ಲೇಖಕರ ಬಾಲ್ಯ ಹೇಗಿದ್ದಿರಬಹುದು. ಅವರನ್ನು ಬರೆಯಲು ಪ್ರೇರೇಪಿಸಿದ ಸಂಗತಿಗಳು ಯಾವುದಿರಬಹುದು ಎಂಬ ಕುತೂಹಲ ಸದಾ ಇರುತ್ತದೆ. ಇದಕ್ಕೆ ಪೂರಕವೆಂಬಂತಿದೆ ರಸ್ಕಿನ್ ಬಾಂಡ್ ಅವರ ‘ಬರಹಗಾರನೊಬ್ಬನ ಒಂಟಿ ನಡಿಗೆ’ ಆತ್ಮಚರಿತ್ರೆ. ಇದನ್ನು ಕನ್ನಡಕ್ಕೆ ಎಂ.ಎಸ್.ರಘುನಾಥ್ ತಂದಿದ್ದಾರೆ.

ಬ್ರಿಟಿಷ್ ಆಡಳಿತಗಾರರ ನಡುವೆ ಮೇಲ್ಮಧ್ಯಮ ಕುಟುಂಬದಲ್ಲಿ ಬೆಳೆದ ರಸ್ಕಿನ್ ಒಂಟಿತನದಲ್ಲಿಯೇ ತಮ್ಮನ್ನು ಕಂಡುಕೊಂಡವರು. ಕುಟುಂಬದ ಸದಸ್ಯರಂತಿದ್ದ ಕೆಲಸದವರಿಂದ ಕೇಳಿದ ಬೆರಗಿನ ಕಥೆಗಳು ಅವರ ಬಾಲ್ಯವನ್ನು ಒಪ್ಪಗೊಳಿಸಿವೆ. ಅದು ಅವರ ಸೃಜನಶೀಲ ಲೋಕವನ್ನು ವಿಸ್ತರಿಸಲು ನೆರವಾಗಿವೆ ಎಂಬುದನ್ನು ಅವರು ಹೇಳಲು ಮರೆಯುವುದಿಲ್ಲ. ಒಂದು ಸೃಜನಶೀಲ ಮನಸ್ಸಿಗೆ ಸಾಂಪ್ರದಾಯಿಕ ಶಿಕ್ಷಣದಿಂದ ಅಷ್ಟೇನೂ ಪ್ರೇರಪಣೆ ಸಿಗುವುದಿಲ್ಲ. ಅದಕ್ಕಾಗಿ ಅವರು ಅನುಭವಿಸುವ ಕಷ್ಟಗಳನ್ನು ಸರಳವಾಗಿ ತಿಳಿಸಿದ್ದಾರೆ.

ಪರೀಕ್ಷೆ ಹಾಗೂ ಪರೀಕ್ಷಕರ ಬಗ್ಗೆ ಲೇಖಕರಿಗಿದ್ದ ಅಸಡ್ಡೆಯನ್ನೂ ಇಲ್ಲಿ ಬಿಡಿಸಿ ಹೇಳಲಾಗಿದೆ. ತಾನು ಯಾರು, ತನ್ನ ವಂಶಾವಳಿ ಏನು ಎಂಬುದು ರಸ್ಕಿನ್ ಬಾಂಡ್ ಅವರನ್ನು ತೀವ್ರ ಕಾಡಿ, ಅದಕ್ಕಾಗಿ ಅವರು ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ಓಡಾಟದ ಮೂಲಕ ಹುಡುಕಾಟ ನಡೆಸುತ್ತಾರೆ. ಬದುಕಿನ ಹಲವು ಮಜಲುಗಳಲ್ಲಿ ಅಡಗಿರುವ ಪ್ರೀತಿ, ಪ್ರೇಮ, ಪ್ರಣಯದ ಹುಡುಕಾಟವನ್ನೂ ವಿಸ್ತೃತವಾಗಿ ತಿಳಿಸುತ್ತಾ ಹೋಗುತ್ತಾರೆ ರಸ್ಕಿನ್.

ಕಥೆಗಾರ ಹುಟ್ಟಿಕೊಂಡ ಬಗೆಯ ರಸ್ಕಿನ್ ಅವರ ಬದುಕಿನ ಹಲವು ಪುಟಗಳಲ್ಲಿ ಅಡಗಿದೆ. ಆದರೆ, ಈ ಕಥೆಗಳನ್ನು ಇನ್ನಷ್ಟು ಸಹಜ ಕನ್ನಡದಲ್ಲಿ ತರುವ ಅವಕಾಶ ಅನುವಾದಕರಿಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.