ಸಾಗರ: ‘ಯಾವ ಗೇಣಿ ಹೋರಾಟದ ಫಲವಾಗಿ ಭೂಮಿಯ ಹಕ್ಕು ಪಡೆದಿದ್ದಾ ರೆಯೋ ಆ ಕುಟುಂಬದ ಫಲಾನುಭವಿಗಳಾಗಿರುವ ಈ ತಲೆಮಾರಿನವರು ಹೋರಾಟವನ್ನು ಮರೆತಿರುವುದು ವಿಪರ್ಯಾಸದ ಸಂಗತಿ’ ಎಂದು ಬರಹಗಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಪ್ರಕಾಶನ ಹೊರತಂದಿರುವ ಶ್ರೀಧರ ಕೆ.ಎ. ಕೆಳದಿಪುರ ರಚಿಸಿರುವ ಗೇಣಿ ಹೋರಾಟ ಕುರಿತ ವಸ್ತುವುಳ್ಳ ‘ಎರಡು ಖಂಡುಗ’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಕೃಷಿಭೂಮಿಯ ಹಕ್ಕಿಗಾಗಿ ಗೇಣಿದಾರರ ಪರವಾಗಿ ನಡೆದ ಕಾಗೋಡು ಸತ್ಯಾಗ್ರಹದ ಫಲವಾಗಿ ಭೂ–ಸುಧಾರಣೆ ಕಾಯ್ದೆ ಜಾರಿಗೆ ಬಂದಿದೆ. ಇದರಿಂದ ಜೀತದಾರರಾಗಿದ್ದ ಗೇಣಿದಾರರು ಭೂಮಿಯ ಒಡೆಯರಾಗಲು ಸಾಧ್ಯವಾಯಿತು. ಹೀಗಾಗಿ ಈ ಸತ್ಯಾಗ್ರಹ ಎಷ್ಟು ಮಹತ್ವದ್ದು ಎಂಬುದನ್ನು ‘ಎರಡು ಖಂಡುಗ’ ಕಾದಂಬರಿ ತೆರೆದಿಟ್ಟಿದೆ ಎಂದು ವಿವರಿಸಿದರು.

‘ಕಾಗೋಡು ಸತ್ಯಾಗ್ರಹದ ನಂತರ ಭೂ ಸುಧಾರಣೆ ಕಾಯ್ದೆ ಅಸ್ತಿತ್ವಕ್ಕೆ ಬಂದಾಗ ಗೇಣಿದಾರರಿಗೆ ಭೂಮಿಯ ಹಕ್ಕು ಪಡೆಯಲು ಏನು ಮಾಡಬೇಕು ಎಂಬ ಅರಿವು ಇರಲಿಲ್ಲ. ರೈತರ ಮನೆ ಬಾಗಿಲಿಗೆ ಹೋಗಿ ಕಾಯ್ದೆಯ ವಿಷಯ ತಿಳಿಸಿ ಅವರಿಂದ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕು ದೊರಕುವಂತೆ ಮಾಡಿಸಿದ ದಿನಗಳು ಇಂದಿಗೂ ಹಚ್ಚ ಹಸಿರಾಗಿದೆ’ ಎಂದು ಸಮಾಜವಾದಿ ಮುಖಂಡ ಬಿ.ಆರ್. ಜಯಂತ್ ಹೇಳಿದರು.

‘ಮಲೆನಾಡು ಭಾಗದಲ್ಲಿ ಬಗರ್ ಹುಕುಂ ಸಾಗುವಳಿದಾರರ ಹಾಗೂ ಶರಾವತಿ ಸಂತ್ರಸ್ತರ ಸಮಸ್ಯೆ ಗಂಭೀರವಾಗಿದೆ. ಜನಪ್ರತಿನಿಧಿಗಳು ಈ ವರ್ಗದ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಲೇಜಿನ ಪ್ರಾಂಶುಪಾಲ ಜಿ. ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು.

ಲೇಖಕ ಶ್ರೀಧರ ಕೆ.ಎ. ಕೆಳದಿಪುರ, ಪ್ರಕಾಶಕ ಮೋಹನ್ ಕುಮಾರ್, ಕುಂಸಿ ಉಮೇಶ್, ಸುರೇಶ್ ಜಂಬಾನಿ, ಈಶ್ವರ ನಾಯ್ಕ್ ಕುಗ್ವೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-42-634558486

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.