ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಬಾನುಲಿಯ ಗಮನಾರ್ಹ ಧ್ವನಿ

ಬಾನುಲಿ ಧ್ವನಿ, ಲೇ: ಶಾಂತಾದೇವಿ ಕಣವಿ
Published 28 ಮೇ 2023, 0:18 IST
Last Updated 28 ಮೇ 2023, 0:18 IST
ಅಕ್ಷರ ಗಾತ್ರ

ಶಾಂತಾದೇವಿ ಕಣವಿ ಅವರ ಹೆಸರು ಆಕಾಶವಾಣಿ ಶ್ರೋತೃಗಳಿಗೆ ಚಿರಪರಿಚಿತ. 1960ರ ದಶಕದಿಂದಲೇ ಅವರು ಬಾನುಲಿ ನಾಟಕಗಳ, ಭಾಷಣಗಳ, ಸಣ್ಣಕಥೆಗಳ ಮೂಲಕ ಛಾಪು ಮೂಡಿಸಿದವರು. ಮನಸ್ಸು ಕದಡುವಂಥ ಮೌಢ್ಯ, ಕೌಟುಂಬಿಕ ದೌರ್ಜನ್ಯಗಳನ್ನು ಖಂಡಿಸಿದ ಧ್ವನಿಯ ಅವರ ನಾಟಕಗಳು ಆ ಕಾಲಘಟ್ಟಕ್ಕೆ ತಕ್ಕಂತೆ ಅರ್ಥಪೂರ್ಣ ಧ್ವನಿ ಹೊಮ್ಮಿಸಿದ್ದವು. ಮೈಸೂರಿನ ‘ಸಂವಾದ’ ಅವರ ಬಾನುಲಿ ಸೃಜನಶೀಲ ಕೆಲಸಗಳೆಲ್ಲವನ್ನೂ ಅಡಕಮಾಡಿ, ‘ಬಾನುಲಿ ಧ್ವನಿ’ ಎಂಬ ಪುಸ್ತಕವಾಗಿ ಪ್ರಕಟಿಸಿದೆ.

ಬಾನುಲಿ ನಾಟಕಗಳು, ಬಾನುಲಿ ಭಾಷಣಗಳು, ಇತರ ಲೇಖನಗಳು, ಅನುವಾದಿತ ಕಥೆಗಳು ಎಂದು ನಾಲ್ಕು ವಿಭಾಗಗಳಾಗಿ ಕೃತಿಯನ್ನು ವಿಂಗಡಿಸಲಾಗಿದೆ. ಲಘು ಧಾಟಿಯ ನಾಟಕಗಳಿಂದ ಹಿಡಿದು ಬೋಧನಾಪ್ರಧಾನವಾದ ನಾಟಕಗಳವರೆಗೆ ನಾಟಕಗಳ ಶೈಲಿಯನ್ನು ಗುರುತಿಸಬಹುದು. 1960ರ ದಶಕದಿಂದ ಶುರುವಾಗುವ ಈ ನಾಟಕಗಳ ಶಿಲ್ಪವು ಈಗಿನ ರಂಗಭೂಮಿ ಆಸಕ್ತರೂ ಗಮನಿಸಬಹುದಾಗಿದೆ.

ಬಸವಣ್ಣ, ಗಾಂಧಿ, ಆ್ಯನಿಬೆಸೆಂಟ್‌ ಅವರಂತಹ ಮಹನೀಯರ ಕುರಿತ ಬಾನುಲಿ ಭಾಷಣಗಳು ಕೃತಿಯಲ್ಲಿವೆ. ವಿದ್ಯಾರ್ಥಿಗಳು ಈ ಭಾಗವನ್ನು ಗಮನಿಸಿದರೆ, ಚುಟುಕಾಗಿ ವ್ಯಕ್ತಿಚಿತ್ರ ಕಟ್ಟಿಕೊಡುವುದು ಹೇಗೆ ಎಂದು ಅರಿವಾದೀತು. ಕೃತಿಯಲ್ಲಿ ಶಾಂತಾದೇವಿ ಅವರ ಸಂದರ್ಶನಗಳು ಹಾಗೂ ಅವರಿಗೆ ಸಂದಿರುವ ಪ್ರಶಸ್ತಿಗಳ ಮಾಹಿತಿಯೂ ಇದೆ. ಅವರ ವ್ಯಕ್ತಿತ್ವ ಎಂಥದೆನ್ನುವುದಕ್ಕೆ ಅವೇ ಸಾಕ್ಷ್ಯಗಳು. ಕೊನೆಯ ಭಾಗದಲ್ಲಿರುವ ಅನುವಾದಿತ ಕಥೆಗಳು ಅವರ ಬಹುಭಾಷಾ ಆಸಕ್ತಿಗೆ ಹಿಡಿದ ಕನ್ನಡಿ. ಸುತ್ತಲ ಸಮಾಜವನ್ನು ಬಾನುಲಿ ಮಾಧ್ಯಮದ ಮೂಲಕ ಹೆಣ್ಣುಕಣ್ಣಿನ ನೋಟ ಕಾಣಿಸಿದ್ದು ಹೇಗೆನ್ನುವುದಕ್ಕೂ ಕೃತಿ ಉದಾಹರಣೆಯಂತಿದೆ.

- ಕೃ: ಬಾನುಲಿ ಧ್ವನಿ ಲೇ: ಶಾಂತಾದೇವಿ ಕಣವಿ ದ: ₹450 ಪು: 464 ಪ್ರ: ಸಂವಾದ ನಂ: 9902639593

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT