳನ್ನು ತಣಿಸಲು ಈಗಿನ ಯುವಕರು ಕಂಡುಕೊಳ್ಳುವ ದಾರಿ, ಅದಕ್ಕಾಗಿ ಅವರು ತೆಗೆದುಕೊಳ್ಳುವ ಅಪಾಯಕಾರಿ ಹೆಜ್ಜೆಗಳ ಚಿತ್ರಣವಿದೆ. ಹೊಸ ತಲೆಮಾರು ಹೇಗೆ ಭಿನ್ನವಾಗಿ ಯೋಚಸುತ್ತದೆ, ಸಾಮಾಜಿಕ ಜಾಲತಾಣಗಳು ಅವರನ್ನು ಪ್ರಭಾವಿಸಿದ ಬಗೆಯೂ ಇಲ್ಲಿನ ಕಥೆಗಳಲ್ಲಿವೆ. ಕಟ್ಟಳೆಗಳನ್ನು ಮೀರಿ ಹೊಸತನವನ್ನು ಅರಸುವ, ಅದಕ್ಕೆ ಹಪಹಪಿಸುವ ಯುವಕರ ಮನದ ಆಕಾಂಕ್ಷೆಗಳ ಬಗ್ಗೆಯೂ ಪುಸ್ತಕ ಬೆಳಕು ಚೆಲ್ಲುತ್ತದೆ. ತಲೆಮಾರುಗಳ ನಡುವಿನ ವ್ಯತ್ಯಾಸವೂ ಓದುಗರಿಗೆ ಗೋಚರಿಸುತ್ತದೆ. ಶತಮಾನಗಳು ಇರುಳಿದರೂ, ಜನರ ಮೆದುಳನ್ನು ಆಳುತ್ತಿರುವ ‘ವ್ಯಸನ’ಗಳೂ ಇಲ್ಲಿ ಪ್ರಸ್ತಾಪವಾಗುತ್ತವೆ. ‘ಸುಬಗತನ’ದ ತೋರ್ಪಡಿಕೆ ಬಿಟ್ಟು ಎಲ್ಲರಲ್ಲಿಯೂ ಇರುವ ಮಾನವ ಸಹಜ ಬಯಕೆಯನ್ನು ಅಷ್ಟೇ ಸಹಜವಾಗಿ ಕಥೆಗಾರ ವರ್ಣಿಸಿದ್ದಾರೆ. ಎಲ್ಲವೂ ಕೊನೆಯದಾಗಿ ಪ್ರೀತಿ ಎನ್ನುವ ಬಳ್ಳಿಗೇ ಸೇರಿದ್ದು ಎನ್ನುವುದನ್ನು ಪುಸ್ತಕ ಸಾರುತ್ತದೆ.

ಭಿನ್ನ ಪ್ರಸ್ತುತಿ ಈ ಪುಸ್ತಕದ ವಿಶೇಷ. ಮುನ್ನುಡಿಯಾಗಿ ಕಥೆಯೇ ಇದೆ. ಪುಸ್ತಕದ ನಿರೂಪಣೆ ವಿಷಯಕ್ಕೆ ತಕ್ಕಂತೆ ಇದೆ. ಈಗಿನ ಓದುಗರಿಗೆ ಪುಸ್ತಕ ಇಷ್ಟವಾಗಬಹುದು. ಹೊಸ ಬಗೆಯ ನಿರೂಪಣೆ, ಭಾಷೆ ಎಲ್ಲರಿಗೂ ಪಥ್ಯವಾಗಬೇಕೆಂದಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-51-879820549

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.