ಪರ್ಸೆಪೊಲಿಸ್
ಲೇ: ಮಾರ್ಜಾನ್ ಸತ್ರಪಿ
ಕನ್ನಡಕ್ಕೆ: ಪ್ರೀತಿ ನಾಗರಾಜ
ಪ್ರ: ಛಂದ ಪುಸ್ತಕ
ಸಂ: 9844422782

ಇತರೆ ಕಾದಂಬರಿಗಳಂತಲ್ಲ ಈ ಕೃತಿ. ಕಥೆಯನ್ನು ಕೇವಲ ಓದುತ್ತಾ ಹೋಗುವುದಲ್ಲ, ಕಣ್ಮುಂದೆ ಸರದಿ ಸಾಲಿನಲ್ಲಿ ತೆರೆದುಕೊಳ್ಳುತ್ತಾ ಸಾಗುವ ಚಿತ್ರಗಳ ಮೂಲಕ ನೋಡುತ್ತಾ, ಎರಡರ ಎರಕವನ್ನು ಮನದಂಗಳಕ್ಕೆ ಇಳಿಸುತ್ತಾ ಸಾಗಬೇಕು. ಇದೊಂದು ರೀತಿಯ ಪ್ರಯೋಗಾತ್ಮಕ ಕಾದಂಬರಿ. ಇರಾನ್ ಲೇಖಕಿ ಮಾರ್ಜಾನ್ ಸತ್ರಪಿ ಅವರ ‘ದ ಪರ್ಸೆಪೊಲಿಸ್’ ಎಂಬ ಫ್ರೆಂಚ್ ಗ್ರಾಫಿಕ್ ಕಾದಂಬರಿಯು ‘ಕಾಮಿಕ್ಸ್’ ಮಾದರಿಯಲ್ಲಿದೆ. ಆದರೆ ಮಾನವ ಚರಿತ್ರೆಯನ್ನು ಕಾಡಿದ ಗಂಭೀರ ವಿಚಾರವನ್ನು ಅದು ಹೊತ್ತುತಂದಿದೆ.

ಮೂಲ ಕಾದಂಬರಿಯ ಮೊದಲ ಭಾಗ 2000ನೇ ಇಸವಿಯಲ್ಲಿ ಹಾಗೂ ಎರಡನೇ ಭಾಗ 2004ರಲ್ಲಿ ಪ್ರಕಟವಾಗಿದೆ. ಅಂದಿನ ಕಾಲಕ್ಕೆ ಕಾದಂಬರಿ ಪ್ರಕಾರದಲ್ಲಿ ಇದು ವಿನೂತನ ಪ್ರಯೋಗವಾಗಿತ್ತು. ಹಲವು ಮರುಮುದ್ರಣ ಕಂಡಿರುವ ಈ ಕಾದಂಬರಿ ಅನಿಮೇಷನ್ ಸಿನಿಮಾವಾಗಿಯೂ ಪ್ರಶಸ್ತಿಗಳನ್ನು ಪಡೆದಿದೆ. 2007ರಲ್ಲಿ ಆಸ್ಕರ್ ನಾಮನಿರ್ದೇಶನ ಪಟ್ಟಿಯಲ್ಲೂ ಈ ಸಿನಿಮಾವಿತ್ತು. ಇಂತಹ ಪ್ರಯೋಗಾತ್ಮಕ ಕಾದಂಬರಿಯನ್ನು ಪ್ರೀತಿ ನಾಗರಾಜ ಇದೀಗ ಕನ್ನಡಕ್ಕೆ ತಂದಿದ್ದಾರೆ.

ಇರಾನ್ನ ಟೆಹರಾನ್ ನಗರದ ಮಾರ್ಜಾನ್, ಮಧ್ಯಮವರ್ಗಕ್ಕೆ ಸೇರಿದ ಕುಟುಂಬದವರು. ಅವರು ಓದಿದ್ದು ಫ್ರೆಂಚ್ ಭಾಷೆಯ ಶಾಲೆಯಲ್ಲಿ. ಮುಂದೆ ಸ್ವದೇಶದಲ್ಲಿ ಕ್ರಾಂತಿಯ ಬಿಸಿ ಏರಿದಾಗ, 14 ವರ್ಷಗಳ ಮಾರ್ಜಾನ್ ಅವರನ್ನು ಅವರ ತಂದೆ–ತಾಯಿಗಳು ಆಸ್ಟ್ರಿಯಾ ದೇಶಕ್ಕೆ ಏಕಾಂಗಿಯನ್ನಾಗಿ ಕಳುಹಿಸಿಕೊಟ್ಟರು. ಆದರೆ, ಅಲ್ಲಿ ಹೆಚ್ಚು ಕಾಲ ಉಳಿಯಲಾಗದೆ ಮತ್ತೆ ತವರಿಗೆ ಬಂದ ಮಾರ್ಜಾನ್, ಅಲ್ಲಿ ಉಳಿಯಲು ಪ್ರಯತ್ನಪಟ್ಟರೂ ಸಾಧ್ಯವಾಗದೆ ಕೊನೆಗೆ ಫ್ರಾನ್ಸ್ಗೆ ತೆರಳುವರು. ಅವರ ಹೋರಾಟದ ಬದುಕಿನ ಕಥನ ಯಾವ ರೋಚಕ ಕಾದಂಬರಿಗೂ ಕಡಿಮೆ ಇಲ್ಲ.

ಮಾರ್ಜಾನ್ ಅವರು ಹತ್ತು ವರ್ಷದ ಬಾಲಕಿಯಾಗಿದ್ದ ದಿನಗಳಿಂದ ಕಥೆ ಆರಂಭವಾಗುತ್ತದೆ. ಇರಾನ್ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿ, ತದನಂತರದಲ್ಲಿ ದೇಶವು ಮುಸ್ಲಿಂ ಮೂಲಭೂತವಾದಿಗಳ ಆಳ್ವಿಕೆಗೆ ಒಳಪಟ್ಟಿದ್ದು, ಹಿಜಾಬ್ ಪರ–ವಿರುದ್ಧದ ಹೋರಾಟ, ಅಧಿಕಾರ ವರ್ಗಾವಣೆ, ಆಗ ದೇಶದಲ್ಲಿ ನಡೆದ ವಿಚಿತ್ರ ವೈರುಧ್ಯ... ಹೀಗೆ ಹಲವು ದಶಕಗಳಲ್ಲಿ ನಡೆದ ಘಟನೆಗಳ ಸಮಗ್ರ ಚಿತ್ರಣವನ್ನು ಈ ಕೃತಿ ಕಾಮಿಕ್ಸ್ ರೂಪದಲ್ಲಿ ಕಟ್ಟಿಕೊಟ್ಟಿದೆ. ಈ ಕೃತಿಯನ್ನು ಬರೆಯುವುದಕ್ಕೆ ಕಾರಣವನ್ನು ಮಾರ್ಜಾನ್ ಅವರು ಹೀಗೆ ನೀಡುತ್ತಾರೆ; ‘ಇರಾನ್ನ ಶ್ರೇಷ್ಠ ನಾಗರಿಕತೆಯ ಬಗ್ಗೆ ಮೂಲಭೂತವಾದ, ಮತಾಂಧತೆ ಮತ್ತು ಭಯೋತ್ಪಾದನೆಯ ಚೌಕಟ್ಟಿನಲ್ಲೇ ಸಾಕಷ್ಟು ಚರ್ಚಿಸಲಾಗಿದೆ. ಇಲ್ಲಿಯೇ ಅರ್ಧ ಜೀವನ ಕಳೆದಿರುವ ನನಗೆ ಈ ಮಾತು ಸತ್ಯಕ್ಕೆ ದೂರವಾದುದು ಎಂದು ತಿಳಿದಿದೆ. ಅದಕ್ಕಾಗಿಯೇ ‘ಪರ್ಸೆಪೊಲಿಸ್’ ಬರೆಯುವುದು ನನಗೆ ಮುಖ್ಯವಾದ ವಿಷಯವಾಗಿತ್ತು’.

ಕನ್ನಡದ ಮಟ್ಟಿಗೂ ಇದೊಂದು ವಿನೂತನ ಪ್ರಯೋಗ. ಅಂದಹಾಗೆ, ವಿವರಣೆಗಳು ಹಾಗೂ ಚಿತ್ರಗಳು ಒಟ್ಟಾಗಿ ಸಾಗಬೇಕಿದ್ದರಿಂದ ಈ ಪ್ರಯೋಗದಲ್ಲಿ ಹಲವು ಮಿತಿಗಳೂ ಇವೆ. ಕಾದಂಬರಿ ‘ಶಿಲ್ಪ’ವನ್ನು ಅಂದಗಾಣಿಸಬಲ್ಲ ಪುಟಗಟ್ಟಲೆಯ ವಿವರಗಳು ಇಲ್ಲಿ ಕೆಲವೇ ಶಬ್ದಗಳಿಗೆ ಸೀಮಿತ. ಪ್ರತಿಯೊಂದು ಪುಟ್ಟ ವಿವರಣೆಯ ಆರಂಭ ಹಾಗೂ ಅಂತ್ಯದ ಬಿಂದುವಿನ ಆಚೀಚಿನ ಸಂಗತಿಗಳನ್ನು ಅರಿಯಲು ಓದುಗ ತುಸು ಶ್ರಮ ವಹಿಸಲೇಬೇಕು. ಈ ಬೃಹತ್ ಕೃತಿಯನ್ನು ಓದಲು ಸಮಯ ಹಾಗೂ ತಾಳ್ಮೆ ಎರಡೂ ಮುಖ್ಯ. ಚಿತ್ರಗಳೇ ತುಂಬಿರುವ ಪುಟಗಳಲ್ಲಿ ಕ್ರಮಬದ್ಧವಾಗಿ ಓದುವುದೂ ಅಷ್ಟೇ ಮುಖ್ಯ. ಸ್ಥಳದ ಅಭಾವದಿಂದ ಕೆಲವು ಕಡೆಗಳಲ್ಲಿ ಅಕ್ಷರಗಳ ಫಾಂಟ್ ಗಾತ್ರವನ್ನು ತುಂಬಾ ಚಿಕ್ಕದಾಗಿ ಹಾಕಲಾಗಿದ್ದು, ಓದಿನ ವೇಗಕ್ಕೆ ಅಡ್ಡಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.