ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಮಹಿಳಾ ಅಧ್ಯಯನದ ನೆನಪಿನ ಸುರುಳಿ

Published 21 ಮೇ 2023, 0:10 IST
Last Updated 21 ಮೇ 2023, 0:10 IST
ಅಕ್ಷರ ಗಾತ್ರ

ಸ್ವಾತಂತ್ರ್ಯಪೂರ್ವ ಮತ್ತು ನಂತರದ ಕಾಲಘಟ್ಟಗಳಲ್ಲಿ ದೇಶದ ಮಹಿಳಾ ಚಳವಳಿಯ ಸ್ಥಿತ್ಯಂತರಗಳಿಗೆ ನೇರವಾಗಿ ಸಾಕ್ಷಿಯಾದವರಲ್ಲಿ ವೀಣಾ ಮಜುಂದಾರ್ ಪ್ರಮುಖರು. ಸ್ವಾತಂತ್ರ್ಯ ಚಳವಳಿಯಲ್ಲಿ ಗಳಿಸಿದ ಹಕ್ಕುಗಳನ್ನು ಗಟ್ಟಿಗೊಳಿಸಲು ನಡೆದ ಭಾರತದ ಮಹಿಳಾ ಚಳವಳಿಯ ಭಾಗವಾಗಿ ಇದ್ದುಕೊಂಡೇ ಮಹಿಳಾ ಅಧ್ಯಯನದ ಮೂಲಸೆಲೆಯಾಗಿ ಗುರುತಿಸಿಕೊಂಡವರು ಅವರು. ಪಶ್ಚಿಮ ಬಂಗಾಳದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ರಾಜ್ಯಶಾಸ್ತ್ರದ ಅಧ್ಯಾಪಕಿಯಾಗಿ ವೃತ್ತಿಜೀವನ ಆರಂಭಿಸಿ, ಯುಜಿಸಿ ಆಡಳಿತ ಮಂಡಳಿಯಲ್ಲಿ ಉನ್ನತ ಶಿಕ್ಷಣದ ಯೋಜನೆಗಳಿಗೆ ಸಾಂಸ್ಥಿಕ ನೀತಿ ನಿಯಮ ರೂಪಿಸುವ ಅಧಿಕಾರಶಾಹಿಯ ಭಾಗವಾಗುವವರೆಗಿನ ಅವರ ಬದುಕೇ ಮಹಿಳಾ ಅಧ್ಯಯನಾಸಕ್ತರಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ.

'ಭಾರತದ ಮಹಿಳಾ ಚಳವಳಿಯ ದಾಖಲಾತಿದಾರಳು ನಾನು' ಎಂದು ತಮ್ಮನ್ನು ಕರೆದುಕೊಳ್ಳುವ ವೀಣಾ, ತಮ್ಮ ಬದುಕಿನ ಪುಟಗಳನ್ನು ದಾಖಲಿಸಲು ಮನಸ್ಸು ಮಾಡಿದ್ದು ಮಾತ್ರ ಬದುಕಿನ ಇಳಿಸಂಜೆಯಲ್ಲಿ. ಒಂದು ದಶಕದ ಹಿಂದೆ, 86ನೇ ವಯಸ್ಸಿನಲ್ಲಿ ನಿಧನರಾದ ಅವರು, ಅದಕ್ಕಿಂತ ಕೇವಲ 3 ವರ್ಷಗಳ ಹಿಂದಷ್ಟೇ ಹೊರತಂದ ಆತ್ಮಕಥನ 'ಮೆಮೊರೀಸ್ ಆಫ್ ಎ ರೋಲಿಂಗ್ ಸ್ಟೋನ್'. ಅದನ್ನೀಗ 'ಉರುಳುವ ಕಲ್ಲಿನ ನೆನಪಿನ ಸುರುಳಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ ಸಾಹಿತಿ ಡಾ. ಎನ್. ಗಾಯತ್ರಿ.

ದಶಕಗಳ ಹೋರಾಟದ ಬಳಿಕವೂ ಸಮಾನತೆ ಎಂಬುದು ಮರೀಚಿಕೆಯೇ ಆಗಿರುವ ಈ ಹೊತ್ತಿನಲ್ಲಿ, ಅಂತಹದ್ದೊಂದು ಹೋರಾಟಕ್ಕೆ ಪುನರ್ ಚಾಲನೆ ನೀಡುವ ದಿಸೆಯಲ್ಲಿ ಈ ಪುಸ್ತಕದ ಓದು ಅರ್ಥಪೂರ್ಣ ಎನಿಸುತ್ತದೆ. ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಇರುವ ದಾಖಲೆಗಳ ಕೊರತೆಯನ್ನು ನೀಗಿಸುವ ದೃಷ್ಟಿಯಿಂದಲೂ ಈ ಪುಸ್ತಕ ಸಕಾಲಿಕವಾಗಿದೆ.

ಕೃತಿ: ಉರುಳುವ ಕಲ್ಲಿನ ನೆನಪಿನ ಸುರುಳಿ

ಲೇ: ವೀಣಾ ಮಜುಂದಾರ್

ಅನುವಾದ: ಡಾ.ಎನ್. ಗಾಯತ್ರಿ

ಪು: 268

ದ: ₹320

ಪ್ರ: ಕ್ರಿಯಾ ಮಾಧ್ಯಮ ಪ್ರೈವೇಟ್ ಲಿಮಿಟೆಡ್

ಸಂ: 9036082005

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT